Site icon Vistara News

IPL 2023: ಧೋನಿ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ; ಕೋಚ್​ ಸ್ಟೀಫನ್ ಫ್ಲೆಮಿಂಗ್ ಮಾಹಿತಿ

Dhoni is not the best finisher for Imran Tahir, he was in RCB; Who are they?

ಚೆನ್ನೈ: ಬುಧವಾರದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಕೇವಲ ಮೂರು ರನ್​ ಅಂತರದಿಂದ ಸೋಲು ಕಂಡಿದೆ. ಪಂದ್ಯದ ಬಳಿಕ ಮಾತನಾಡಿದ ಚೆನ್ನೈ ತಂಡದ ಕೋಚ್​ ಸ್ಟೀಫನ್ ಫ್ಲೆಮಿಂಗ್ ಆತಂಕಕಾರಿ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ನಾಯಕ ಧೋನಿ ಅವರು ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.

ಚೆನ್ನೈಯ ಚೆಪಾಕ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ರಾಜಸ್ಥಾನ್​ ನಿಗದಿತ 20 ಓವರ್​ಗಲ್ಲಿ 7 ವಿಕೆಟ್​ ನಷ್ಟಕ್ಕೆ 175 ರನ್​ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ತನ್ನ ಪಾಲಿನ ಓವರ್​ನಲ್ಲಿ 6 ವಿಕೆಟ್​ ನಷ್ಟಕ್ಕೆ 172 ರನ್​ ಬಾರಿಸಿ ಕೇವಲ ಮೂರು ರನ್​ ಅಂತರದಿಂದ ಸೋಲು ಕಂಡಿತು.

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಒಂದು ಹಂತದ ವರೆಗೆ ಉತ್ತಮ ಸ್ಥಿತಿಯಲ್ಲಿತ್ತು. ಆ ಬಳಿಕ ನಾಟಕೀಯ ಕುಸಿತ ಕಂಡಿತು. ಈ ವೇಳೆ ನಾಯಕ ಧೋನಿ ಮತ್ತು ಜಡೇಜಾ ಕಡೇಯ ಮೂರು ಓವರ್​ಗಳಲ್ಲಿ ಹೋರಾಟ ನಡೆಸಿ ತಂಡಕ್ಕೆ ಗೆಲುವು ತಂದು ಕೊಡುವ ಎಲ್ಲ ಪ್ರಯತ್ನಗಳನ್ನು ಮಾಡಿದರು. ಶಕ್ತಿ ಮೀರಿ ಬ್ಯಾಟಿಂಗ್​ ನಡೆಸಿದ ಧೋನಿ ಮತ್ತು ಜಡೇಜಾ ರಾಜಸ್ಥಾನ್​ ಬೌಲರ್​ಗಳಿಗೆ ಬೆಂಡೆತ್ತಿದರು. ಅಂತಿಮ 12 ಎಸೆತಗಳಲ್ಲಿ 40 ರನ್​ ಬಾರಿಸುವ ಸಾವಲನ್ನು ಸಿಕ್ಸರ್​ ಮತ್ತು ಬೌಂಡರಿಗಳ ಮೂಲಕ ಚೆನ್ನೈ ಮೀರಿ ನಿಲ್ಲುವ ಎಲ್ಲ ಸಾಧ್ಯತೆ ಇತ್ತು.

ಸಂದೀಪ್​ ಶರ್ಮ ಎಸೆದ ಕೊನೆಯ ಓವರ್​ನಲ್ಲಿ ಧೋನಿ ಸತತ ಸಿಕ್ಸರ್​ ಬಾರಿಸಿದಾಗ ಚೆನ್ನೈ ಪಾಳಯದಲ್ಲಿ ಗೆಲುವಿನ ವಿಶ್ವಾಸ ಮೂಡಿತು. ಅಂತಿಮ ಎಸೆತದಲ್ಲಿ ಗೆಲುವಿಗೆ 5 ರನ್​ ಅವಶ್ಯಕತೆ ಇತ್ತು. ಈ ವೇಳೆ ಧೋನಿ ಸ್ಟ್ರೈಕ್​ನಲ್ಲಿದ್ದರು. ಧೋನಿ ತಮ್ಮ ಎಂದಿನ ಶೈಲಿಯಂತೆ ಈ ಪಂದ್ಯವನ್ನು ಸಿಕ್ಸರ್​ ಮೂಲಕ ಫಿನಿಶ್ ಮಾಡುತ್ತಾರೆ ಎಂದು ಎಲ್ಲರು ತುದಿಗಾಲಲ್ಲಿ ನಿಂತಿದ್ದರು. ಆದರೆ ಸಂದೀಪ್ ಶರ್ಮ​ ಸ್ಲೋ ಯಾರ್ಕರ್​ ಎಸೆದು ರಾಜಸ್ಥಾನಕ್ಕೆ ರೋಚಕ ಗೆಲುವು ತಂದು ಕೊಟ್ಟರು. ಧೋನಿ ಸಿಕ್ಸರ್​ ಬಾರಿಸುವಲ್ಲಿ ವಿಫಲರಾದರು.​ ರಾಜಸ್ಥಾನ್​ ವೀರೋಚಿತ ಗೆಲುವು ಸಾಧಿಸಿತು.

ಇದನ್ನೂ ಓದಿ IPL 2023 : ಆರ್​ ಅಶ್ವಿನ್​, ಅಜಿಂಕ್ಯ ರಹಾನೆ ಮಧ್ಯೆ ಮೈದಾನಲ್ಲೇ ಜಟಾಪಟಿ!

ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಸ್ಟೀಫನ್ ಫ್ಲೆಮಿಂಗ್, “ಧೋನಿ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ, ಇದು ಅವರಿಗೆ ಸ್ವಲ್ಪಮಟ್ಟಿಗೆ ಸಮಸ್ಯೆಯಾಗುತ್ತಿದೆ. ಟೂರ್ನಿ ಪ್ರಾರಂಭವಾಗುವ ಒಂದು ತಿಂಗಳ ಮೊದಲು ಅಭ್ಯಾಸಕ್ಕೆ ಬರುತ್ತಾರೆ. ಅವರು ಶ್ರೇಷ್ಠ ಆಟಗಾರ. ಅದರಲ್ಲಿ ಎಂದಿಗೂ ಅನುಮಾನವಿಲ್ಲ” ಸದ್ಯ ಅವರಿಗೆ ಮೊಣಕಾಲಿನ ನೋವು ಕಾಡುತ್ತಿದೆ” ಎಂದು ಹೇಳಿದರು.

ಫ್ಲೆಮಿಂಗ್ ಅವರು ಧೋನಿ ಗಾಯದಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದರೂ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಮಾತ್ರ ಹೇಳಿಲ್ಲ. ಇದರಿಂದ ಧೋನಿ ಅಭಿಮಾನಿಗಳು ಚಿಂತೆ ಪಡು ಅಗತ್ಯವಿಲ್ಲದಂತಾಗಿದೆ. ಆದರೆ ವೇಗಿ ಸಿಸಾಂಡ ಮಗಾಲಾ ಅವರು ಮುಂದಿನ ಕೆಲ ಪಂದ್ಯಗಳಲ್ಲಿ ಆಡುತ್ತಿಲ್ಲ ಎಂದು ಪ್ಲೆಮಿಂಗ್​ ಖಚಿತಪಡಿಸಿದ್ದಾರೆ. “ಮಗಾಲಾ ಅವರ ಬೆರಳು ಒಡೆದಿತ್ತು, ಆದ್ದರಿಂದ ಅವರು ಕೊನೆಯ ಎರಡು ಓವರ್‌ ಗಳನ್ನು ಬೌಲ್ ಮಾಡಲು ಸಾಧ್ಯವಾಗಲಿಲ್ಲ” ಎಂದು ಫ್ಲೆಮಿಂಗ್ ಹೇಳಿದ್ದಾರೆ.

Exit mobile version