Site icon Vistara News

IPL 2023: ಡೆಲ್ಲಿ-ಕೆಕೆಆರ್​ ವಿರುದ್ಧದ ಪಂದ್ಯ ವೀಕ್ಷಿಸಿದ ಆ್ಯಪಲ್‌ ಕಂಪೆನಿಯ ಸಿಇಒ ಟಿಮ್‌ ಕುಕ್‌

IPL 2023: Apple CEO Tim Cook watched the match against Delhi-KKR

IPL 2023: Apple CEO Tim Cook watched the match against Delhi-KKR

ನವದೆಹಲಿ: ಆ್ಯಪಲ್‌ ಕಂಪೆನಿಯ ಸಿಇಒ ಟಿಮ್‌ ಕುಕ್‌ (Apple CEO Tim cook) ಅವರು ಭಾರತ ಪ್ರವಾಸದಲ್ಲಿದ್ದಾರೆ. ಇದೇ ವೇಳೆ ಅವರು ವಿಶ್ವದ ಕ್ಯಾಶ್​ ರಿಚ್​ ಕ್ರಿಕೆಟ್​ ಲೀಗ್​ ಐಪಿಎಲ್​ ಪಂದ್ಯ ವೀಕ್ಷಿಸಿದ್ದಾರೆ. ಗುರುವಾರ ನಡೆದ ಡೆಲ್ಲಿ ಮತ್ತು ಕೆಕೆಆರ್​ ವಿರುದ್ಧದ ಪಂದ್ಯಕ್ಕೆ ಅವರು ಕೂಡ ಸಾಕ್ಷಿಯಾಗಿದ್ದರು. ಅವರು ಪಂದ್ಯ ವೀಕ್ಷಿಸಿದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕಳೆದ ಸೋಮವಾರ ಭಾರತದ ವಾಣಿಜ್ಯ ರಾಜಧಾನಿ ಮುಂಬೈ ನಗರಿಯಲ್ಲಿ ದೇಶದ ಮೊದಲ ಆ್ಯಪಲ್ ಬಿಕೆಸಿ ಸ್ಟೋರ್ ತೆರೆದ ಬಳಿಕ ದಿಲ್ಲಿಯಲ್ಲಿ ಎರಡನೇ ಮಳಿಗೆಗೆ ಗುರುವಾರ ಟಿಮ್‌ ಕುಕ್‌ ಚಾಲನೆ ನೀಡಿದ್ದರು. ಇದೇ ವೇಳೆ ಅವರು ದೆಹಲಿಯ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಕೆಕೆಆರ್​ ಪಂದ್ಯವನ್ನು ವೀಕ್ಷಿಸಿದ್ದಾರೆ. ಇವರ ಜತೆ ಬಾಲಿವುಡ್​ ನಟಿ ಸೋನಂ ಕಪೂರ್ ದಂಪತಿ ಕೂಡ ಪಂದ್ಯ ವೀಕ್ಷಣೆ ಮಾಡಿದ್ದಾರೆ. ಸೋನಂ ಕಪೂರ್ ಅವರು ಟಿಮ್‌ ಕುಕ್‌ ಜತೆಗೆ ಪಂದ್ಯ ವೀಕ್ಷಿಸುತ್ತಿರುವ ಫೋಟೊವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ IPL 2023 : ಕಳುವಾಗಿದ್ದ ವಾರ್ನರ್ ಕ್ರಿಕೆಟ್​ ಕಿಟ್ ಪತ್ತೆ, ಆದರೂ ಕೆಲವೊಂದು ಪರಿಕರಗಳು ನಾಪತ್ತೆ!

ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಮಾಲಿಕ ಪಾರ್ಥ್ ಜಿಂದಾಲ್(parth jindal) ಅವರು ಟಿಮ್‌ ಕುಕ್‌ ಅವರಿಗೆ ತಮ್ಮ ತಂಡದ ಎಲ್ಲ ಆಟಗಾರರ ಸಹಿ ಹಾಕಿದ ಬ್ಯಾಟ್​ ಒಂದನ್ನು ಸ್ಮರಣಿಕೆಯಾಗಿ ನೀಡಿದ್ದಾರೆ. ಈ ಫೋಟೊವನ್ನು ಅವರು ಟ್ವಿಟರ್​ನಲ್ಲಿ ಪ್ರಕಟಿಸಿದ್ದಾರೆ.

ಐಪಿಎಲ್​ ಕುರಿತು ಮಾತನಾಡಿದ ಟಿಮ್‌ ಕುಕ್‌ ಅವರು ನಾನು ಐಪಿಎಲ್​ ಬಗ್ಗೆ ಕೇಳಿದ್ದೆ ಆದರೆ ಪಂದ್ಯ ನೋಡುತ್ತಿರುವುದು ಇದೇ ಮೊದಲು. ಭಾರತದಲ್ಲಿ ಕ್ರಿಕೆಟ್​ಗೆ ಇರುವಷ್ಟು ಬೆಂಬಲ ಬೇರೆಲ್ಲೂ ಕಾಣಸಿಗದು. ಇದೊಂದು ನನ್ನ ಜೀವನದ ಸ್ಮರಣೀಯ ನೆನಪುಗಳಲ್ಲಿ ಒಂದಾಗಿರಲಿದೆ. ಇದೇ ರೀತಿ ಟೂರ್ನಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ನಡೆಯುವಂತಾಗಲಿ ಎಂದು ಹಾರೈಸಿದರು.

ನಟಿ ಮಾಧುರಿ ದೀಕ್ಷಿತ್​ ಜತೆ ವಡಾ ಪಾವ್‌ ಸವಿದಿದ್ದ ಕುಕ್​

ಮುಂಬೈ ನಗರಿಯಲ್ಲಿ ದೇಶದ ಮೊದಲ ಆ್ಯಪಲ್ ಬಿಕೆಸಿ ಸ್ಟೋರ್ (Apple BKC Store) ಆರಂಭಿಸಿದ ಬಳಿಕ ಟಿಮ್‌ ಕುಕ್‌ ಅವರು ಮಾಧುರಿ ದೀಕ್ಷಿತ್‌ ಜತೆ ವಡಾ ಪಾವ್‌ ಸವಿದಿದ್ದರು. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಮಾಧುರಿ ದೀಕ್ಷಿತ್‌ ಅವರು ನೀಡಿದ ಈ ವಡಾ ಪಾವ್​ ಟ್ರೀಟ್​ಗೆ ಪ್ರತಿಕ್ರಿಯಿಸಿದ್ದ ಟಿಮ್‌ ಕುಕ್‌, “ಇದೇ ಮೊದಲ ಬಾರಿಗೆ ನನಗೆ ವಡಾ ಪಾವ್‌ ಪರಿಚಯಿಸಿದ ಮಾಧುರಿ ದೀಕ್ಷಿತ್‌ ಅವರಿಗೆ ಧನ್ಯವಾದಗಳು. ವಡಾ ಪಾವ್‌ ರುಚಿಕಟ್ಟಾಗಿತ್ತು” ಎಂದು ಹೇಳಿದ್ದರು.

Exit mobile version