Site icon Vistara News

IPL 2023: ಗೆಳೆಯ ಕೊಹ್ಲಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಎಬಿಡಿ; ವಿಡಿಯೊ ವೈರಲ್​

IPL 2023: ABD makes explosive statement about boyfriend Kohli; The video is viral

IPL 2023: ABD makes explosive statement about boyfriend Kohli; The video is viral

ಬೆಂಗಳೂರು: ಬಹುನಿರೀಕ್ಷಿತ 16ನೇ ಆವೃತ್ತಿಯ ಐಪಿಎಲ್(IPL 2023)​ ಟೂರ್ನಿಗಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಚಿನ್ನಸ್ವಾಮಿ ಕ್ರೀಡಾಂಗಣಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದೆ. ಆದರೆ ಆರ್​ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್(AB de Villiers)​ ಅವರು ವಿರಾಟ್​ ಕೊಹ್ಲಿ(virat kohli) ಬಗ್ಗೆ ನೀಡಿದ ಹೇಳಿಕೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕಳೆದ ಭಾನುವಾರ ಅನ್​ಬಾಕ್ಸ್​ ಆರ್​ಸಿಬಿ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೂ ಮುನ್ನ ನಡೆದ ಸಂದರ್ಶನವೊಂದರಲ್ಲಿ ಎಬಿಡಿ ಅವರು ಕ್ರಿಸ್​ ಗೇಲ್​(Chris Gayle) ಜತೆಗೆ ಕೊಹ್ಲಿ ವಿಚಾರವಾಗಿ ಮಾತನಾಡಿದ್ದಾರೆ. ಗೇಲ್‌ ಅವರು ಆರ್‌ಸಿಬಿ ಪಾಡ್‌ಕಾಸ್ಟ್‌ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ವಿರಾಟ್ ಕೊಹ್ಲಿಯನ್ನು ಮೊದಲ ಬಾರಿಗೆ ಭೇಟಿಯಾಗಿದ್ದಾಗ ನಿಮಗೇನು ಅನಿಸಿತ್ತು? ಎಂದು ಎಬಿಡಿಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಎಬಿ ಡಿವಿಲಿಯರ್ಸ್‌ ಇದೇ ಪ್ರಶ್ನೆಯನ್ನು ಈ ಹಿಂದೆಯೂ ಒಮ್ಮೆ ಎದುರಿಸಿದ್ದೆ. ಪ್ರಾಮಾಣಿಕವಾಗಿ ಹೇಳುವುದಾದದರೆ ನಾನು ಕೊಹ್ಲಿಯನ್ನು ಭೇಟಿಯಾಗುವ ಮುನ್ನ ಅವರು ಕೊಂಚ ಅಹಂಕಾರಿಯಂತೆ ಕಂಡು ಬಂದಿದ್ದರು ಎಂದು ಹೇಳಿದ್ದಾರೆ.

“ವಿರಾಟ್ ಕೊಹ್ಲಿಯನ್ನು ಮೊದಲ ಬಾರಿಗೆ ಭೇಟಿ ಮಾಡಿದಾಗ, ಆತ ಕೊಂಚ ಕೋಪಿಷ್ಟ ಹಾಗೂ ಅಹಂಕಾರಿ ಎಂದುಕೊಂಡಿದ್ದೆ. ಏಕೆಂದರೆ ಅವರು ಆಡುವ ಬೇಳೆ ಹಲವು ಬಾರಿ ಇತರ ತಂಡದ ಆಟಗಾರರೊಂದಿಗೆ ಕಿರಿಕ್​ ಮಾಡಿದ್ದರು. ಆದರೆ ದಿನಕಳೆದಂತೆ ಕೊಹ್ಲಿ ಜತೆ ಬೆರೆಯುತ್ತಿದ್ದಂತೆಯೇ, ಅವರ ಕುರಿತಾದ ತಮ್ಮ ನಿಲುವು ಬದಲಾಯಿತು. ಅವರ ಮೇಲೆ ನನಗೆ ಸಾಕಷ್ಟು ಗೌರವ ಮೂಡಿತು. ಅವರೊಬ್ಬ ಅದ್ಭುತ ವ್ಯಕ್ತಿ ಜತೆಗೆ ಉತ್ತಮ ಕ್ರಿಕೆಟಿಗ” ಎಂದು ಎಬಿಡಿ ಹೇಳಿದರು.

ಇದನ್ನೂ ಓದಿ IPL 2023: ಅನ್ ಸೋಲ್ಡ್ ಆಗಿದ್ದ ಸ್ಟೀವನ್​ ಸ್ಮಿತ್​ ಮತ್ತೆ ಐಪಿಎಲ್​ಗೆ ಎಂಟ್ರಿ

ವಿರಾಟ್​ ಕೊಹ್ಲಿ ಮತ್ತು ಎಬಿಡಿ ಉತ್ತಮ ಗೆಳೆಯರಾಗಿದ್ದಾರೆ. ಕೊಹ್ಲಿ ಅವರು ಫಾರ್ಮ್​ ಕಳೆದುಕೊಂಡಾಗ ಹಲವು ಟೀಕೆಗಳು ವ್ಯಕ್ತವಾಗಿತ್ತು. ಆದರೆ ಎಬಿಡಿ ಮಾತ್ರ ಕೊಹ್ಲಿಗೆ ಸದಾ ಬೆಂಬಲ ಸೂಚಿಸುತ್ತಿದ್ದರು. ಅದರಂತೆ ಕೊಹ್ಲಿ ಏನೇ ದಾಖಲೆ ಮಾಡಿದರೂ ಎಬಿಡಿ ಅವರು ಸಾಮಾಜಿಕ ಜಾಲತಾಣದ ಮೂಲಕ ಪ್ರತಿ ಬಾರಿಯೂ ಕೊಹ್ಲಿಗೆ ಹಾರೈಕೆ ಮತ್ತು ಕ್ರಿಕೆಟ್​ನಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಿಲಿ ಎಂದು ಪ್ರೇರೇಪಿಸುತ್ತಲೇ ಇರುತ್ತಾರೆ.

ಇದನ್ನೂ ಓದಿ IPL 2023: ವಿಶ್ವದ ಕ್ಯಾಶ್‌ ರಿಚ್‌ ಐಪಿಎಲ್ ಟೂರ್ನಿಗೆ ದಿನಗಣನೆ; ಈ ಬಾರಿಯ ವಿಶೇಷತೆ ಏನು?

ಮಾರ್ಚ್‌ 26 ಭಾನುವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದೇ ಕಾರ್ಯಕ್ರಮದಲ್ಲಿ ಆರ್‌ಸಿಬಿ ಪರ ಕೆಲವು ವರ್ಷಗಳ ಕಾಲ ಅದ್ಭುತ ಪ್ರದರ್ಶನ ತೋರಿದ್ದ ಎಬಿ ಡಿವಿಲಿಯರ್ಸ್‌ ಹಾಗೂ ಕ್ರಿಸ್ ಗೇಲ್‌ ಅವರಿಗೆ ಹಾಲ್ ಆಫ್‌ ಫೇಮ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Exit mobile version