Site icon Vistara News

IPL 2023: ಆಕಾಶ್​ ಚೋಪ್ರಾಗೆ ಕೊರೊನಾ ಪಾಸಿಟಿವ್​; ಐಪಿಎಲ್ ಆಟಗಾರರಿಗೆ ಆತಂಕ​

IPL 2023: Akash Chopra Tests Corona Positive; IPL players are worried

IPL 2023: Akash Chopra Tests Corona Positive; IPL players are worried

ಮುಂಬಯಿ: ಕೊರೊನಾದಿಂದ ಮುಕ್ತಾವಾಗಿ ನಾಲ್ಕು ವರ್ಷಗಳ ಬಳಿಕ ಅದ್ಧೂರಿಯಾಗಿ ಉದ್ಘಾಟನಾ ಕಾರ್ಯಕ್ರಮದ ಮೂಲಕ ಆರಂಭ ಕಂಡ 16ನೇ ಆವೃತ್ತಿಯ ಐಪಿಎಲ್​(IPL 2023) ಟೂರ್ನಿ ಸುಗಮವಾಗಿ ಸಾಗುತ್ತಿದೆ. ಆದರೆ ಇದೀಗ ಮತ್ತೆ ಟೂರ್ನಿಗೆ ಕೋವಿಡ್​ ಆತಂಕ ಎದುರಾಗಿದೆ. ಐಪಿಎಲ್ ಪಂದ್ಯದ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾಗೆ(Aakash Chopra) ಕೊರೊನಾ ಕಾಣಿಸಿಕೊಂಡಿದೆ.

ಕೊರೊನಾ ಪಾಸಿಟಿವ್ ಆದ ವಿಚಾರವನ್ನು​ ಆಕಾಶ್ ಚೋಪ್ರಾ ಅವರು ಟ್ವಿಟರ್ ಮೂಲಕ ತಿಳಿಸಿದ್ದಾರೆ. “ಕೋವಿಡ್ ವೈರಸ್‌ಗೆ ಕಾಟ್ ಅಂಡ್ ಬೋಲ್ಡ್ ಆಗಿದ್ದೇನೆ. ಸಿ ವೈರಸ್ ಮತ್ತೆ ಬಾಧಿಸಿದೆ. ಆದರೆ ಆತಂಕ ಪಡುವ ಅಗತ್ಯವಿಲ್ಲ ನಾನು ಆರೋಗ್ಯವಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ಒಮ್ಮೆ ಆರೋಗ್ಯ ಪರಿಶೀಲನೆ ಮಾಡಿಸಿಕೊಳ್ಳಿ. ಕೆಲ ದಿನ ನಾನು ಕಮೆಂಟರಿ ಕರ್ತವ್ಯದಿಂದ ದೂರ ಉಳಿಯುತ್ತಿದ್ದೇನೆ. ಮತ್ತಷ್ಟು ಶಕ್ತಿಯುತವಾಗಿ ಮರಳುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಜಿಯೋ ಸಿನೆಮಾ ಕಮೆಂಟರಿ ತಂಡದಲ್ಲಿರುವ ಆಕಾಶ್ ಚೋಪ್ರಾ, ಇತರ ಕೆಲ ಕ್ರಿಕೆಟ್ ಕಾರ್ಯಕ್ರಮಗಳನ್ನೂ ನಡೆಸಿಕೊಡುತ್ತಿದ್ದಾರೆ. ಸದ್ಯ ಆಕಾಶ್​ ಚೋಪ್ರಾ ಅವರು ಸಂಪೂರ್ಣ ಗುಣಮುಖರಾಗುವವರಗೆ ಟೂರ್ನಿಯಿಂದ ದೂರ ಉಳಿಯುವಂತೆ ಸೂಚಿಸಿದೆ. ಜತೆಗೆ ಎಲ್ಲ ಸಿಬ್ಬಂದಿಗಳು ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯಾವಾಗಿ ಪಾಲಿಸುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ IPL 2023: ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್

ಈಗಾಗಲೇ ಬಿಸಿಸಿಐ ಎಲ್ಲ ಫ್ರಾಂಚೈಸಿಗಳು ಕೊರೊನಾ(COVID-19) ಮಾರ್ಗಸೂಚಿಗೆ ಬದ್ಧವಾಗಿರಬೇಕು ಎಂದು ಬಿಸಿಸಿಐ(BCCI) ಸ್ಪಷ್ಟ ಸಂದೇಶ ನೀಡಿದೆ. ಅದರಂತೆ ಮಾರ್ಗಸೂಚಿಯ ಪ್ರಕಾರ ಐಪಿಎಲ್​ ಆಡುವ ವೇಳೆ ಯಾವುದೇ ಆಟಗಾರನಿಗೆ ಅಥವಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದರೆ ಕೂಡಲೇ ಅವರು ತಂಡವನ್ನು ತೊರೆಯಬೇಕು. ಜತೆಗೆ ಒಂದು ವಾರಗಳ ಕಾಲ ಕ್ವಾರಂಟೈನ್​ವಾಸದಲ್ಲಿರಬೇಕು.

ಕೋವಿಡ್ ಪಾಸಿಟಿವ್ ಆದ ಆಟಗಾರನ ಟೆಸ್ಟ್ ರಿಪೋರ್ಟ್​ ಐದನೇ ದಿನ ನೆಗೆಟಿವ್ ಬಂದರೆ, ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. 24 ಗಂಟೆಯೊಳಗೆ ನಡೆಯಲಿರುವ ಎರಡನೇ ಟೆಸ್ಟ್​ನ ವರದಿಯು ನೆಗೆಟಿವ್ ಬಂದರೆ, ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ IPL 2023 : ಧೋನಿಯನ್ನು ನೋಡಿ ಕಲಿಯಿರಿ; ಯುವ ಆಟಗಾರರಿಗೆ ಕಿವಿ ಮಾತು ಹೇಳಿದ ಉತ್ತಪ್ಪ, ರೈನಾ

ಈ ಬಾರಿ ಬಯೋ ಬಬಲ್​ ಇಲ್ಲದಿದ್ದರೂ ಆಟಗಾರರು ಅಭಿಮಾನಿಗಳೊಂದಿಗೆ ಸಂವಹನವನ್ನು ಮಿತಿಗೊಳಿಸಬೇಕು ಎಂದು ಆಟಗಾರರಿಗೆ ಬಿಸಿಸಿಐ ಸಲಹೆ ನೀಡಿದೆ. ಎಲ್ಲ ಆಟಗಾರರ ಮೇಲು ತಂಡಗಳ ವೈದ್ಯರು ಹೆಚ್ಚಿನ ನಿಗಾ ಇರಿಸಬೇಕು. ಒಂದೊಮ್ಮೆ ಆಟಗಾರರಲ್ಲಿ ಯಾವುದೇ ರೋಗ ಲಕ್ಷಣ ಕಂಡು ಬಂದರೂ ಅವರನ್ನು ತಕ್ಷಣ ಪ್ರತ್ಯೇಕ ವಾಸದಲ್ಲಿರುವಂತೆ ಮಾಡಬೇಕು ಎಂದು ಬಿಸಿಸಿಐ ಎಲ್ಲ ಫ್ರಾಂಚೈಸಿಗಳಿಗೆ ಸೂಚನೆ ನೀಡಿದೆ.

Exit mobile version