ಮುಂಬಯಿ: ಐಪಿಎಲ್ನಲ್ಲಿ(IPL 2023) ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಸತತವಾಗಿ ಎಡವುತ್ತಿರುವ ಆರ್ಸಿಬಿ ತಂಡದ ಆಟಗಾರ ದಿನೇಶ್ ಕಾರ್ತಿಕ್(Dinesh Karthik) ಆಟದ ಬಗ್ಗೆ ಆರ್ಸಿಬಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ದಯವಿಟ್ಟು ಕ್ರಿಕೆಟ್ಗೆ ವಿದಾಯ ಹೇಳಿ ಮತ್ತೆ ಕಾಮೆಂಟ್ರಿ ಬಾಕ್ಸ್ಗೆ ತೆರಳಿ ಎಂದು ಸಲಹೆ ನೀಡಿದ್ದಾರೆ. ಕೆಲವರು ಟ್ರೋಲ್ ಮಾಡಿದ್ದಾರೆ,
ಕಳೆದ ಆವೃತ್ತಿಯಲ್ಲಿ ಗ್ರೇಟ್ ಫಿನಿಷರ್ ಪಾತ್ರವಹಿಸಿ ಮಿಂಚಿದ್ದ ದಿನೇಶ್ ಕಾರ್ತಿಕ್ ಅಚ್ಚರಿ ಎಂಬಂತೆ ಟಿ20 ವಿಶ್ವ ಕಪ್ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಅಲ್ಲಿಯೂ ಕೂಡ ತೀರಾ ಕಳಪೆ ಪ್ರದರ್ಶನ ತೋರುವ ಮೂಲಕ ಟೀಕೆಗೆ ಗುರಿಯಾಗಿದ್ದರು. ಇದೀಗ ಐಪಿಎಲ್ನಲ್ಲಿಯೂ ನೀರಸ ಪ್ರದರ್ಶನ ತೋರುತ್ತಿದ್ದಾರೆ. ಪ್ರತಿ ಪಂದ್ಯದಲ್ಲಿಯೂ ಒಂದಕಿಗೆ ಸೀಮಿತರಾಗುತ್ತಿದ್ದಾರೆ. ಜತೆಗೆ ಕಳಪೆ ಮಟ್ಟದ ಕೀಪಿಂಗ್ನಿಂದಲೂ ತಂಡದ ಹಿನ್ನಡೆಗೆ ಕಾರಣರಾಗುತ್ತಿದ್ದಾರೆ. ಅವರ ಈ ಪ್ರದರ್ಶನ ಕಂಡ ಆರ್ಸಿಬಿ ಅಭಿಮಾನಿಗಳು ಬೇಸರಗೊಂಡು ಕ್ರಿಕೆಟ್ಗೆ ವಿದಾಯ ಹೇಳುವಂತೆ ಸಲಹೆ ನೀಡಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ನೆಟ್ಟಿಗರು, “ಪಂದ್ಯವನ್ನು ಗೆಲ್ಲಿಸುವಂತ ಆಟಗಾರರಿಗೆ ಅವಕಾಶ ನೀಡಿ. ಮುಂದಿನ ಆವೃತ್ತಿಯಲ್ಲಿ ಅವರನ್ನು ದಯವಿಟ್ಟು ತಂಡದಿಂದ ಕೈಬಿಡಬೇಕು, ಅವರು ಕಾಮೆಂಟ್ರಿ ಬಾಕ್ಸ್ಗೆ ತೆರಳಲಿ” ಎಂದು ಟ್ರೋಲ್ ಮಾಡಿದ್ದಾರೆ. ಕಳೆದ ರಾಜಸ್ಥಾನ್ ವಿರುದ್ಧ ಪಂದ್ಯದಲ್ಲಿ ಕಾರ್ತಿಕ್ 13 ಎಸೆತಗಳಲ್ಲಿ 16 ರನ್ಗಳಿಸಿದ್ದರು. ಇದೇ ವೇಳೆ ಅವರು ವನಿಂದು ಹಸರಂಗ ಅವರನ್ನು ರನೌಟ್ ಆಗುವಂತೆ ಮಾಡಿದರು. ಐಪಿಎಲ್ನಲ್ಲಿ ದಿನೇಶ್ ಕಾರ್ತಿಕ್ ಅವರು ಸಹ ಆಟಗಾರರನ್ನು ರನೌಟ್ ಆಗುವಂತೆ ಮಾಡಿದ್ದು ಇದು 26ನೇ ನಿದರ್ಶನವಾಗಿದೆ.
ಇದನ್ನೂ ಓದಿ IPL 2023: ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್; ಹೈದರಾಬಾದ್ ಎದುರಾಳಿ
7 ರನ್ ಗೆಲುವು ಸಾಧಿಸಿದ ಆರ್ಸಿಬಿ
ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾನುವಾರದ ಐಪಿಎಲ್ನ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಸಣ್ಣ ಅಂತರದಿಂದ ಸೋಲು ಕಂಡಿತು.