Site icon Vistara News

IPL 2023: ವಿಶೇಷ ಗೌರವ ಸೂಚಿಸಿ ಧೋನಿ ನಿವೃತ್ತಿ ಸುಳಿವು ನೀಡಿದ ಬಿಸಿಸಿಐ

MS Dhoni

ಅಹಮದಾಬಾದ್​: ಈ ಬಾರಿಯ ಐಪಿಎಲ್​ ಟೂರ್ನಿ ಆರಂಭಕ್ಕೂ ಮುನ್ನವೇ ಧೋನಿ ಅವರ ವಿದಾಯದ ಸುದ್ದಿ ಎಲ್ಲರನ್ನೂ ಭಾರಿ ಕುತೂಹಲ ಮೂಡಿಸಿತ್ತು. ಆದರೆ ಧೋನಿ ಮಾತ್ರ ಈ ವಿಚಾರವನ್ನು ತಳ್ಳಿಹಾಕುತ್ತಲೇ ಬಂದಿದ್ದಾರೆ. ಆದರೂ ಅಭಿಮಾನಿಗಳು ಮಾತ್ರ ಈ ಬಾರಿ ಧೋನಿ ಅವರು ಫೈನಲ್​ ಬಳಿಕ ನಿವೃತ್ತಿ ನೀಡುವುದು ಪಕ್ಕಾ ಎನ್ನುತ್ತಿದ್ದರು. ಇದೀಗ ಬಿಸಿಸಿಐ ಧೋನಿಗೆ ವಿಶೇಷ ಗೌರವ ಸೂಚಿಸಿದ ವಿಡಿಯೊವೊಂದನ್ನು ಬಿಡುಗಡೆ ಮಾಡಿದೆ. ಈ ಮೂಲಕ ಧೋನಿ ಅವರ ವಿದಾಯದ ಸುಳಿವನ್ನು ಬಿಟ್ಟುಕೊಟ್ಟಿದೆ.

ಐಪಿಎಲ್​ನಲ್ಲಿ ಧೋನಿ ಅವರು ಇದುವರೆಗೆ ಸಾಧಿಸಿದ ಸಾಧನೆ, ಅವರು ಮೈದಾನಕ್ಕೆ ಎಂಟ್ರಿ ಕೊಡುವಾಗ ಅಭಿಮಾನಿಗಳು ಧೋನಿ….ಧೋನಿ ಎಂದು ಕೂಗುತ್ತಿರುವ ಮತ್ತು ಅವರ ಪೋಸ್ಟರ್​ಗಳನ್ನು ಹಿಡಿದಿರುವುದು, ಅಂತಿಮವಾಗಿ ಧೋನಿ ಮೈದಾನಕ್ಕೆ ಬೆನ್ನು ಹಾಕಿ ಡ್ರೆಸಿಂಗ್​ ರೂಮ್​ಗೆ ತೆರಳುವ ವಿಡಿಯೊವನ್ನು ಬಿಸಿಸಿಐ ಐಪಿಎಲ್​ ಟ್ವಿಟರ್​ ಮೂಲಕ ಹಂಚಿಕೊಂಡಿದೆ. ಈ ವಿಡಿಯೊ ವೈರಲ್​ ಆಗಿದೆ. ವಿಡಿಯೊ ಕಂಡ ಹಲವರು ಸೋಮವಾರ ನಡೆಯುವ ಫೈನಲ್​ ಬಳಿಕ ಧೋನಿ ಅವರು ವಿದಾಯ ಹೇಳುವ ಮೂಲಕ ಎಲ್ಲ ಅನುಮಾನಗಳಿಗೆ ತೆರೆ ಎಳೆಯುವ ಸಾಧ್ಯತೆ ಅಧಿಕವಾಗಿದೆ ಎಂದು ಹೇಳಲಾರಂಭಿಸಿದ್ದಾರೆ.

ಇದನ್ನೂ ಓದಿ IPL 2023: ಗಿಲ್​ ಮತ್ತು ಜೈಸ್ವಾಲ್​ ಮಧ್ಯೆ ಶ್ರೇಷ್ಠ ಆಟಗಾರನನ್ನು ಹೆಸರಿಸಿದ ಎಬಿಡಿ

ನಿವೃತ್ತಿ ಬಗ್ಗೆ ಯೋಚಿಸಿಲ್ಲ ಧೋನಿ

ಮೊದಲ ಕ್ವಾಲಿಫೈಯರ್​ ಪಂದ್ಯದ ವೇಳೆ ಧೋನಿ ಅವರು ತಮ್ಮ ನಿವೃತ್ತಿ ಬಗ್ಗೆ ಇದ್ದ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಹರ್ಷ ಬೋಗ್ಲೆ ಜತೆ ಮಾತನಾಡಿದ್ದ ಧೋನಿ, “ಸದ್ಯಕ್ಕೆ ಐಪಿಎಲ್‌ ನಿವೃತ್ತಿ ಬಗ್ಗೆ ಯಾವುದೇ ನಿರ್ಧಾರ ತಗೆದುಕೊಳ್ಳುವುದಿಲ್ಲ. 2024ರ ಐಪಿಎಲ್‌ ಮಿನಿ ಹರಾಜು ಡಿಸೆಂಬರ್‌ನಲ್ಲಿ ನಡೆಯಲಿದೆ. ಇದರ ಒಳಗೆ ನನ್ನ ಫಿಟ್​ನೆಸ್​ ಹೇಗಿರುತ್ತದೆ ಎನ್ನುವುದನ್ನು ನೋಡಿಕೊಂಡು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದರು.

“ನಿವೃತ್ತಿ ಬಗ್ಗೆ ನನಗೆ ತಿಳಿದಿಲ್ಲ. ಇದರ ಬಗ್ಗೆ ನಾನು ಈಗ ಚಿಂತಿಸುವುದಿಲ್ಲ. ಸದ್ಯ ನನ್ನ ಮುಂದಿರುವ ಗುರಿ ಫೈನಲ್​ಗೆ ಬೇಕಾದ ತಯಾರಿ ಮತ್ತು ಕಪ್​ ಗೆಲ್ಲುವುದು. ನಿವೃತ್ತಿ ಬಗ್ಗೆ ಯೋಚಿಸಲು ನನಗೆ ಇನ್ನೂ 8 ರಿಂದ 9 ತಿಂಗಳು ಅವಕಾಶವಿದೆ. ಹೀಗಾಗಿ ಈಗ ಏಕೆ ನಾನು ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು? ಆಟಗಾರನಾಗಿ ಅಥವಾ ಬೇರೆ ಜವಾಬ್ದಾರಿಯ ಮೂಲಕವಾದರೂ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಜತೆಗಿನ ನಂಟು ಯವಾಗಲೂ ಇದ್ದೇ ಇರುತ್ತದೆ” ಎಂದು ಧೋನಿ ಹೇಳಿದ್ದರು.

Exit mobile version