Site icon Vistara News

IPL 2023: ಫೈನಲ್ ಪಂದ್ಯಕ್ಕೂ ಮುನ್ನ ವರ್ಣರಂಜಿತ ಕಾರ್ಯಕ್ರಮ; ಯಾರೆಲ್ಲ ಭಾಗಿ?

IPL 2023 Closing Ceremony

ಅಹಮದಾಬಾದ್​: 16ನೇ ಆವೃತ್ತಿಯ ಐಪಿಎಲ್​ಗೆ ಹೇಗೆ ವರ್ಣರಂಜಿತ ಚಾಲನೆ ನೀಡಲಾಗಿತ್ತೋ ಹಾಗೆಯೇ ಟೂರ್ನಿಯ ಅಂತ್ಯಕ್ಕೂ ಇದೇ ರೀತಿಯ ಅದ್ಧೂರಿ ಕಾರ್ಯಕ್ರಮದ ಮೂಲಕ ತೆರೆ ಎಳೆಯಲು ಬಿಸಿಸಿಐ ಎಲ್ಲ ಸಿದ್ಧತೆ ನಡೆಸಿದೆ. ಫೈನಲ್​ ಪಂದ್ಯಕ್ಕೂ ಮುನ್ನ ನಡೆಯುವ ಈ ಸಮಾರೋಪ ಸಮಾರಂಭದಲ್ಲಿ ಖ್ಯಾತ ಗಾಯಕ ಡಿವೈನ್ ಮತ್ತು ನ್ಯೂಕ್ಲಿಯಾ ಅವರು ಕಾರ್ಯಕ್ರಮ ನೀಡಲಿದ್ದಾರೆ.

ಇನ್ನು ಕೆಲ ವರದಿಗಳ ಪ್ರಕಾರ ಬಾಲಿವುಡ್​ ನಟ ರಣವೀರ್ ಸಿಂಗ್, ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಸಮಾರೋಪ ಸಮಾರಂಭದಲ್ಲಿ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಸಮಾರೋಪ ಸಮಾರಂಭ ಕಾರ್ಯಕ್ರಮ ಸಂಜೆ 6 ರಿಂದ ಆರಂಭವಾಗಲಿದೆ. ಹೀಗಾಗಿ ಪಂದ್ಯ 8 ಗಂಟೆಗೆ ಆರಂಭವಾಗುವ ಸಾಧ್ಯತೆ ಇದೆ. ಉದ್ಘಾಟನಾ ಪಂದ್ಯ ಕೂಡ 8 ಗಂಟೆಗೆ ಆರಂಭಗೊಂಡಿತ್ತು.

ಫೈನಲ್​ ಪಂದ್ಯದ ಇನಿಂಗ್ಸ್​ ಮಧ್ಯೆಯೂ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ಕೂಡ ಇರಲಿದೆ. ಇನಿಂಗ್ಸ್ ವಿರಾಮದ ಸಮಯದಲ್ಲಿ ಗಾಯಕಿ ಜೋನಿತಾ ಗಾಂಧಿ ಮತ್ತು ಗಾಯಕ ಡಿವೈನ್ ಭಾಗವಹಿಸುವಿಕೆಯನ್ನು ಈಗಾಗಲೇ ಸಂಘಟಕರು ಖಚಿತಪಡಿಸಿದ್ದಾರೆ. ಚೆನ್ನೈ ತಂಡ ಈಗಾಗಲೇ ಫೈನಲ್​ ತಲುಪಿದೆ. ಇನ್ನೊಂದು ತಂಡ ಯಾವುದು ಎಂದು ಶಕ್ರವಾರ ನಡೆಯುವ ಕ್ವಾಲಿಫೈಯರ್​ ಬಳಿಕ ನಿರ್ಧಾರವಾಗಲಿದೆ. ಈ ಕಾದಟದಲ್ಲಿ ಮುಂಬೈ ಮತ್ತು ಗುಜರಾತ್​ ತಂಡಗಳು ಮುಖಾಮುಖಿಯಾಗಲಿವೆ.

ಇದನ್ನೂ ಓದಿ IPL 2023: ಕೊಹ್ಲಿ ಬಳಿ ಕ್ಷಮೆ ಕೇಳಿದರೇ ನವೀನ್​ ಉಲ್​ ಹಕ್? ಟ್ವೀಟ್​ನಲ್ಲಿ ಏನಿದೆ?

ಉದ್ಘಾಟನ ಸಮಾರಂಭದಲ್ಲಿ ಮಿಂಚಿದ್ದ ರಶ್ಮಿಕಾ ಮಂದಣ್ಣ

ಕೋವಿಡ್‌ ನಂತರ ಮೊದಲ ಬಾರಿಗೆ ಅತ್ಯಂತ ವೈಭವದಿಂದ ನಡೆದಿದ್ದ ಉದ್ಘಾಟನ ಸಮಾರಂಭದಲ್ಲಿ ನ್ಯಾಷನಲ್ ಕ್ರಶ್ ಖ್ಯಾತಿಯ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ(Rashmika Mandanna) ಮತ್ತು ಮಿಲ್ಕಿ ಬ್ಯೂಟಿ ಖ್ಯಾತಿಯ ತಮನ್ನಾ ಭಾಟಿಯ(Tamannaah Bhatia) ನೃತ್ಯದ ಮೂಲಕ ಎಲ್ಲರನ್ನು ರಂಜಿಸಿದರೆ, ಅರಿಜಿತ್​ ಸಿಂಗ್(arijit singh)​ ಅವರು ಅದ್ಭುತ ಕಂಠದ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದ್ದರು.

Exit mobile version