Site icon Vistara News

IPL 2023: ಗಿಟಾರ್​ ಹಿಡಿದು ಕುಣಿದ ಧೋನಿ; ವಿಡಿಯೊ ವೈರಲ್​

IPL 2023: Dhoni danced with guitar; The video is viral

IPL 2023: Dhoni danced with guitar; The video is viral

ಚೆನ್ನೈ: ಟೀಮ್ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು 16ನೇ ಆವೃತ್ತಿಯ ಐಪಿಎಲ್​ಗೆ(IPL 2023) ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ. ಈ ಮಧ್ಯೆ ಅವರು ಸಹ ಆಟಗಾರರೊಂದಿಗೆ ಗಿಟಾರ್​ ಹಿಡಿದು ನೃತ್ಯ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮಾರ್ಚ್ 31 ರಿಂದ ಆರಂಭವಾಗಲಿರುವ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ​ ಹಾಲಿ ಚಾಂಪಿಯನ್​ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್(CSK) ತನ್ನ ಅಭಿಯಾನವನ್ನು ಆರಂಭಿಸಲಿದೆ. ಈಗಾಗಲೇ ಧೋನಿ ಹಾಗೂ ತಂಡದ ಕೆಲ ಆಟಗಾರರು ಚೆನ್ನೈನಲ್ಲಿ ಬೀಡು ಬಿಟ್ಟಿದ್ದು ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನೂತನ ಜಾಹಿರಾತಿಗಾಗಿ ನಡೆಸಿದ ವಿಡಿಯೊದಲ್ಲಿ ಧೋನಿ ಅವರು ಗಿಟಾರ್​ ಹಿಡಿದು 2 ಹೆಜ್ಜೆ ಹಾಕಿದ್ದಾರೆ. ಧೋನಿ ಜತೆ ದೀಪಕ್​ ಚಹರ್​, ಋತುರಾಜ್​ ಗಾಯಕ್ವಾಡ್​ ಮತ್ತು ಶಿವಂ ದುಬೆ ಕೂಡ ಸಂಭ್ರಮಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದರ ಜತೆಗೆ ಧೋನಿ ಅವರ ಹೊಸ ಲುಕ್​ ಕೂಡ ಗಮನಸೆಳೆದಿದೆ.

ಇದನ್ನೂ ಓದಿ IPL 2023: ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಡೇವಿಡ್​ ವಾರ್ನರ್​ ನಾಯಕ, ಅಕ್ಷರ್​ ಪಟೇಲ್​ ಉಪನಾಯಕ

ಮೆ.14 ರಂದು ಕೆಕೆಆರ್​ ವಿರುದ್ಧದ ಪಂದ್ಯವು ಸಿಎಸ್​ಕೆ ಪರ ಧೋನಿಯ ಕೊನೆಯ ಪಂದ್ಯವಾಗಿರಲಿದೆ ಎಂದು ಫ್ರಾಂಚೈಸಿ ತಿಳಿಸಿರುವುದಾಗಿ ಇನ್​ಸೈಡ್ ಸ್ಪೋರ್ಟ್ಸ್​ ತಿಳಿಸಿದೆ. ಈಗಾಗಲೇ ಧೋನಿ ಅವರ ವಿದಾಯಕ್ಕೆ ಚೆನ್ನೈ ತಂಡ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿದ್ದು ಅದರಂತೆ ಮೇ.14ಕ್ಕೆ ಧೋನಿ ವಿದಾಯ ಪಂದ್ಯ ಆಡಲಿದ್ದಾರೆ ಎಂದು ತಂಡದ ಮೂಲವೊಂದು ತಿಳಿಸಿರುವುದಾಗಿ ವರದಿಯಾಗಿದೆ. ಆದರೆ ಫ್ರಾಂಚೈಸಿ ಹಾಗೂ ಧೋನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

Exit mobile version