Site icon Vistara News

IPL 2023: ಕೊಹ್ಲಿ ಬಳಿ ಕ್ಷಮೆ ಕೇಳಿದರೇ ನವೀನ್​ ಉಲ್​ ಹಕ್? ಟ್ವೀಟ್​ನಲ್ಲಿ ಏನಿದೆ?

naveen ul haq and virat kohli conversation

ಮುಂಬಯಿ: ವಿರಾಟ್​ ಕೊಹ್ಲಿ ಮತ್ತು ನವೀನ್​ ಉಲ್​-ಹಕ್​ ಅವರ ನಡುವಿನ ಶೀತಲ ಸಮರವೊಂದು ಇದೀಗ ಅಂತ್ಯ ಕಂಡಂತೆ ಕಾಣುತ್ತಿದೆ. ಇದಕ್ಕೆ ಕಾರಣ ನವೀನ್​ ಉಲ್​-ಹಕ್​ ಅವರ ಕ್ಷಮಾಪಣ ಪತ್ರ. ಹೌದು ವಿರಾಟ್​ ಕೊಹ್ಲಿಗೆ ಟ್ವೀಟ್​ ಮಾಡುವ ಮೂಲಕ ನವೀನ್​ ಉಲ್​-ಹಕ್ ಅವರು ಕ್ಷಮೆ ಕೇಳಿದ ಪೋಸ್ಟ್​ ಇದೀಗ ಬಾರಿ ವೈರಲ್​ ಆಗಿದೆ.

ಮೇ 1ರಂದು ಲಕ್ನೋದ ಏಕಾನ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಮತ್ತು ನವೀನ್​ ಉಲ್​-ಹಕ್​ ಮಧ್ಯೆ ಮೈದಾನದಲ್ಲಿಯೇ ಕಿರಿಕ್​ ಆಗಿತ್ತು. ಬಳಿಕ ಪಂದ್ಯ ಮುಗಿದ ಬಳಿಕ ಗಂಭೀರ್​ ಅವರು ಇದೇ ವಿಚಾರವಾಗಿ ಕೊಹ್ಲಿ ಜತೆ ವಾಗ್ವಾದ ನಡೆಸಿದ್ದರು. ಈ ಘಟನೆ ನಡೆದ ಬಳಿಕ ನವೀನ್ ಅವರು ವಿರಾಟ್​ ಕೊಹ್ಲಿ ಮತ್ತು ಆರ್​ಸಿಬಿ ಸೋತ ಬಳಿಕ ಮಾವಿನ ಹಣ್ಣಿನ ಫೋಟೊ ಹಾಕಿ ಪರೋಕ್ಷವಾಗಿ ಟ್ರೋಲ್​ ಮಾಡಿದ್ದರು. ಇಲ್ಲಿಂದ ಆರಂಭಗೊಂಡ ಈ ಸಮರವನ್ನು ಮುಂದೆ ವಿರಾಟ್​ ಅಭಿಮಾನಿಗಳು ಮುಂದುವರಿಸಿದರು.

ನವೀನ್​ ಉಲ್​-ಹಕ್​ ಅವರು ಎಲ್ಲೇ ಹೋದರೂ ವಿರಾಟ್​ ಅಭಿಮಾನಿಗಳು ಕೀಟಲೆ ನೀಡುತ್ತಿದ್ದರು. ಅವರನ್ನು ಕಂಡೊಡನೆ ಕೊಹ್ಲಿ…ಕೊಹ್ಲಿ ಎಂದು ಜೋರಾಗಿ ಕೂಗುತ್ತಿದ್ದರು. ಇದರಿಂದ ಬೇಸತ್ತು ಹೋಗಿದ್ದ ನವೀನ್​ ಉಲ್​ ಹಕ್​ ಅವರು ಇದೀಗ ತಾನು ವಿರಾಟ್​ ಕೊಹ್ಲಿಯ ಅಪ್ಪಟ ಅಭಿಮಾನಿ, ಅವರು ನನಗೆ ಸ್ಫೂರ್ತಿ, ನನ್ನ ಮನೆಯ ಕೋಣೆಯ ತುಂಬಾ ಅವರದ್ದೇ ಫೋಟೊಗಳಿಗೆ. ಅವರ ಬಳಿ ನಾನು ಕ್ಷಮೆಯಾಚಿಸುತ್ತೇನೆ. ಮುಂದಿನ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತೊರೆದು ಆರ್​ಸಿಬಿ ಪರ ಆಡಲು ಇಚ್ಛಿಸುತ್ತೇನೆ” ಎಂದು ಬರೆಯಲಾಗಿದೆ.


ಸದ್ಯ ಈ ಟ್ವೀಟ್​ ವೈರಲ್​ ಆಗುತ್ತಿದ್ದಂತೆ ಈ ಟ್ವೀಟ್​ನ ಅಸಲಿಯತ್ತು ಬಯಲಾಗಿದೆ. ವಿರಾಟ್ ಕೊಹ್ಲಿ ಅವರ ಅಭಿಮಾನಿಯೊಬ್ಬರು ನವೀನ್ ಉಲ್ ಹಕ್ ಹೆಸರಿನಲ್ಲಿ ನಕಲಿ ಖಾತೆ ತೆರೆದು ಈ ಟ್ವೀಟ್​ ಮಾಡಿದ್ದಾರೆ. ಕೆಲವರು ಈ ಟ್ವೀಟ್​ ಸುಳ್ಳು ಎಂದು ತಿಳಿದಿದ್ದರೂ ಶೇರ್​ ಮಾಡುವ ಮೂಲಕ ನವೀನ್ ಉಲ್ ಹಕ್ ಅವರನ್ನು ಪರೋಕ್ಷವಾಗಿ ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ IPL 2023 : ಮುಂಬಯಿ ಇಂಡಿಯನ್ಸ್ ಸ್ಟಾರ್​ ಬೌಲರ್​ಗೆ ಅವರ ಊರಲ್ಲಿ ಬ್ಯಾನ್​!

ಮುಂಬೈ ಆಟಗಾರರಿಂದಲೂ ಟ್ರೋಲ್​ ಆಗಿದ್ದ ನವೀನ್​

ಕಳೆದ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧದ ಎಲಿಮಿನೇಟ್​ ಪಂದ್ಯದಲ್ಲಿ ಗೆಲುವು ದಾಖಲಿಸಿದ ಬಳಿಕ ಮುಂಬೈ ತಂಡದ ಆಟಗಾರರಾದ ಸಂದೀಪ್​ ವಾರಿಯರ್​, ವಿಷ್ಣು ವಿನೋದ್​ ಮತ್ತು ಕುಮಾರ್​ ಕಾರ್ತಿಕೇಯ ಅವರು ಮೂರು ಮಾವಿನ ಹಣ್ಣುಗಳನ್ನು ಇಟ್ಟು ನವೀನ್​ ಉಲ್​​-ಹಕ್​ ಅವರನ್ನು ಟ್ರೋಲ್​ ಮಾಡಿದ್ದರು. ಮಹಾತ್ಮ ಗಾಂಧೀಜಿ ಅವರು ಹೇಳಿದ ಮೂರು ಕೋತಿಗಳ ಸಣ್ಣ ನೀತಿ ಕಥೆಯಾದ ಕೆಟ್ಟದನ್ನು ಕೇಳಬೇಡ, ಕೆಟ್ಟದ್ದನ್ನು ಮಾತನಾಡಬೇಡ, ಕೆಟ್ಟದ್ದನ್ನು ನೋಡಬೇಡ ಎಂಬಂತೆ ಮುಂಬೈ ತಂಡ ಈ ಮೂವರು ಆಟಗಾರು ಟೇಬಲ್​ನಲ್ಲಿ ಮೂರು ಮಾವಿನ ಹಣ್ಣು ಇಟ್ಟು ನವೀನ್​ ಉಲ್​ ಹಕ್​ ಅವರನ್ನು ಪರೋಕ್ಷವಾಗಿ ಟ್ರೋಲ್​ ಮಾಡಿದ್ದರು.

Exit mobile version