Site icon Vistara News

IPL 2023: ಆಕಾಶ್ ಮಧ್ವಾಲ್ ಐಪಿಎಲ್​ ಪಯಣವೇ ರೋಚಕ; ಇಲ್ಲಿದೆ ಸಂಪೂರ್ಣ ಮಾಹಿತಿ

Mumbai Indian bowler Akash Madhwal banned for local tournaments

#image_title

ಚೆನ್ನೈ: ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧದ ಪಂದ್ಯದಲ್ಲಿ ಘಾತಕ ಬೌಲಿಂಗ್ ದಾಳಿ​ ನಡೆಸಿ ಗಮನಸೆಳೆದ ಆಕಾಶ್ ಮಧ್ವಾಲ್ ಅವರ ಕ್ರಿಕೆಟ್​ ಪಯಣವೇ ಒಂದು ರೋಚಕ. ಆರ್​ಸಿಬಿ ತಂಡದ ನೆಟ್​ ಬೌಲರ್​ ಆಗಿದ್ದ ಇವರು ಐಪಿಎಲ್​ಗೆ ಹೇಗೆ ಪದಾರ್ಪಣೆ ಮಾಡಿದರು ಎಂಬ ಸ್ಟೋರಿ ಇಲ್ಲಿದೆ.

ಆಕಾಶ್ ಮೊದಲು ಟೆನಿಸ್​​ ಬಾಲ್​ ಕ್ರಿಕೆಟ್​ ಆಡುತ್ತಿದ್ದರು. 2019ರಲ್ಲಿ ಇವರ ಬೌಲಿಂಗ್​ ಕಂಡ ಆಗಿನ ಉತ್ತರಾಖಂಡ್ ಕೋಚ್ ವಾಸಿಮ್ ಜಾಫರ್ ಅವರು ಸ್ಟಿಚ್​ ಬಾಲ್​ ಆಡುವಂತೆ ಸಲಹೆ ನೀಡಿದ್ದರು. ಜತೆಗೆ ಅವರಿಗೆ ಕ್ರಿಕೆಟ್​ ಅಭ್ಯಾಸದಲ್ಲಿ ತೊಡಗಿಕೊಳ್ಳಲು ಉತ್ತರಾಖಂಡ್ ತಂಡದಲ್ಲಿ ನೆಟ್​ ಬೌಲರ್​ ಆಗಿ ನೇಮಕಮಾಡಲಾಯಿತು. ಇಲ್ಲಿ ಪಳಗಿದ ಅವರು 2021ರಲ್ಲಿ ಆರ್​ಸಿಬಿ ತಂಡದ ನೆಟ್ ಬೌಲರ್​ ಆಗಿ ಆಯ್ಕೆಯಾದರು.

2022ರ 15ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ಆಕಾಶ್ ಮಧ್ವಾಲ್ ಅವರಿಗೆ ಅದೃಷ್ಟವೊಂದು ಖುಲಾಯಿಸಿತು. ಸೂರ್ಯಕುಮಾರ್​ ಯಾದವ್​ ಅವರು ಗಾಯಗೊಂಡ ಕಾರಣ ಅವರ ಬದಲಿಯಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾದರು. 2023ರ ಹರಾಜಿನಲ್ಲಿ 20 ಲಕ್ಷ ರೂ. ಗೆ ಮುಂಬೈ ತಂಡದ ಭಾಗವಾದ ಅವರು ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಇದೀಗ ತಂಡದ ಕೀ ಬೌಲರ್​ ಆಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ IPL 2023: ಆರೆಂಜ್-ಪರ್ಪಲ್ ಕ್ಯಾಪ್​ಗೆ ಯಾರ ಮಧ್ಯೆ ಪೈಪೋಟಿ; ಇಲ್ಲಿದೆ ಮಾಹಿತಿ

ಎಂಜಿನಿಯರಿಂಗ್ ಓದಿರುವ ಮಧ್ವಲ್ ಅವರು ಐಪಿಎಲ್ ಆಡಿದ ಉತ್ತರಾಖಂಡ್ ರಾಜ್ಯದ ಮೊದಲ ಕ್ರಿಕೆಟಿಗ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಒಂದೊಮ್ಮೆ ಸೂರ್ಯಕುಮಾರ್​ ಗಾಯಗೊಳ್ಳದೇ ಹೋಗಿದ್ದರೆ ಅವರಿಗೆ ಐಪಿಎಲ್​ ಭಾಗ್ಯ ಇರುತ್ತಿರಲಿಲ್ಲವೋ ಏನೋ?, ಅದೃಷ್ಟ ಎನ್ನುವುದು ಯಾವಾಗ ಬರುತ್ತದೆ ಎಂದು ಹೇಳುವುದು ಕಷ್ಟ. ಆದರೆ ಬಂದ ಅದೃಷ್ಟವನ್ನು ಯಾವ ರೀತಿ ಬಳಸಿಕೊಳ್ಳಬೇಕು ಎನ್ನುವುದಕ್ಕೆ ಆಕಾಶ್ ಮಧ್ವಾಲ್ ಅವರೇ ಉತ್ತಮ ನಿದರ್ಶನ.

ಲಕ್ನೋ ವಿರುದ್ಧದ ಪಂದ್ಯದಲ್ಲಿ ಆಕಾಶ್ ಮಧ್ವಾಲ್ ಅವರು 3.3 ಓವರ್​ ಎಸೆದು ಕೇವಲ 5 ರನ್​ ವೆಚ್ಚದಲ್ಲಿ ಪ್ರಮುಖ 5 ವಿಕೆಟ್​ ಕಬಳಿಸಿದರು. ಇವರ ಈ ಸಾಧನೆ ಕಂಡು ಭಾರತ ಕ್ರಿಕೆಟ್​ ತಂಡದ ಮಾಜಿ ದಿಗ್ಗಜ ಬೌಲರ್​ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು ಶೀಘ್ರದಲ್ಲೇ ಭಾರತ ತಂಡಕ್ಕೆ ನಿಮ್ಮ ಆಗಮನವಾಗಲಿದೆ ಎಂದು ಹೇಳಿದ್ದಾರೆ. ಜಸ್​ಪ್ರೀತ್​ ಬುಮ್ರಾ ಕೂಡ ಮುಂಬೈ ತಂಡದ ನೆಟ್​ ಬೌಲರ್​ ಆಗಿದ್ದರು. ಬಳಿಕ ಮುಂಬೈ ಪರ ಆಡಿ ಇದೀಗ ಟೀಮ್​ ಇಂಡಿಯಾದ ಪ್ರಧಾನ ಮತ್ತು ವಿಶ್ವದ ನಂ.1 ಬೌಲರ್​ ಸ್ಥಾನವನ್ನು ಪಡೆದಿದ್ದರು. ಇವರಂತೆ ಆಕಾಶ್ ಮಧ್ವಾಲ್ ಕೂಡ ಬೆಳೆಯಲಿ ಎನ್ನುವುದು ಕ್ರಿಕೆಟ್​ ಪಂಡಿತರ ಆಶಯವಾಗಿದೆ.

Exit mobile version