Site icon Vistara News

IPL 2023: ಗಿಲ್​ ಪ್ರಚಂಡ ಬ್ಯಾಟಿಂಗ್​ಗೆ ಪಂತ್​ ಸೇರಿ ಹಲವು ದಿಗ್ಗಜದಿಂದ ಮೆಚ್ಚುಗೆ

shubman gill century

ಅಹಮದಾಬಾದ್​: ನ್ಯೂ ಬ್ಯಾಟಿಂಗ್​ ಸೆನ್ಸೇಷನಲ್ ಶುಭಮನ್​ ಗಿಲ್ ಅವರ ಪ್ರಚಂಡ ಬ್ಯಾಟಿಂಗ್​ ಪ್ರದರ್ಶನಕ್ಕೆ ಟೀಮ್ ಇಂಡಿಯಾ ಮಾತ್ರವಲ್ಲದೆ ವಿಶ್ವದ ಅನೇಕ ಹಾಲಿ ಮತ್ತು ಮಾಜಿ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗಿಲ್​ ಭವಿಷ್ಯದ ಕ್ರಿಕೆಟ್​ ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂಬೈ ವಿರುದ್ಧದ ದ್ವಿತೀಯ ಕ್ವಾಲಿಫೈಯರ್​ ಪಂದ್ಯದಲ್ಲಿ ಶುಭಮನ್​​ ಗಿಲ್​ ಅವರು ಅಮೋಘ ಶತಕ ಬಾರಿಸಿ ಮಿಂಚಿದ್ದರು. 60 ಎಸೆತ ಎದುರಿಸಿದ ಗಿಲ್​ ಬರೊಬ್ಬರಿ 10 ಸಿಕ್ಸರ್​ ಮತ್ತು 7 ಬೌಂಡರಿ ನೆರವಿನಿಂದ 129 ರನ್​ ಗಳಿಸಿದರು. ಇದು ಅವರ ಐಪಿಎಲ್​ನ ಮೂರನೇ ಶತಕವಾಗಿದೆ. ಸದ್ಯ ಅವರು ಆಡಿದ 16 ಪಂದ್ಯಗಳಿಂದ 851 ರನ್​ ಗಳಿಸಿದ್ದಾರೆ. ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎಂಬ ಹಿರಿಮೆಗೂ ಗಿಲ್​ ಪಾತ್ರರಾದರು. ವಿರಾಟ್​ ಕೊಹ್ಲಿ, ಜಾಸ್​ ಬಟ್ಲರ್​ ಮತ್ತು ಡೇವಿಡ್​ ವಾರ್ನರ್​ ಈ ಸಾಧನೆ ಮಾಡಿದ ಮೊದಲಿಗರು.

23 ವರ್ಷಗದ ಗಿಲ್​ ಅವರು ಈಗಾಗಲೇ ಹಲವು ದಾಖಲೆಗಳನ್ನು ಬರೆದು ಮುನ್ನುಗ್ಗುತ್ತಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸಿದ ಸಾಧನೆಯೂ ಅವರದ್ದಾಗಿದೆ. ಸದ್ಯ ಕ್ರಿಕೆಟ್​ ಲೋಕದಲ್ಲಿ ಭವಿಷ್ಯದ ವಿರಾಟ್​ ಕೊಹ್ಲಿ ಎಂದು ಸದ್ದು ಮಾಡುತ್ತಿರುವ ಇವರನ್ನು ಹಲವು ಮಾಜಿ ಮತ್ತು ಹಾಲಿ ಕ್ರಿಕೆಟ್ ದಿಗ್ಗಜರು ಹಾಡಿ ಹೊಗಳಿದ್ದಾರೆ. ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ರಿಷಭ್​ ಪಂತ್​ ಅವರು “ಕ್ಲಾಸ್​ ಬಾಬಾ” ಸೊಗಸಾದ ಆಟ ಎಂದು ಹೊಗಳಿದ್ದಾರೆ.

ಇದನ್ನೂ ಓದಿ IPL 2023: ಶುಭಮನ್​ ಗಿಲ್​ ಹೊಗಳಿದ ರೋಹಿತ್​ ಶರ್ಮ; ಕಾರಣ ಇದಂತೆ

​ವಿರಾಟ್​ ಕೊಹ್ಲಿ ಅವರು ಗಿಲ್​ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿಸಲು ಪದಗಳೆ ಸಾಲುತ್ತಿಲ್ಲ ಎಂದಿದ್ದಾರೆ. ಎಬಿಡಿ ವಿಲಿಯರ್ಸ್ ಅವರು “ಕ್ರಿಕೆಟ್​ ಜಗತ್ತಿನಲ್ಲಿ ಸಾಧನೆ ಮಾಡಿದ ದಿಗ್ಗಜರ ಸಾಲಿನಲ್ಲಿ ನಿಮ್ಮ ಹೆಸರು ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದಿದ್ದಾರೆ. ಟೀಮ್​ ಇಂಡಿಯಾದ ಮಾಜಿ ಡ್ಯಾಶಿಂಗ್​ ಓಪನರ್​ ವಿರೇಂದ್ರ ಸೆಹವಾಗ್​ ಅವರು,” ಎಂತಹ ಅದ್ಭುತ ಆಟಗಾರ, ಶತಮಾನಗಳಿಗೊಮ್ಮೆ ಇಂತಹ ಆಟಗಾರರು ಕಾಣಿಸಿಕೊಳ್ಳುತ್ತಾರೆ” ಎಂದು ಹೇಳಿದ್ದಾರೆ. ಹೀಗೆ ಹಲವು ಕ್ರಿಕೆಟಿಗರು ಗಿಲ್​ ಬ್ಯಾಟಿಂಗ್​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಚ್ಚರಿ ಎಂದರೆ ಪಾಕ್​ ಕ್ರಿಕೆಟ್​ ತಂಡದ ಕೆಲ ಆಟಗಾರರು ಗಿಲ್​ ಅವರ ಬ್ಯಾಟಿಂಗ್​ಗೆ ತಲೆಬಾಗಿದ್ದಾರೆ. ಕ್ರಿಕೆಟ್​ನಲ್ಲಿ ಗಿಲ್​ಗೆ ಉತ್ತಮ ಭವಿಷ್ಯವಿದೆ ಎಂದು ಹಾರೈಸಿದ್ದಾರೆ.

Exit mobile version