Site icon Vistara News

IPL 2023: ಪ್ಲೇ ಆಫ್​ಗೇರಲು ಚೆನ್ನೈಗೆ ಇನ್ನೊಂದೆ ಹೆಜ್ಜೆ ಬಾಕಿ; ಕೆಕೆಆರ್​ ಎದುರಾಳಿ

KKR VS CSK

ಚೆನ್ನೈ: ಈಗಾಗಲೇ ಪ್ಲೇ ಆಫ್​ ಟಿಕೆಟ್ ಬಹುತೇಕ ಖಚಿತಪಡಿಸಿರುವ ಚೆನ್ನೈ ಸೂಪರ್​ ಕಿಂಗ್ಸ್ ಇದನ್ನು ಅಧಿಕೃತ ಪಡಿಸಿಕೊಳ್ಳಲು​ ಭಾನುವಾರ ನಡೆಯುವ ದ್ವಿತೀಯ ಐಪಿಎಲ್​ ಮುಖಾಮುಖಿಯಲ್ಲಿ ಕೆಕೆಆರ್​ ವಿರುದ್ಧ ಕಣಕ್ಕಿಳಿಯಲಿದೆ. ಒಂದೊಮ್ಮೆ ಕೆಕೆಆರ್​ ಸೋತರೆ ಈ ರೇಸ್​ನಿಂದ ಅಧಿಕೃತವಾಗಿ ಹೊರಬೀಳಲಿದೆ.

ಚೆನ್ನೈ ಸದ್ಯ 15 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಕೆಕೆಆರ್​ ಸವಾಲು ಗೆದ್ದರೆ 17 ಅಂಕದೊಂದಿಗೆ ಅಗ್ರಸ್ಥಾನಕ್ಕೇರಲಿದೆ. ಇದು ಚೆನ್ನೈಯಲ್ಲಿಯೇ ನಡೆಯುವ ಪಂದ್ಯವಾದ ಕಾರಣ ತವರಿನಲ್ಲಿ ತಾನೇಷ್ಟು ಬಲಿಷ್ಠ ಎಂಬುವುದನ್ನು ಚೆನ್ನೈ ಈಗಾಗಲೇ ತೋರಿಸಿಕೊಟ್ಟಿದೆ. ಹೀಗಾಗಿ ಈ ಪಂದ್ಯದಲ್ಲಿ ಧೋನಿ ಪಡೆಯೇ ನೆಚ್ಚಿನ ತಂಡವಾಗಿ ಕಾಣಿಸಿಕೊಂಡಿದೆ.

ಚೆನ್ನೈಯ ಎಂ.ಎ ಚಿದಂಬರಂ ಕ್ರೀಡಾಂಗಣದ ಪಿಚ್​ ಬೌಲಿಂಗ್​ ಟ್ರ್ಯಾಕ್​ ಆಗಿದ್ದು ಇಲ್ಲಿ 150 ರನ್​ ಬಾರಿಸಿದರೂ ಚೇಸ್​ ಮಾಡುವುದು ಅಷ್ಟು ಸುಲಭವಲ್ಲ. ಅದರಲ್ಲೂ ಸ್ಪಿನ್​ ಬೌಲಿಂಗ್​ಗೆ ಇಲ್ಲಿ ಹೆಚ್ಚಿನ ಅವಕಾಶ. ಹೀಗಾಗಿ ಉಭಯ ತಂಡಗಳು ಸ್ಪಿನ್​ ಬೌಲಿಂಗ್​ಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ. ಚೆನ್ನೈ ತಂಡದ ರವೀಂದ್ರ ಜಡೇಜಾ ಇಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಬ್ಯಾಟಿಂಗ್​ನಲ್ಲಿಯೂ ಚೆನ್ನೈ ಬಲಿಷ್ಠವಾಗಿದೆ. ಆರಂಭಿಕ ಆಟಗಾರರಾದ ಗಾಯಕ್ವಾಡ್​, ಕಾನ್ವೆ ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ ಉತ್ತಮ ಬ್ಯಾಟಿಂಗ್​ ನಡೆಸುತ್ತಿದ್ದಾರೆ. ಆದರೆ ಮೊಯಿನ್​ ಅಲಿ ಅವರು ಇದುವರೆಗೂ ನಿರೀಕ್ಷಿತ ಮಟ್ಟದ ಬ್ಯಾಟಿಂಗ್​ ನಡೆಸಿಲ್ಲ. ಗಾಯದಿಂದ ಚೇತರಿಸಿಕೊಂಡು ಕಣಕ್ಕಿಳಿದಿರುವ ದೀಪಕ್​ ಚಹರ್​ ಅವರು ಪ್ರತಿ ಪಂದ್ಯದಲ್ಲಿಯೂ ಘಾತಕವಾಗಿ ಪರಿಣಮಿಸುತ್ತಿದ್ದಾರೆ.

ಕೆಕೆಆರ್​ ತಂಡ ಬಲಿಷ್ಠ ಆಟಗಾರರನ್ನು ಹೊಂದಿದ್ದರೂ ರಿಂಕು ಸಿಂಗ್​ ಮತ್ತು ವೆಂಕಟೇಶ್​ ಅಯ್ಯರ್​ ಅವರನ್ನು ಹೊರತುಪಡಿಸಿ ಉಳಿದ ಆಟಗಾರರು ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುತ್ತಿಲ್ಲ. ಆ್ಯಂಡ್ರೆ ರಸೆಲ್​ ಬಡಬಡನೆ ಒಂದೆರಡು ಸಿಕ್ಸರ್​ ಬಾರಿಸಿ ಪೆವಿಲಿಯನ್​ ಪರೇಡ್​ ಮಾಡುತ್ತಿದ್ದಾರೆ. ಸುನೀಲ್​ ನಾರಾಯಣ್​ ಕೂಡ ಈ ಬಾರಿ ಹೇಳಿಕೊಳ್ಳುವಷ್ಟರ ಮಟ್ಟಿಗೆ ಬೌಲಿಂಗ್​ ನಡೆಸಿಲ್ಲ. ಅವರು ಪ್ರತಿ ಪಂದ್ಯದಲ್ಲಿಯೂ ದುಬಾರಿಯಾಗುತ್ತಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್: ಜೇಸನ್ ರಾಯ್, ರಹ್ಮಾನುಲ್ಲಾ ಗುರ್ಬಾಜ್ (ವಿಕೆಟ್​ ಕೀಪರ್​), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

ಇದನ್ನೂ ಓದಿ IPL 2023: ರಾಯಲ್ಸ್​ ಬ್ಯಾಟಲ್ಸ್​ನಲ್ಲಿ ಯಾರಿಗೆ ಗೆಲುವು; ಆರ್​ಸಿಬಿ-ರಾಜಸ್ಥಾನ್​ ಮುಖಾಮುಖಿ

ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಅಜಿಂಕ್ಯ ರಹಾನೆ, ಮೊಯೀನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂ.ಎಸ್ ಧೋನಿ (ನಾಯಕ), ದೀಪಕ್ ಚಾಹರ್, ಮಥೀಶಾ ಪತಿರಾನಾ, ತುಷಾರ್ ದೇಶ್​ಪಾಂಡೆ, ಮಹೇಶ್ ತೀಕ್ಷಣ.

Exit mobile version