Site icon Vistara News

IPL 2023: ಟ್ರಾಲಿ ಬ್ಯಾಗ್​ನಲ್ಲಿ ಜಾಲಿ ರೈಡ್​ ಮಾಡಿದ ಚಹಲ್​; ವಿಡಿಯೊ ವೈರಲ್​

yajurveda chahal

ಜೈಪುರ: ಟೀಮ್​ ಇಂಡಿಯಾದ ಆಟಗಾರ ಯಜುವೇಂದ್ರ ಚಹಲ್​ ಅವರ ಚೇಷ್ಟೆಯೊಂದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಐಪಿಎಲ್​ನಲ್ಲಿ ರಾಜಸ್ಥಾನ್​ ಪರ ಆಡುತ್ತಿರುವ ಅವರು ತಂಡದ ಸಹ ಆಟಗಾರ ಜೋ ರೂಟ್​ ಅವರ ಟ್ರಾಲಿ ಬ್ಯಾಗ್​ನಲ್ಲಿ ಕುಳಿತು ಜಾಲಿ ರೈಡ್​ ಮಾಡಿದ್ದಾರೆ. ಈ ವಿಡಿಯೊವನ್ನು ರಾಜಸ್ಥಾನ್​ ತಂಡ ತನ್ನ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

ಆರ್​ಸಿಬಿ ಪರ ರಾಜಸ್ಥಾನ್ ತಂಡ​ ಸವಾಯ್ ಮಾನ್​ಸಿಂಗ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ಪಂದ್ಯವನ್ನಾಡಲು ಜೈ ಪುರಕ್ಕೆ ಬಂದಿದೆ. ಈ ವೇಳೆ ವಿಮಾನ ನಿಲ್ದಾಣದಿಂದ ಹೊರಗಡೆ ಬರುವ ಸಂದರ್ಭದಲ್ಲಿ ಯಜುವೇಂದ್ರ ಚಹಲ್​ ಅವರು ಜೋ ರೂಟ್​ ಅವರ ಟ್ರಾಲಿ ಬ್ಯಾಗ್​ನಲ್ಲಿ ಕುಳಿತು ಸಣ್ಣ ಮಗುವಿನಂತೆ ಜಾಲಿ ರೈಡ್​ ಮಾಡಿದ್ದಾರೆ. ಇದಕ್ಕೆ ರಾಜಸ್ಥಾನ್​ ತಂಡ “ಶೂಟ್​ಕೇಸ್​ ವಾಲಿ ಟ್ಯಾಕ್ಸಿ, ಯುಝಿ ಭಾಯಿ ಕ್ರೇಜಿ” ಎಂದು ಬರೆದುಕೊಂಡಿದೆ.

ಇದನ್ನೂ ಓದಿ IPL 2023: ರಾಯಲ್ಸ್​ ಬ್ಯಾಟಲ್ಸ್​ನಲ್ಲಿ ಟಾಸ್​ ಗೆದ್ದ ಆರ್​ಸಿಬಿ ತಂಡದಿಂದ ಬ್ಯಾಟಿಂಗ್​ ಆಯ್ಕೆ

ಐಪಿಎಲ್​ನಲ್ಲಿ ದಾಖಲೆ ವೀರ ಚಹಲ್

ಕೋಲ್ಕೊತಾದ ಐತಿಹಾಸಿಕ ಈಡನ್​ ಗಾರ್ಡನ್ಸ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ಗುರವಾರ ನಡೆದಿದ್ದ ಐಪಿಎಲ್​ ಪಂದ್ಯದಲ್ಲಿ ರಾಜಸ್ಥಾನ್​ ತಂಡದ ಸ್ಪಿನ್ನರ್​ ಯಜುವೇಂದ್ರ ಚಹಲ್​ ಅವರು ದಾಖಲೆಯೊಂದನ್ನು ಬರೆದಿದ್ದರು. ಕೆಕೆಆರ್​ ನಾಯಕ ನಿತೀಶ್​ ರಾಣಾ ಅವರ ವಿಕೆಟ್​ ಕೀಳುತ್ತಿದ್ದಂತೆ ಐಪಿಎಲ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಈ ಪಂದ್ಯಕ್ಕೂ ಮುನ್ನ ಅವರು 183 ವಿಕೆಟ್​ ಪಡೆದು ಡೆವೋನ್​ ಬ್ರಾವೊ ಅವರೊಂದಿಗೆ ಜಂಟಿ ದಾಖಲೆ ಹೊಂದಿದ್ದರು. ಆದರೆ ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್​ ಪಡೆದು ಬ್ರಾವೊ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು. ಸದ್ಯ ಚಹಲ್​ 187* ವಿಕೆಟ್​ ಪಡೆದಿದ್ದಾರೆ. ಭಾನುವಾರ ನಡೆಯುತ್ತಿರುವ ಆರ್​ಸಿಬಿ ಪಂದ್ಯದಲ್ಲಿ ಚಹಲ್​ ವಿಕೆಟ್​ ಕಿತ್ತರ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.

ಐಪಿಎಲ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ವಿಕೆಟ್​​ ಪಡೆದ ಪಟ್ಟಿಯಲ್ಲಿ ಪಿಯೂಷ್​ ಚಾವ್ಲಾ(176*) ಮತ್ತು ಅಮೀತ್​ ಮಿಶ್ರಾ(172*) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ಉಭಯ ಆಟಗಾರರು ಐಪಿಎಲ್​ ಆಡುತ್ತಿರುವುದರಿಂದ ಇವರಿಗೂ ಬ್ರಾವೊ ದಾಖಲೆ ಮುರಿಯುವ ಅವಕಾಶವಿದೆ.

Exit mobile version