Site icon Vistara News

IPL 2023: ಟಿ.ನಟರಾಜನ್ ಮಗಳೊಂದಿಗೆ ಕುಶಲೋಪರಿ ನಡೆಸಿದ ಧೋನಿ; ವಿಡಿಯೊ ವೈರಲ್

IPL 2023: Dhoni flirts with T.Natarajan's daughter; The video is viral

IPL 2023: Dhoni flirts with T.Natarajan's daughter; The video is viral

ಚೆನ್ನೈ: ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಶುಕ್ರವಾರ ರಾತ್ರಿ ನಡೆದ ಐಪಿಎಲ್​ ಪಂದ್ಯದಲ್ಲಿ ಹೈದರಾಬಾದ್​ ವಿರುದ್ಧ 7 ವಿಕೆಟ್​ಗಳ ಗೆಲುವು ಸಾಧಿಸಿದೆ. ಪಂದ್ಯ ಮುಕ್ತಾಯದ ಬಳಿಕ ಮಹೇಂದ್ರ ಸಿಂಗ್​ ಧೋನಿ ಅವರು ಟಿ.ನಟರಾಜನ್​ ಅವರ ಮಗಳೊಂದಿಗೆ ನಡೆಸಿದ ಕುಶಲೋಪರಿಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ಪಂದ್ಯದಲ್ಲಿ ಮೊದಲು ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಸನ್​ರೈಸರ್ಸ್​ ಹೈದರಾಬಾದ್​ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 134 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಡೆವೋನ್​ ಕಾನ್ವೆ(77*) ಅವರ ಅಜೇಯ ಅರ್ಧಶತಕದ ನೆರವಿನಿಂದ 18. 4 ಓವರ್​ಗಳಿಂದ 3 ವಿಕೆಟ್​ ನಷ್ಟಕ್ಕೆ 138 ರನ್​ ಗಳಿಸಿ ಗೆಲುವಿನ ನಗೆ ಬೀರಿತು. ಇದು ಚೆನ್ನೈ ಸೂಪರ್​ ಕಿಂಗ್ಸ್ ತಂಡಕ್ಕೆ ಸತತ ಎರಡನೇ ಗೆಲುವಾಗಿದ್ದು ಹಾಲಿ ಆವೃತ್ತಿಯಲ್ಲಿ ಆಡಿದ ಏಳು ಪಂದ್ಯಗಳಲ್ಲಿ ನಾಲ್ಕನೇ ವಿಜಯವಾಗಿದೆ.

ಪಂದ್ಯ ಮುಕ್ತಾಯದ ಬಳಿಕ ಚೆನ್ನೈ ತಂಡದ ನಾಯಕ ಎಂ.ಎಸ್​. ಧೋನಿ ಅವರು ಹೈದರಾಬಾದ್​ ತಂಡದ ವೇಗಿ ಟಿ. ನಟರಾಜನ್​ ಅವರ ಪುತ್ರಿಯೊಂದಿಗೆ ತುಂಬಾ ಕ್ಯೂಟ್​ ಆಗಿ ಕೆಲ ಕಾಲ ಕುಶಲೋಪರಿ ನಡೆಸಿದ್ದಾರೆ. ಈ ವೇಳೆ ನಟರಾಜನ್​ ಪುತ್ರಿಯೂ ತನ್ನದೇ ಭಾಷೆಯಲ್ಲಿ ಉತ್ತರಿಸುತ್ತಿದ್ದರು. ಇದೇ ವೇಳೆ ಧೋನಿ ತಮ್ಮ ಮನೆಯಲ್ಲೂ ನಿನ್ನಷ್ಟಕ್ಕೇ ಇರುವ ಪಾಪು ಇದ್ದಾಳೆ ನಮ್ಮ ಮನೆಗೆ ಬರುತ್ತೀಯಾ ಎಂದು ಕೇಳಿದರು. ಸ್ವಲ್ಪ ಕಾಲ ಮಗುವಿನೊಂದಿಗೆ ಮಾತನಾಡಿದ ಬಳಿಕ ಧೋನಿ ನಟರಾಜನ್​ ದಂಪತಿಯೊಂದಿಗೆ ಫೋಟೊ ತೆಗೆಸಿಕೊಂಡರು. ಈ ವಿಡಿಯೊವನ್ನು ಚೆನ್ನೈ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ IPL 2023: ಕ್ಯಾಚ್​ ಹಿಡಿಯಲು ಅಡ್ಡಿಪಡಿಸಿದ ಕ್ಲಾಸೆನ್​ಗೆ ಕ್ಲಾಸ್​ ತೆಗೆದುಕೊಂಡ ಜಡೇಜಾ; ವಿಡಿಯೊ ವೈರಲ್​

ಐಪಿಎಲ್​ನಲ್ಲಿ ನೂತನ ದಾಖಲೆ ಬರೆದ ಧೋನಿ

ಈ ಪಂದ್ಯದಲ್ಲಿ ಧೋನಿ ಅವರು ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ವಿಕೆಟ್​ ಹಿಂದೆ 200 ವಿಕೆಟ್​ಗಳನ್ನು ಪಡೆದ ರೆಕಾರ್ಡ್​ ಮಾಡಿದ್ದಾರೆ. ಹೈದರಾಬಾದ್​ ತಂಡದ ಬ್ಯಾಟರ್​ ವಾಷಿಂಗ್ಟನ್​ ಸುಂದರ್ ಅವರನ್ನು ಔಟ್​ ಮಾಡುವ ಮೂಲಕ ಅವರು ಈ ದಾಖಲೆ ಬರೆದರು. ಐಪಿಎಲ್​ನಲ್ಲಿ ಈ ಸಾಧನೆ ಮಾಡಿದ ಮೊದಲ ವಿಕೆಟ್​ಕೀಪರ್​ ಎಂಬ ಹೆಗ್ಗಳಿಕೆಯನ್ನು ಮಹೇಂದ್ರ ಸಿಂಗ್ ಧೋನಿ ತಮ್ಮದಾಗಿಸಿಕೊಂಡಿದ್ದಾರೆ.

Exit mobile version