Site icon Vistara News

IPL 2023 | ಕೆಕೆಆರ್​ಗೆ​ ಗುಡ್​ಬೈ ಹೇಳಿದ ಇಂಗ್ಲೆಂಡ್​ ಕ್ರಿಕೆಟಿಗ ಸ್ಯಾಮ್​ ಬಿಲ್ಲಿಂಗ್ಸ್​

sam

ಮುಂಬಯಿ: ಐಪಿಎಲ್-2023(IPL 2023)ರ ಆಟಗಾರರ ಮಿನಿ ಹರಾಜಿಗೆ ಫ್ರಾಂಚೈಸಿಗಳು ಭರದ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಕೋಲ್ಕತಾ ನೈಟ್​ ರೈಡರ್ಸ್​ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಇಂಗ್ಲೆಂಡ್‌ ತಂಡದ ವಿಕೆಟ್​ಕೀಪರ್​ ಕಮ್​ ಬ್ಯಾಟರ್ ಸ್ಯಾಮ್ ಬಿಲ್ಲಿಂಗ್ಸ್ ಮುಂದಿನ ಐಪಿಎಲ್‌ನಿಂದ ಹೊರಗುಳಿಯುವುದಾಗಿ ಘೋಷಿಸಿದ್ದಾರೆ.

ಸೋಮವಾರ ಟ್ವೀಟ್​ ಮಾಡಿರುವ ಸ್ಯಾಮ್​ ಬಿಲ್ಲಿಂಗ್ಸ್​ ” ಮುಂದಿನ ಐಪಿಎಲ್‌ನಲ್ಲಿ ನಾನು ಕೆಕೆಆರ್ ತಂಡದ ಪರ ಆಡುವುದಿಲ್ಲ ಎನ್ನುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ದೀರ್ಘಾವಧಿ ಮಾದರಿಯ ಏಕದಿನ ಮತ್ತು ಟೆಸ್ಟ್​ ಕ್ರಿಕೆಟ್‌ನತ್ತ ಗಮನಹರಿಸುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ” ಎಂದು ಟ್ವೀಟ್​ ಮಾಡಿದ್ದಾರೆ. ಜತೆಗೆ ಅವಕಾಶ ನೀಡಿದ್ದಕ್ಕಾಗಿ ಕೆಕೆಆರ್ ತಂಡಕ್ಕೆ ಧವ್ಯವಾದ ತಿಳಿಸಿದ್ದು ಭವಿಷ್ಯದಲ್ಲಿ ಮತ್ತೆ ನಿಮ್ಮನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

2022ರ ಐಪಿಎಲ್‌ಗೆ ಮುನ್ನ ಕೆಕೆಆರ್ ತಂಡ ಮೆಗಾ ಹರಾಜಿನಲ್ಲಿ ಸ್ಯಾಮ್ ಬಿಲ್ಲಿಂಗ್ಸ್‌ ಅವರನ್ನು 2 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. 2022ರ ಐಪಿಎಲ್‌ನಲ್ಲಿ ಬಿಲ್ಲಿಂಗ್ಸ್ ಕೆಕೆಆರ್​ ಪರ 8 ಪಂದ್ಯಗಳನ್ನಾಡಿ 24.14 ರ ಸರಾಸರಿಯಲ್ಲಿ 169 ರನ್ ಗಳಿಸಿದ್ದರು. ಒಟ್ಟಾರೆ ಐಪಿಎಲ್​ ಇತಿಹಾಸದಲ್ಲಿ 30 ಪಂದ್ಯಗಳನ್ನು ಆಡಿರುವ ಬಿಲ್ಲಿಂಗ್ಸ್​ 503 ರನ್​ ಕಲೆಹಾಕಿದ್ದಾರೆ. ಇದರಲ್ಲಿ ಒಂದು ಅರ್ಧ ಶತಕವೂ ದಾಖಲಾಗಿದೆ.

ಇದನ್ನೂ ಓದಿ | IPL 2023 | ಕೋಲ್ಕೊತಾ ನೈಟ್‌ ರೈಡರ್ಸ್‌ ತಂಡದ ಪಾಲಾದ ಶಾರ್ದೂಲ್‌ ಠಾಕೂರ್‌

Exit mobile version