ಅಹಮದಾಬಾದ್: 16ನೇ ಆವೃತ್ತಿಯ ಐಪಿಎಲ್(IPL 2023) ಟೂರ್ನಿಯ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಮೊಣಕಾಲು ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ ಹೊರಬಿದ್ದ ಕೇನ್ ವಿಲಿಯಮ್ಸನ್(Kane Williamson) ಬದಲಿಗೆ, ಗುಜರಾತ್ ಟೈಟಾನ್ಸ್(Gujarat Titans) ತಂಡ ಶ್ರೀಲಂಕಾದ ಆಲ್ರೌಂಡರ್ ದಸುನ್ ಶನಕ(dasun shanaka) ಅವರನ್ನು ಆಯ್ಕೆ ಮಾಡಿದೆ.
ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಆಡಿದ ಎರಡೂ ಪಂದ್ಯಗಳಲ್ಲಿಯೂ ಗೆಲುವು ದಾಖಲಿಸಿ ಮುನ್ನುಗುತ್ತಿದೆ. ಸದ್ಯ ತಂಡದ ಆಟವನ್ನು ನೋಡುವಾಗ ಈ ಬಾರಿಯು ಕಪ್ ಗೆದ್ದು ಚಾಂಪಿಯನ್ ಪಟ್ಟ ತನ್ನ ಬಳಿಕಯೇ ಉಳಿಸಿಕೊಳ್ಳುವಂತೆ ಕಾಣುತ್ತಿದೆ. ಇದೀಗ ಆಲ್ರೌಂಡರ್ ದಸುನ್ ಶನಕ ಕೂಡ ತಂಡಕ್ಕೆ ಸೇರ್ಪಡೆಗೊಂಡಿರುವುದರಿಂದ ತಂಡ ಮತ್ತಷ್ಟು ಬಲಿಷ್ಠಗೊಂಡಿದೆ.
ಶ್ರೀಲಂಕಾ ತಂಡದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದರೂ ದಸುನ್ ಶನಕ ಅವರನ್ನು ಐಪಿಎಲ್ನಲ್ಲಿ ಯಾವುದೇ ತಂಡಗಳು ಖರೀದಿಮಾಡಲು ಮುಂದೆ ಬಂದಿರಲಿಲ್ಲ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ 50 ಲಕ್ಷ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು. ಇದೀಗ ಅವರು ಕೇನ್ ವಿಲಿಯಮ್ಸನ್ ಗಾಯಗೊಂಡ ಕಾರಣ ಐಪಿಎಲ್ಗೆ ಆಗಮಿಸಿದ್ದಾರೆ. ಸದ್ಯ ನ್ಯೂಜಿಲ್ಯಾಂಡ್ ವಿರುದ್ಧ ಸರಣಿ ಆಡುತ್ತಿರುವ ಶನಕ ಏಪ್ರಿಲ್ 9ರ ಬಳಿಕ ಗುಜರಾತ್ ಟೈಟಾನ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಇದನ್ನೂ ಓದಿ IPL 2023: ಶ್ರೇಯಸ್ ಅಯ್ಯರ್ ಬದಲು ಕೆಕೆಆರ್ ತಂಡ ಸೇರಿದ ಜೇಸನ್ ರಾಯ್
ಕೇನ್ ವಿಲಿಯಮ್ಸನ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡದ ವಿರುದ್ಧ ನಡೆದ 16ನೇ ಆವೃತ್ತಿಯ ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಕೇನ್ ವಿಲಿಯಮ್ಸನ್ ಗಾಯಕ್ಕೆ ಒಳಗಾಗಿದ್ದರು. ಋತುರಾಜ್ ಗಾಯಕ್ವಾಡ್ ಬಾರಿಸಿದ ಚೆಂಡನನ್ನು ಬೌಂಡರಿ ಗೆರೆಯ ಬಳಿ ತಡೆಯಲು ವಿಲಿಯಮ್ಸನ್ ಮೇಲಕ್ಕೆ ಜಿಗಿದಿದ್ದರು. ಚೆಂಡನ್ನು ತಡೆದು ಎದುರಾಳಿ ತಂಡ ಆರು ರನ್ಗಳು ಸಂಗ್ರಹಿಸದಂತೆ ನೋಡಿಕೊಂಡ ಹೊರತಾಗಿಯೂ ಅವರು ಕಳಕ್ಕೆ ಬೀಳುವಾಗ ಮಂಡಿಯೂರಿದ್ದರು. ಮಂಡಿ ಜೋರಾಗಿ ನೆಲಕ್ಕೆ ಅಪ್ಪಳಿಸಿದ ಅವರು ಗಂಭೀರ ಗಾಯಗೊಂಡಿದ್ದರು. ಸದ್ಯ ಅವರು ಕಿವೀಸ್ಗೆ ತೆರಳಿ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆ ಕಾಣುತ್ತಿದ್ದಾರೆ.
ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದ ಕೇನ್ ವಿಲಿಯಮ್ಸನ್
ಗಾಯದಿಂದಾಗಿ ಟೂರ್ನಿಯಿಂದ ಹೊರ ಬಿದ್ದ ಬಳಿಕ ಕೇನ್ ವಿಲಿಯಮ್ಸನ್ ವಿಡಿಯೊ ಮೂಲಕ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದರು. “ಈ ಆವೃತ್ತಿಯ ಮುಂಬರುವ ಪಂದ್ಯಗಳಿಗೆ ನನ್ನ ಗುಜರಾತ್ ಟೈಟಾನ್ಸ್ ತಂಡಕ್ಕೆ ಶುಭ ಹಾರೈಕೆಗಳು. ನಾನು ನಿಮ್ಮೊಂದಿಗೆ ಆಡಲು ಸಾಧ್ಯವಾಗದೆ ಇರುವುದಕ್ಕೆ ಬೇಸರವಿದೆ. ನನ್ನನ್ನು ಬೆಂಬಲಿಸಿದ ಎಲ್ಲ ಅಭಿಮಾನಿಗಳಿಗೂ ಧನ್ಯವಾದಗಳು. ಆದಷ್ಟು ಬೇಗ ಗುಣಮುಖರಾಗಲು ಎದುರು ನೋಡುತ್ತಿದ್ದೇನೆ. ಧನ್ಯವಾದಗಳು” ಎಂದು ಕೇನ್ ವಿಲಿಯಮ್ಸನ್ ಶುಭ ಹಾರೈಸಿದ್ದರು.