Site icon Vistara News

IPL 2023: ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಮತ್ತೆ ಚಿಂತೆಯಾದ ಬೆನ್​ ಸ್ಟೋಕ್ಸ್​ ಫಿಟ್​ನೆಸ್​

Another injury report; Ben Stokes is unavailable for the match against Mumbai Indians

ಮುಂಬಯಿ: ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಚೆನ್ನೈ ಸೂಪರ್​ ಕಿಂಗ್ಸ್​(CSK) ತಂಡದ​ ಬೆನ್ ಸ್ಟೋಕ್ಸ್ (Ben Stokes) ಅವರು ಈ ಬಾರಿಯ ಐಪಿಎಲ್​(IPL 2023)ನ ಆರಂಭಿಕ ಹಂತದ ಪಂದ್ಯಗಳಲ್ಲಿ ಬ್ಯಾಟಿಂಗ್ ಮಾತ್ರ ನಡೆಸಲಿದ್ದಾರೆ ಎಂದು ತಂಡದ ಬ್ಯಾಟಿಂಗ್‌ ಕೋಚ್‌ ಮೈಕೆಲ್‌ ಹಸ್ಸಿ(michael hussey) ಹೇಳಿದ್ದಾರೆ.

“ಸ್ಟೋಕ್ಸ್ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಈ ಋತುವಿನ ಐಪಿಎಲ್‌ನಲ್ಲಿ ಸ್ಟೋಕ್ಸ್‌ ಭಾಗವಹಿಸುತ್ತಾರೆಯೇ ಅಥವಾ ಇಲ್ಲವೇ ಎಂಬ ಅನುಮಾನ ಹುಟ್ಟಿತ್ತು. ಇದೇ ವಿಚಾರವಾಗಿ ಫ್ರಾಂಚೈಸಿಯು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ(ECB)ಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿತ್ತು. ಸದ್ಯ ಅವರು ಬ್ಯಾಟಿಂಗ್​ ಮಾತ್ರ ನಡೆಸಲಿದ್ದಾರೆ” ಎಂದು ಹಸ್ಸಿ ಹೇಳಿದ್ದಾರೆ.

ಕಳೆದ ನ್ಯೂಜಿಲ್ಯಾಂಡ್​ ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿಯ ವೇಳೆ ಬೆನ್‌ ಸ್ಟೋಕ್ಸ್‌ ಕೇವಲ 9 ಓವರ್‌ ಎಸೆದಿದ್ದರು. ಆದರೆ ಅವರು ಅಷ್ಟೇನೂ ಫಿಟ್‌ ಇರಲಿಲ್ಲ. ನನಗೆ ತಿಳಿದ ಪ್ರಕಾರ ಸ್ಟೋಕ್ಸ್‌ ಆರಂಭದಲ್ಲಿ ಕೇವಲ ಬ್ಯಾಟಿಂಗ್​ ಪಾತ್ರವನ್ನು ನಿರ್ವಹಿಸಲಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅವರು ಬೌಲಿಂಗ್​ ನಡೆಸುವುದಿಲ್ಲ. ಏಕೆಂದರೆ ಅವರು ಮಂಗಳವಾರ ಸಣ್ಣ ಮಟ್ಟದ ಬೌಲಿಂಗ್‌ ಅಭ್ಯಾಸ ನಡೆಸಿದ್ದಾರೆ. ಆದರೆ ಎಡ ಮೊಣಕಾಲಿನ ನೋವಿಗೆ ಅವರು ದಿನವೂ ಚುಚ್ಚುಮದ್ದು ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಚೆನ್ನೈ ಮತ್ತು ಇಸಿಬಿ ಫಿಸಿಯೋಗಳು ಸ್ಟೋಕ್ಸ್‌ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬುದಾಗಿ ಹಸ್ಸಿ ಹೇಳಿದರು.

ಇದನ್ನೂ ಓದಿ IPL 2023: ಪಂತ್​ ಬದಲು ಡೆಲ್ಲಿ ಪಾಳಯ ಸೇರಿದ 20 ವರ್ಷದ ಬಂಗಾಳ ಕ್ರಿಕೆಟಿಗ; ಯಾರಿದು?

ಬ್ಯಾಟಿಂಗ್​ ಅಭ್ಯಾಸವನ್ನು ಉತ್ತಮ ರೀತಿಯಲ್ಲಿ ಮಾಡಿದ್ದಾರೆ. ಅದರಲ್ಲೂ ಬಲಿಷ್ಠ ಹೊಡೆತಗಳ ಮೂಲಕ ಹೆಚ್ಚು ಕಾಲ ನೆಟ್ಸ್​ನಲ್ಲಿ ಅಭ್ಯಾಸ ನಡೆಸಿದ್ದಾರೆ. ಅವರ ಬ್ಯಾಟಿಂಗ್​ ಪಾತ್ರ ತಂಡಕ್ಕೆ ಉತ್ತಮ ಸಹಕಾರಿಯಾಗಲಿದೆ. ಒಂದೊಮ್ಮೆ ಅವರು ಸಂಪೂರ್ಣ ಫಿಟ್​ ಇರುತ್ತಿದ್ದರೆ ತಂಡಕ್ಕೆ ಯಾವುದೇ ಚಿಂತೆ ಪಡಬೇಕಾದ ಸ್ಥಿತಿ ಇರುತ್ತಿರಲಿಲ್ಲ ಎಂದು ಹಸ್ಸಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ IPL 2023: ಐಪಿಎಲ್​ನಲ್ಲಿ ಹಲವು ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್​ ಕೊಹ್ಲಿ

ಉದ್ಘಾಟನಾ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ(hardik pandya) ನೇತೃತ್ವದ ಹಾಲಿ ಚಾಂಪಿಯನ್ ಗುಜರಾತ್​ ಟೈಟಾನ್ಸ್​ ಮತ್ತು ಧೋನಿ(MS Dhoni) ಸಾರಥ್ಯದ ಚೆನ್ನೈ ಸೂಪರ್​ ಕಿಂಗ್ಸ್​ ಮುಖಾಮುಖಿಯಾಗಲಿವೆ. ಈ ಪಂದ್ಯ ಶುಕ್ರವಾರ(ಮಾರ್ಚ್​ 31) ಅಹಮದಾಬಾದ್​ನಲ್ಲಿ ನಡೆಯಲಿದೆ. ಕಳೆದ ಬಾರಿ ನಡೆದ ಟೂರ್ನಿಯಲ್ಲಿ ಪಾಂಡ್ಯ ಪಡೆ ಚೆನ್ನೈ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿಯೂ ಮೇಲುಗೈ ಸಾಧಿಸಿತ್ತು. ಮೊದಲ ಪಂದ್ಯ 3 ವಿಕೆಟ್​ನಿಂದ ಗೆದ್ದರೆ, ದ್ವಿತೀಯ ಪಂದ್ಯ 7 ವಿಕೆಟ್​ಗಳಿಂದ ಗೆದ್ದಿತ್ತು.

Exit mobile version