Site icon Vistara News

IPL 2023 : ಐಪಿಎಲ್​ 2023ನೇ ಆವೃತ್ತಿಯ ಯಾವ ಪ್ರಶಸ್ತಿ ಯಾರಿಗೆ? ಗಿಲ್‌ಗೆ ಯಾವ ಕ್ಯಾಪ್‌?

IPL 2023 award winners

#image_title

ಅಹಮದಾಬಾದ್​​: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಫೈನಲ್​ನಲ್ಲಿ (IPL 2023) ಗೆದ್ದ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಟ್ರೋಫಿ ಗೆದ್ದಿದೆ. ಈ ಮೂಲಕ ಐಪಿಎಲ್​ ಇತಿಹಾಸದಲ್ಲಿ 5ನೇ ಬಾರಿ ಚಾಂಪಿಯನ್​ಪಟ್ಟ ಅಲಂಕರಿಸಿದ ದಾಖಲೆ ಮಾಡಿದೆ. ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿದ ಸಿಎಸ್ ಕೆ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.

ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಗುಜರಾತ್​​ ನಿಗದಿತ 20 ಓವರ್​​ಗಳಲ್ಲಿ ನಾಲ್ಕು ವಿಕೆಟ್​ ನಷ್ಟಕ್ಕೆ 214 ರನ್​ ಬಾರಿಸಿತು. ಚೆನ್ನೈ ಚೇಸಿಂಗ್ ಆರಂಭಿಸುವ ಹೊತ್ತಿನಲ್ಲಿ ಮಳೆ ಸುರಿಯಿತು. ಡಕ್​ವರ್ತ್​ ಲೂಯಿಸ್​ ನಿಯಮದ ಪ್ರಕಾರ 15 ಓವರ್​​ಗಳಲ್ಲಿ 171 ರನ್ ಚೇಸ್​ ಮಾಡುವ ಗುರಿಯನ್ನು ಚೆನ್ನೈಗೆ ನೀಡಲಾಯಿತು. ಅಂತೆಯೇ ಕೊನೇ ಎರಡು ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸುವ ಮೂಲಕ ಸಿಎಸ್​ಕೆ ಚಾಂಪಿಯನ್​ಪಟ್ಟ ಅಲಂಕರಿಸಿತು. ಈ ಗೆಲುವಿನೊಂದಿಗೆ ಸಿಎಸ್ಕೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ಮುಂಬೈ ಇಂಡಿಯನ್ಸ್ ತಂಡದ ದಾಖಲೆಯನ್ನು ಸರಿಗಟ್ಟಿದೆ. ಫೈನಲ್​ನಲ್ಲಿ 25 ಎಸೆತಗಳಲ್ಲಿ 47 ರನ್ ಗಳಿಸಿದ ಸಿಎಸ್​ಕೆ ತಂಡದ ಡೆವೊನ್ ಕಾನ್ವೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: IPL 2023: ಧೋನಿ ಐಪಿಎಲ್​ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸೆಹವಾಗ್; ಏನದು?

20 ಎಸೆತಗಳಲ್ಲಿ 39 ರನ್ ಗಳಿಸಿದ ಶುಬ್ಮನ್ ಗಿಲ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಹಾಲಿ ಆವೃತ್ತಿಯಲ್ಲಿ ಅದ್ಭುತ ಫಾರ್ಮ್​ನಲ್ಲಿದ್ದ ಅವರು ಕೊನೇ ಐದು ಪಂದ್ಯಗಳಲ್ಲಿ ಮೂರು ಶತಕಗಳನ್ನು ಬಾರಿಸಿದ್ದರು. ಅವರು ಐಪಿಎಲ್ 2023 ರಲ್ಲಿ ಒಟ್ಟು 890 ರನ್ ಗಳಿಸಿದ್ದರು.

ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ

ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಈಡನ್ ಗಾರ್ಡನ್ಸ್ ಮತ್ತು ಮುಂಬೈ ಇಂಡಿಯನ್ಸ್ (ಎಂಐ) ತವರು ಮೈದಾನ ವಾಂಖೆಡೆ ಕ್ರೀಡಾಂಗಣವು ಈ ಋತುವಿನ ಅತ್ಯುತ್ತಮ ಸ್ಥಳಗಳ ಪ್ರಶಸ್ತಿಯನ್ನು ಗೆದ್ದುಕೊಂಡಿತು. ರನ್ನರ್ ಅಪ್ ಗುಜರಾತ್ ಟೈಟನ್ಸ್ ತಂಡಕ್ಕೆ 12.5 ಕೋಟಿ ರೂ.ಗಳ ಬಹುಮಾನ ದೊರೆತರೆ. ಧೋನಿ ನೇತೃತ್ವದ ಚೆನ್ನೈ ತಂಡಕ್ಕೆ 20 ಕೋಟಿ ರೂಪಾಯಿ ಬಹುಮಾನ ಲಭಿಸಿತು.

Exit mobile version