ಸಿಡ್ನಿ: 16ನೇ ಆವೃತ್ತಿಯ ಐಪಿಎಲ್ನಲ್ಲಿ(IPL 2023) ಮುಂಬೈ ಇಂಡಿಯನ್ಸ್ ತಂಡದ ಪರ ಬೌಲಿಂಗ್ ಮತ್ತು ಬ್ಯಾಟಿಂಗ್ ಮಾಡಲು ಪೂರ್ಣ ಸಿದ್ಧವಿದ್ದೇನೆ ಎಂದು ಆಸೀಸ್ ಆಲ್ರೌಂಡರ್ ಕ್ಯಾಮರಾನ್ ಗ್ರೀನ್ ಖಚಿತಪಡಿಸಿದ್ದಾರೆ. ಕೆಳ ದಿನಗಳ ಹಿಂದೆ ಗ್ರೀನ್ ಐಪಿಎಲ್ನಲ್ಲಿ ಬೌಲಿಂಗ್ ಮಾಡಲು ಸಾಧ್ಯವಿಲ್ಲ ಎಂಬ ವದಂತಿಗಳು ಹಬ್ಬಿತ್ತು. ಈ ವದಂತಿಯನ್ನು ಸ್ವತಃ ಗ್ರೀನ್ ನಿರಾಕರಿಸಿದ್ದಾರೆ.
“ನಾನು ಆರೋಗ್ಯವಾಗಿದ್ದೇನೆ. ಐಪಿಎಲ್ನಲ್ಲಿ ಆಡುವುದಿಲ್ಲ ಎಂಬ ವದಂತಿಗಳು ಎಲ್ಲಿಂದ, ಹೇಗೆ ಹಬ್ಬಿದವು ಎಂದು ಗೊತ್ತಿಲ್ಲ. ನಾನು 100 ಪ್ರತಿಶತ ಐಪಿಎಲ್ ಆಡುತ್ತೇನೆ” ಎಂದು ಗ್ರೀನ್ ಸ್ಪಷ್ಟಪಡಿಸಿದ್ದಾರೆ.
ಗ್ರೀನ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಇತಿಹಾಸದಲ್ಲೇ 2ನೇ ಗರಿಷ್ಠ 17.5 ಕೋಟಿ ರೂ.ಗಳಿಗೆ ಮುಂಬೈ ತಂಡಕ್ಕೆ ಮಾರಾಟವಾಗಿದ್ದಾರೆ. ಇತ್ತೀಚೆಗೆ ಪ್ರವಾಸಿ ದ. ಆಫ್ರಿಕಾ ವಿರುದ್ಧ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಅವರು ಕೈಬೆರಳಿಗೆ ಗಾಯ ಮಾಡಿಕೊಂಡಿದ್ದರು. ಇದೇ ಹಿನ್ನೆಲೆಯಲ್ಲಿ ಅವರು ಐಪಿಎಲ್ ಆಡುವುದಿಲ್ಲ, ಬೌಲಿಂಗ್ ಮಾಡುವುದಿಲ್ಲ ಎಂದೆಲ್ಲ ವದಂತಿಗಳು ಹಬ್ಬಿದ್ದವು. ಆದರೆ ಈ ವದಂತಿಗೆ ಇದೀಗ ಗ್ರೀನ್ ತೆರೆ ಎಳೆದಿದ್ದಾರೆ.
ಇದನ್ನೂ ಓದಿ | IPL 2023 | ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಸೌರವ್ ಗಂಗೂಲಿ!