ಮೊಹಾಲಿ: ಟೀಮ್ ಇಂಡಿಯಾದ ಘಾತಕ ವೇಗಿ ಮೊಹಮ್ಮದ್ ಸಿರಾಜ್(Mohammed Siraj) ಅವರು ತಮ್ಮ ಬೌಲಿಂಗ್ ಸುಧಾರಣೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಕೊರೊನಾ(covid-19) ಲಾಕ್ಡೌನ್ನಿಂದಾಗಿ ತಮ್ಮ ಬೌಲಿಂಗ್ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಪಂಜಾಬ್ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಸಿರಾಜ್, “ಕೊರೊನಾ ಸಮಯದ ಲಾಕ್‌ಡೌನ್‌ನಲ್ಲಿ ಸಿಕ್ಕ ಸಮಯ ನನಗೆ ಅತ್ಯಂತ ಮಹತ್ವದ್ದಾಗಿತ್ತು. ಅದಕ್ಕೂ ಮೊದಲು ನಾನು ಹೆಚ್ಚು ರನ್ಗಳನ್ನು ನೀಡುತ್ತಿದ್ದೆ. ಆದರೆ ಲಾಕ್ಡೌನ್ನಿಂದ ಸಿಕ್ಕ ಬಿಡುವಿನಲ್ಲಿ ನಾನು ನಿರಂತರವಾಗಿ ಬೌಲಿಂಗ್ ಅಭ್ಯಾಸ ಮಾಡುತ್ತಿದೆ. ಆದ್ದರಿಂದ ನನ್ನ ಬೌಲಿಂಗ್ನಲ್ಲಿರುವ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಾಧ್ಯವಾಯಿತು. ಜತೆಗೆ ನನ್ನ ಫಿಟ್ನೆಸ್ ಕೂಡ ಸುಧಾರಿಸಿದ್ದೇನೆ” ಎಂದು ಹೇಳಿದರು.
“ಇನ್ನೊಂದು ವಿಚಾರ ಎಂದರೆ ನಾನು ಕ್ರಿಕೆಟ್ನಲ್ಲಿ ಈ ಮಟ್ಟದ ಸಾಧನೆ ತೋರಬೇಕೆಂದರೆ ಅದಕ್ಕೆ ವಿರಾಟ್ ಕೊಹ್ಲಿ ಅವರ ಸಹಕಾರವನ್ನು ಇಲ್ಲಿ ಸ್ಮರಿಸಿಕೊಳ್ಳುತ್ತೇನೆ. ನಾನು ಆರಂಭದಲ್ಲಿ ಆರ್ಸಿಬಿಗೆ ಸೇರಿದಾಗ ಎದುರಾಳಿ ತಂಡದ ಬ್ಯಾಟರ್ಗಳಿಂದ ಸರಿಯಾಗಿ ದಂಡಿಸಿಕೊಳ್ಳುತ್ತಿದ್ದೆ. ಆದರೆ ವಿರಾಟ್ ಕೊಹ್ಲಿ ಅವರು ನನ್ನ ಮೇಲೆ ನಂಬಿಕೆ ಇರಿಸಿ ಪ್ರತಿ ಪಂದ್ಯದಲ್ಲಿಯೂ ಅವಕಾಶ ನೀಡುವ ಮೂಲಕ ಈ ಸ್ಥಾನಕ್ಕೆ ತಲುಪುವಂತೆ ಮಾಡಿದರು” ಎಂದು ಕೊಹ್ಲಿ ಅವರ ಸಹಕಾರವನ್ನು ನೆನಪಿಸಿಕೊಂಡರು.
ಇದನ್ನೂ ಓದಿ IPL 2023: ಡೆಲ್ಲಿ-ಕೆಕೆಆರ್ ವಿರುದ್ಧದ ಪಂದ್ಯ ವೀಕ್ಷಿಸಿದ ಆ್ಯಪಲ್ ಕಂಪೆನಿಯ ಸಿಇಒ ಟಿಮ್ ಕುಕ್
ಸದ್ಯ ಉತ್ತಮ ಬೌಲಿಂಗ್ ಲಯದಲ್ಲಿರುವ ಮೊಹಮ್ಮದ್ ಸಿರಾಜ್ ಅವರು ಟೀಮ್ ಇಂಡಿಯಾದ ಪ್ರಮುಖ ವಿಕೆಟ್ ಟೇಕರ್ ಎಂದು ಗುರಿಸಿಕೊಂಡಿದ್ದಾರೆ. ಅವರು ಎಸೆಯುವ ಬಹುತೇಕ ಎಲ್ಲ ಮೊದಲ ಓವರ್ನಲ್ಲಿಯೂ ವಿಕೆಟ್ ಕೀಳುವಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಏಕದಿನ ವಿಶ್ವ ಕಪ್ನಲ್ಲಿ ಅವರು ಬಹುತೇಖ ತಮ್ಮ ಸ್ಥಾನವನ್ನು ಭದ್ರಪಡಿಸಿದ್ದಾರೆ. ಇತ್ತೀಚೆಗೆ ಅವರು ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನು ಪಡೆದಿದ್ದರೂ. ಆದರೆ ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಹೆಚ್ಚಿನ ವಿಕೆಟ್ ಪಡೆಯದ ಕಾರಣ ಅವರು ಮೂರನೇ ಸ್ಥಾನಕ್ಕೆ ಜಾರಿದ್ದರು. ಸದ್ಯ ಅವರು ಆಡಿದ ಆರು ಐಪಿಎಲ್ ಪಂದ್ಯಗಳಲ್ಲಿ 12 ವಿಕೆಟ್ ಕಲೆಹಾಕಿದ್ದಾರೆ.