Site icon Vistara News

IPL 2023: ಲಕ್ನೋ ಪಂದ್ಯಕ್ಕೂ ಮುನ್ನ ಅರ್ಜುನ್​ ತೆಂಡೂಲ್ಕರ್​ಗೆ ನಾಯಿ ಕಡಿತ

arjun tendulkar

ಮುಂಬಯಿ: ಪ್ಲೇ ಆಫ್​ ಪ್ರವೇಶದ ಮಹತ್ವದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡ ಇಂದು(ಮಂಗಳವಾರ) ನಡೆಯುವ ಐಪಿಎಲ್(IPL 2023)​ ಮುಖಾಮುಖಿಯಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಕಣಕ್ಕಿಳಿಯಲಿದೆ. ಆದರೆ ಪಂದ್ಯಕ್ಕೂ ಮುನ್ನ ಅರ್ಜುನ್​ ತೆಂಡೂಲ್ಕರ್​ ಅವರು ತಮಗೆ ನಾಯಿ ಕಚ್ಚಿದ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಮುಂಬೈ ಇಂಡಿಯನ್ಸ್​ ಮತ್ತು ಲಕ್ನೋ ಸೂಪರ್​ ಜೈಂಟ್ಸ್​ ತಂಡಗಳು ಲಕ್ನೋದ ಸವಾಯ್​ ಮಾನ್​ಸಿಂಗ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ವಿಶೇಷ ಎಂದರೆ ಪ್ರಸಕ್ತ ಋತುವಿನಲ್ಲಿ ಉಭಯ ತಂಡಗಳ ಮೊದಲ ಮುಖಾಮುಖಿ ಇದಾಗಿದೆ. ಸದ್ಯ ಎರಡೂ ತಂಡಗಳು 12 ಪಂದ್ಯಗಳನ್ನು ಆಡಿದ್ದು ಮುಂಬೈ 14 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದರೆ, ಲಕ್ನೋ 13 ಅಂಕಗಳೊಂದಿಗೆ 4ನೇ ಸ್ಥಾನಿಯಾಗಿದೆ ಪ್ಲೇ ಆಫ್​ ಟಿಕೆಟ್​ ಗಿಟ್ಟಿಸಿಕೊಳ್ಳಬೇಕಾದರೆ ಇತ್ತಂಡಗಳಿಗೂ ಇಲ್ಲಿ ಗೆಲುವು ಅತ್ಯಗತ್ಯ.

ಈ ಪಂದ್ಯಕ್ಕೆ ಉಭಯ ತಂಡಗಳ ಆಟಗಾರರು ಭರ್ಜರಿ ತಾಲೀಮು ನಡೆಸುತ್ತಿದ್ದಾರೆ. ಇದೇ ವೇಳೆ ಟೀಮ್​ ಇಂಡಿಯಾದ ಮಾಜಿ ಆಟಗಾರ ಸಚಿನ್​ ತೆಂಡೂಲ್ಕರ್​ ಅವರ ಮಗ ಅರ್ಜುನ್​ ತೆಂಡೂಲ್ಕರ್​ ಅವರು ತಮಗೆ ನಾಯಿ ಕಚ್ಚಿರುವ ವಿವಾರವನ್ನು ತಿಳಿಸಿದ್ದಾರೆ. ಲಕ್ನೋ ತಂಡದ ಬೌಲರ್​ಗಳಾದ ಯುಧ್ವೀರ್ ಸಿಂಗ್ ಮತ್ತು ಮೊಹ್ಸೀನ್ ಖಾನ್ ಜತೆಗೆ ಮಾತನಾಡುವ ವೇಳೆ ಅರ್ಜುನ್ ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಈ ವಿಡಿಯೊವನ್ನು ಲಕ್ನೋ ಸೂಪರ್​ ಜೈಂಟ್ಸ್​ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ IPL 2023: ಧೋನಿ ಆಟೋಗ್ರಾಫ್​ ಪಡೆದ ಬಳಿಕ ಗವಾಸ್ಕರ್ ಹೇಳಿದ ಮಾತುಗಳೇನು?

16ನೇ ಆವೃತ್ತಿಯ ಐಪಿಎಲ್ ​ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ ಅರ್ಜುನ್​ ಮುಂಬೈ ಇಂಡಿಯನ್ಸ್​ ಪರ ಈ ವರೆಗೆ ನಾಲ್ಕು ಪಂದ್ಯಗಳನ್ನು ಆಡಿದ್ದಾರೆ. ಕಳೆದ ಕೆಲ ಪಂದ್ಯಗಳಿಂದ ಅವರು ಹೊರಗುಳಿದಿದ್ದರು. ಸದ್ಯ ಅವರು ನಾಲ್ಕು ಪಂದ್ಯಗಳಲ್ಲಿ 3 ವಿಕೆಟ್​ ಪಡೆದಿದ್ದಾರೆ. ಮಂಗಳವಾರ ರಾತ್ರಿ ನಡೆಯುವ ಲಕ್ನೋ ವಿರುದ್ಧದ ಪಂದ್ಯದಲ್ಲಿ ಅರ್ಜುನ್​ ಆಡುವ ಸಾಧ್ಯತೆ ಇದೆ.

Exit mobile version