Site icon Vistara News

IPL 2023: ಬೆಂಗಳೂರಿನಲ್ಲಿ ಭಾರಿ ಮಳೆ; ಆರ್​ಸಿಬಿ ಅಭಿಮಾನಿಗಳಿಗೆ ಆತಂಕ

RCB VS GT

#image_title

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ರಸ್ತೆಗಳು ಜಲಾವೃತಗೊಂಡಿದ್ದು ಮರಗಳು ಧರೆಗುರುಳಿದೆ. ಮಳೆಯಿಂದಾಗಿ ಆರ್​ಸಿಬಿ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಇದಕ್ಕೆ ಕಾರಣ ಇಂದು ಆರ್​ಸಿಬಿ ಮತ್ತು ಗುಜರಾತ್​ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಪ್ಲೇ ಆಫ್​ ಪ್ರವೇಶಕ್ಕೆ ಆರ್​ಸಿಬಿಗೆ ಈ ಪಂದ್ಯ ಮಹತ್ವದ್ದಾಗಿದೆ.

ಸದ್ಯ ಮಳೆ ಸದ್ಯ ಮಳೆ ಪ್ರಮಾಣ ತಗ್ಗಿದ್ದು ಪಂದ್ಯ ಮಾತ್ರ ನಿಗದಿತ ಸಮಯಕ್ಕೆ ಆರಂಭವಾಗುವುದು ಅನುಮಾನ ಎನ್ನಲಾಗಿದೆ. ಇನ್ನೊಂದೆಡೆ ಮೈದಾನದ ತುಂಬ ನೀರು ತುಂಬಿದೆ. ಒಂದೊಮ್ಮೆ ಈ ಪಂದ್ಯ ನಡೆಯಲಿದ್ದರೆ, ಮುಂಬೈ ತಂಡ ಹೈದರಾಬಾದ್​ ವಿರುದ್ಧ ಗೆದ್ದರೆ ಆರ್​ಸಿಬಿ ಪ್ಲೇ ಆಫ್​ ಕನಸಿಗೆ ಮಳೆ ತಣ್ಣೀರೆರಚಲಿದೆ. ಮುಂಬೈ ಸೋತರೆ ಆರ್​ಸಿಬಿಗೆ ಈ ಪಂದ್ಯ ನಡೆಯದಿದ್ದರೂ ಯಾವುದೇ ಹಾನಿಯಾಗದು. ಒಂದು ಅಂಕ ಸಂಪಾದಿಸಿ ಆರ್​ಸಿಬಿ ಪ್ಲೇ ಆಪ್​ಗೆ ಪ್ರವೇಶ ಪಡೆಯಲಿದೆ. ಸದ್ಯ ಆರ್​ಸಿಬಿ ಅಭಿಮಾನಿಗಳು ಹೈದರಾಬಾದ್​ ತಂಡದ ಗೆಲುವನ್ನು ಹಾರೈಸುತ್ತಿದ್ದಾರೆ.

ಪ್ಲೇ ಆಫ್ ಹೋರಾಟದಲ್ಲಿ ಈಗಾಗಲೇ ಮೂರು ಸ್ಥಾನಗಳು ಭರ್ತಿಯಾಗಿದೆ. ಇನ್ನುಳಿದ ಒಂದು ಸ್ಥಾನಕ್ಕಾಗಿ ಆರ್​ಸಿಬಿ, ಮುಂಬೈ ಮತ್ತು ರಾಜಸ್ಥಾನ್​ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಒಂದೊಮ್ಮೆ ಮುಂಬೈ ಮತ್ತು ಆರ್​ಸಿಬಿ ಸೋತರೆ ಆಗ ರಾಜಸ್ಥಾನ್​ ಅದೃಷ್ಟದಿಂದ ಪ್ಲೇ ಆಫ್​ ಪ್ರವೇಶ ಪಡೆಯಲಿದೆ. ಉಭಯ ತಂಡಗಳು ಸೋತು ರನ್​ ರೇಟ್​ನಲ್ಲಿ ಕುಸಿತ ಕಾಣುವ ಕಾರಣದಿಂದ ರಾಜಸ್ಥಾನ್​ಗೆ ಈ ಲಕ್​ ಒಲಿಯಲಿದೆ.

ಇದನ್ನೂ ಓದಿ IPL 2023: ವಾರ್ನರ್​ ಕತ್ತಿವರಸೆ ಕಂಡು ದಂಗಾದ ಜಡೇಜಾ; ವಿಡಿಯೊ ವೈರಲ್​

ಸಂಭಾವ್ಯ ತಂಡಗಳು

ರಾಯಲ್​ ಚಾಲೆಂಜರ್ಸ್​ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್(ನಾಯಕ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್​​ವೆಲ್, ಮಹಿಪಾಲ್ ಲಾಮ್ರೊರ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಸುಯಾಶ್ ಪ್ರಭುದೇಸಾಯಿ, ವನಿಂದು ಹಸರಂಗ, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್​ವುಡ್​.

ಗುಜರಾತ್​ ಟೈಟನ್ಸ್​: ಶುಭಮನ್ ಗಿಲ್, ವೃದ್ಧಿಮಾನ್ ಸಾಹ, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ದಸುನ್ ಶನಕಾ, ರಾಹುಲ್ ತೆವಾಟಿಯಾ, ಮೋಹಿತ್ ಶರ್ಮಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್.

Exit mobile version