Site icon Vistara News

IPL 2023: ಕ್ರಿಕೆಟ್​ ಅಭಿಮಾನಿಗಳಿಗೆ ಸಿಹಿ ಸುದ್ದಿ; ಫೈನಲ್​ ಪಂದ್ಯ ಖಚಿತ

Narendra Modi Stadium, Ahmedabad

ಅಹಮದಾಬಾದ್​: ಭಾರಿ ಮಳೆಯಿಂದಾಗಿ ಭಾನುವಾರ ನಡೆಯಬೇಕಿದ್ದ ಐಪಿಎಲ್​ ಫೈನಲ್​ ಪಂದ್ಯ ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಿಕೆಯಾಗಿತ್ತು. ಈ ವೇಳೆ ಸೋಮವಾರವೂ ಕೂಡ ಪಂದ್ಯ ನಡೆಯುವುದು ಅನುಮಾನ ಎಂದು ಹೇಳಲಾಗಿತ್ತು. ಆದರೆ ಇದೀಗ ಕ್ರಿಕೆಟ್​ ಅಭಿಮಾನಿಗಳಿಗೆ ಖುಷಿಯ ಸುದ್ದಿಯೊಂದು ಹೊರಬಿದ್ದಿದೆ. ಅಹಮದಾಬಾದ್​ನಲ್ಲಿ ಸದ್ಯ ಯಾವುದೇ ಮಳೆಯಾಗುವ ಸಾಧ್ಯತೆ ಇಲ್ಲ. ಈ ಕುರಿತ ಹಲವು ಫೋಟೊಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಕ್ಷಣ ಕ್ಷಣಕ್ಕೂ ಅಪ್​ಲೋಡ್​ ಆಗುತ್ತಿವೆ.

ಸೋಮವಾರ ಅಹಮದಾಬಾದ್​ನಲ್ಲಿ ಭಾರಿ ಬಿಸಿಲು ಕಂಡು ಬಂದಿದೆ. ಹೀಗಾಗಿ ಪಂದ್ಯ ನಡೆಯುವುದು ಬಹುತೇಕ ಖಚಿತ ಎನ್ನಬಹುದು. ಒಂದೊಮ್ಮೆ ಪಂದ್ಯದ ವೇಳೆ ಮಳೆ ಬಂದರೂ ನಿನ್ನೆಯಷ್ಟು ಪ್ರಮಾಣದಲ್ಲಿ ಮಳೆ ಸುರಿಯುವುದಿಲ್ಲ ಎಂದು ಹವಾಮಾನ ಇಲಾಖೆ ಕೆಲೆ ಗಂಟೆಗಳ ಹಿಂದೆ ಮಾಹಿತಿ ನೀಡಿತ್ತು. ಒಟ್ಟಾರೆ ಪಂದ್ಯ ನಡೆಯಲಿ ಎನ್ನುವುದು ಕ್ರಿಕೆಟ್​ ಅಭಿಮಾನಿಗಳ ಆಶಯವಾಗಿದೆ.

ಮೀಸಲು ದಿನವೂ ಮಳೆ ಬಂದರೆ ಏನು ಗತಿ?

. ಒಂದು ವೇಳೆ ಮೀಸಲು ದಿನದಂದು ಹೆಚ್ಚುವರಿ ಸಮಯದ ಅಂತ್ಯದ ವೇಳೆಗೆ 5-ಓವರ್‌ಗಳ ಪಂದ್ಯವನ್ನೂ ಪೂರ್ಣಗೊಳಿಸಲು ಸಾಧ್ಯವಾಗದ ಸಂದರ್ಭದಲ್ಲಿ, ಫಲಿತಾಂಶ ಪಡೆಯಲು ಸೂಪರ್ ಓವರ್ ಆಡಲಾಗುತ್ತದೆ. ಆದರೆ ತಂಡಗಳು ಅನುಮತಿಸಿದರೆ ಮಾತ್ರ. ಅಂದರೆ ಪಿಚ್ ಮತ್ತು ಮೈದಾನ ಆಟಕ್ಕೆ ಸಿದ್ಧವಾಗಿರಬೇಕು ಆದ್ದರಿಂದ ಇಂತಹ ಸಂದರ್ಭದಲ್ಲಿ ಸೂಪರ್ ಓವರ್ 1.20 ಕ್ಕೆ ಪ್ರಾರಂಭವಾಗುತ್ತದೆ.

ಮೀಸಲು ದಿನದಂದೂ ಸೂಪರ್ ಓವರ್​ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ, ಆಗ ನಿಯಮಿತ ಋತುವಿನ 70 ಪಂದ್ಯಗಳ ನಂತರ ಲೀಗ್ ಟೇಬಲ್‌ನಲ್ಲಿ ಅಗ್ರ ಸ್ಥಾನ ಗಳಿಸಿದ ತಂಡವನ್ನು ವಿಜೇತ ಎಂದು ಘೋಷಿಸಲಾಗುತ್ತದೆ. ಈ ಅದೃಷ್ಟ ಗುಜರಾತ್​ ತಂಡಕ್ಕೆ ಒಲಿಯಲಿದೆ.

Exit mobile version