Site icon Vistara News

IPL 2023: ಆಮೀರ್​ ಖಾನ್​ ಜತೆಗೆ ಫೋಟೊ ತೆಗೆಸಿಕೊಂಡ ಚಹಲ್-ಧನಶ್ರೀ ಜೋಡಿ

Dhanashree and Yuzvendra Chahal

ಮುಂಬಯಿ: ಟೀಮ್​ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಹಲ್​ ಮತ್ತು ಅವರ​ ಪತ್ನಿ ಧನಶ್ರೀ ವರ್ಮಾ ಬಾಲಿವುಡ್​ನ ಹಿರಿಯ​ ನಟ ಆಮೀರ್​ ಖಾನ್​ ಜತೆ ಫೋಟೊ ತೆಗೆದುಕೊಂಡಿದ್ದಾರೆ. ಸ್ಟಾರ್​ ನಟನೊಂದಿಗೆ ತೆಗೆದ ಫೋಟೊವನ್ನು ಧನಶ್ರೀ ವರ್ಮಾ ಅವರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಈ ದಂಪತಿಗಳು ಒಂದಲ್ಲ ಒಂದು ವಿಡಿಯೊ ಹಂಚಿಕೊಳ್ಳುತ್ತಿರುತ್ತಾರೆ. ಯೂಟ್ಯೂಬರ್​​ ಮತ್ತು ನೃತ್ಯ ಸಂಯೋಜಕಿಯೂ ಆಗಿರುವ​ ಧನಶ್ರೀ ಅವರು ಕೆಲ ಹಾಡಿಗೆ ನೃತ್ಯ ಮತ್ತು ಹಾಸ್ಯಮಯ ವಿಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಚಹಲ್​ ಕೂಡ ಕ್ರಿಕೆಟ್​ಗೆ ಸಂಬಂಧಿಸಿದ ವಿಡಿಯೊಗಳನ್ನು ಶೇರ್​ ಮಾಡುತ್ತಿರುತ್ತಾರೆ. ಯಜುವೇಂದ್ರ ಚಹಲ್​ ಹಾಗೂ ಧನಶ್ರೀ ವರ್ಮಾ ಅವರು 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಇದನ್ನೂ ಓದಿ IPL 2023: ಕ್ಲಾಸೆನ್​ ‘ಕ್ಲಾಸ್’​ ಬ್ಯಾಟಿಂಗ್​ಗೆ ಬೃಹತ್​ ಮೊತ್ತ ದಾಖಲಿಸಿದ ಸನ್​ರೈಸರ್ಸ್​

ಐಪಿಎಲ್​ನಲ್ಲಿ ದಾಖಲೆ ಬರೆದ ಚಹಲ್

ಕೋಲ್ಕೊತಾದ ಐತಿಹಾಸಿಕ ಈಡನ್​ ಗಾರ್ಡನ್ಸ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ಗುರವಾರ ನಡೆದಿದ್ದ ಐಪಿಎಲ್​ ಪಂದ್ಯದಲ್ಲಿ ರಾಜಸ್ಥಾನ್​ ತಂಡದ ಸ್ಪಿನ್ನರ್​ ಯಜುವೇಂದ್ರ ಚಹಲ್​ ಅವರು ದಾಖಲೆಯೊಂದನ್ನು ಬರೆದಿದ್ದರು. ಕೆಕೆಆರ್​ ನಾಯಕ ನಿತೀಶ್​ ರಾಣಾ ಅವರ ವಿಕೆಟ್​ ಕೀಳುತ್ತಿದ್ದಂತೆ ಐಪಿಎಲ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಈ ಪಂದ್ಯಕ್ಕೂ ಮುನ್ನ ಅವರು 183 ವಿಕೆಟ್​ ಪಡೆದು ಡೆವೋನ್​ ಬ್ರಾವೊ ಅವರೊಂದಿಗೆ ಜಂಟಿ ದಾಖಲೆ ಹೊಂದಿದ್ದರು. ಇದೀಗ ಚಹಲ್​ ಅವರು ಈ ಪಂದ್ಯದಲ್ಲಿ 4 ವಿಕೆಟ್​ ಪಡೆದು ಬ್ರಾವೊ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು. ಸದ್ಯ ಚಹಲ್​ 187* ವಿಕೆಟ್​ ಪಡೆದಿದ್ದಾರೆ.

ಐಪಿಎಲ್​ನಲ್ಲಿ ಅತಿ ಹೆಚ್ಚು ವಿಕೆಟ್​​ ಪಡೆದ ಪಟ್ಟಿಯಲ್ಲಿ ಪಿಯೂಷ್​ ಚಾವ್ಲಾ(174*) ಮತ್ತು ಅಮೀತ್​ ಮಿಶ್ರಾ(172*) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ಉಭಯ ಆಟಗಾರರು ಐಪಿಎಲ್​ ಆಡುತ್ತಿರುವುದರಿಂದ ಇವರಿಗೂ ಬ್ರಾವೊ ದಾಖಲೆ ಮುರಿಯುವ ಅವಕಾಶವಿದೆ.

Exit mobile version