Site icon Vistara News

IPL 2023: ಪುಷ್ಪ-2 ಅವತಾರದಲ್ಲಿ ಕಾಣಿಸಿಕೊಂಡ ಡೇವಿಡ್​ ವಾರ್ನರ್​

IPL 2023: David Warner appeared in Pushpa-2 avatar

IPL 2023: David Warner appeared in Pushpa-2 avatar

ಮುಂಬಯಿ: ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಸ್ಟಾರ್​ ಆಟಗಾರ ಡೇವಿಡ್​ ವಾರ್ನರ್​ ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ತಮಗೆ ಇಷ್ಟವಾದ ಸಿನೆಮಾ ಹಾಡುಗಳಿಗೆ ಹೆಜ್ಜೆ ಹಾಕುವ ವಿಡಿಯೊವನ್ನು ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಟಾಲಿವುಡ್ ನಟ ಅಲ್ಲು ಅರ್ಜನ್ ನಟನೆಯ ಪುಷ್ಪ-2 ಸಿನಿಮಾದ ಪೋಸ್ಟರ್​ಗೆ​ ತಮ್ಮ ಮುಖವನ್ನು ಮಾರ್ಫ್ ಮಾಡಿ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಏಪ್ರಿಲ್ 7 ರಂದು ಅಲ್ಲು ಅರ್ಜುನ್ ವಿಭಿನ್ನವಾಗಿ ಕಾಣಿಸಿಕೊಂಡ ಪುಷ್ಪ-2 ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಯಿತು. ಇದರಲ್ಲಿ ಅಲ್ಲು ಅರ್ಜುನ್​ ವಿಚಿತ್ರ ಶೈಲಿಯ ಆಭರಣಗಳು ಮತ್ತು ಸೀರೆಯೊಂದಿಗೆ ಪೋಸ್ ನೀಡಿದ್ದರು. ಇದೀಗ ಅದೇ ರೂಪದಲ್ಲಿ ವಾರ್ನರ್​ ಕೂಡ ಕಾಣಿಸಿಕೊಂಡಿದ್ದಾರೆ. ವಾರ್ನರ್ ಅವರ ಈ ಪೋಸ್ಟ್ ಕಂಡ ಅವರ ಅಭಿಮಾನಿಗಳು ನೀವು ಹೈದರಾಬಾದ್‌ಗೆ ಬಂದು ಪುಷ್ಪ-2 ಚಿತ್ರದಲ್ಲಿ ನಟಿಸಿ ಎಂದು ಹೇಳಿದ್ದಾರೆ.

ಈ ಹಿಂದೆಯೂ ವಾರ್ನರ್​ ಅವರು ಪುಷ್ಪ ಸಿನಿಮಾ ಬಂದಾಗ ತಮ್ಮ ಮಗಳೊಂದಿಗೆ ಸಿನಿಮಾದ ಡೈಲಾಗ್​ ಒಂದನ್ನು ಹೇಳಿದ ವಿಡಿಯೊವನ್ನು ಹಂಚಿಕೊಂಡಿದ್ದರು. ಈ ಸಿಮಾದ ಮಾಸ್ ಡೈಲಾಗ್ “ಪುಷ್ಪ ಅಂದ್ರೆ ಫ್ಲವರ್ ಅಲ್ಲ, ಫೈರ್” ಎಂದು ಅಲ್ಲು ಅರ್ಜುನ್ ಶೈಲಿಯಲ್ಲಿ ಗಡ್ಡ ಸವರಿ ಡೈಲಾಗ್​ ಹೊಡೆದಿದ್ದರು. ಜತೆಗೆ ರಶ್ಮಿಕಾ ಮಂದಣ್ಣ ಅವರು ಹಾಕಿ ಹಾಡಿಗೂ ಅವರು ಕುಣಿದ ವಿಡಿಯೊ ಹಂಚಿಕೊಂಡಿದ್ದರು.

ಇದನ್ನೂ ಓದಿ IPL 2023: ಪತ್ನಿಯೊಂದಿಗೆ ಮಸ್ತ್ ಸ್ಟೆಪ್ಸ್‌​ ಹಾಕಿ ಗಾಯಗೊಂಡ ವಿರಾಟ್​ ಕೊಹ್ಲಿ; ಆರ್​ಸಿಬಿ ಗತಿಯೇನು?

ಸದ್ಯ ಡೇವಿಡ್​ ವಾರ್ನರ್​ ಅವರು ಇಂದು(ಸೋಮವಾರ) ನಡೆಯುವ ಐಪಿಎಲ್​ ಪಂದ್ಯದಲ್ಲಿ ಹೈದರಾಬಾದ್​ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಪಂತ್​ ಅವರು ಅಪಘಾತದಿಂದ ಗಾಯಗೊಂಡು ಐಪಿಎಲ್​ ಟೂರ್ನಿಯಿಂದ ಹೊರಬಿದ್ದ ಕಾರಣ ವಾರ್ನರ್​ ಈ ಆವೃತ್ತಿಯಲ್ಲಿ ಡೆಲ್ಲಿ ತಂಡದ ನಾಯಕನಾಗಿದ್ದಾರೆ. ಡೆಲ್ಲಿ 6 ಪಂದ್ಯಗಳನ್ನು ಆಡಿದ್ದು ಇದರಲ್ಲಿ 5 ಪಂದ್ಯಗಳಲ್ಲಿ ಸೋಲು ಕಂಡಿದೆ. ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಕಂಡಿದೆ.

Exit mobile version