ಅಹಮದಾಬಾದ್: ಪ್ಲೇ ಆಫ್ ಬಾಗಿಲಿನ ಸನಿಹಕ್ಕೆ ಬಂದು ನಿಂತಿರುವ ಗುಜರಾತ್ ಟೈಟನ್ಸ್ ಮತ್ತು ಈ ರೇಸ್ನಿಂದ ಬಹುತೇಕ ಹೊರಬಿದ್ದಿರುವ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಸೋಮವಾರದ ಐಪಿಎಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಅಣಿಯಾಗಿದೆ.
ಹಾರ್ದಿಕ್ ಪಾಂಡ್ಯ ಪಡೆ ಕಳೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ದೊಡ್ಡ ಮೊತ್ತವನ್ನು ಬೆನ್ನಟ್ಟುವಲ್ಲಿ ಎಡವಿದರೂ ರಶೀದ್ ಖಾನ್ ಅವರ ಹೋರಾಟ ಎಲ್ಲರನ್ನು ಬೆಚ್ಚಿಬೀಳಿಸಿತ್ತು. ಇದೀಗ ಸನ್ರೈಸರ್ಸ್ ವಿರುದ್ಧವೂ ಅವರ ಈ ಆಲ್ರೌಂಡರ್ ಆಟವನ್ನು ನಿರೀಕ್ಷೆ ಮಾಡಲಾಗಿದೆ. ಸಾರಸ್ಯವೆಂದರೆ ಹೈದರಾಬಾದ್ ರಶೀದ್ ಖಾನ್ ಅವರ ಮಾಜಿ ತಂಡ ಆಗಿದೆ. ಹೀಗಾಗಿ ತಮ್ಮ ಮಾಜಿ ತಂಡದ ವಿರುದ್ಧ ಅವರು ಅಬ್ಬರಿಸಲಿದ್ದಾರಾ ಎಂಬುದು ಕೂಡ ಈ ಪಂದ್ಯದ ಕುತೂಹಲವಾಗಿದೆ.
ಹೈದರಾಬಾದ್ಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯ
ಮಾರ್ಕ್ರಮ್ ಸಾರಥ್ಯದ ಹೈದರಾಬಾದ್ ಈಗಾಗಲೇ ಆಡಿದ 11 ಪಂದ್ಯಗಳಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಮಾತ್ರ ಗೆದ್ದಿದೆ. ಉಳಿದಿರುವ ಮೂರು ಪಂದ್ಯಗಳನ್ನು ಗೆದ್ದರೂ ಪ್ಲೇ ಆಫ್ ಆಸೆ ಕ್ಷೀಣವಾಗಿದೆ. ಆದ್ದರಿಂದ ಹೈದರಾಬಾದ್ಗೆ ಇದೊಂದು ಲೆಕ್ಕಭರ್ತಿಯ ಪಂದ್ಯ ಎಂದರೂ ತಪ್ಪಾಗಲಾರದು. ಒಂದೊಮ್ಮೆ ಮೂರು ಪಂದ್ಯಗಳನ್ನು ಗೆದ್ದರೂ ಪವಾಡ ನಡೆದರಷ್ಟೇ ಹೈದರಾಬಾದ್ ಪ್ಲೇ ಆಫ್ ಪ್ರವೇಶ ಪಡೆಯಬಹುದು. ಅತ್ಯಧಿಕ ಬೌಲರ್ಗಳನ್ನು ಹೊಂದಿರುವ ತಂಡವಾಗಿದ್ದರೂ ಬ್ಯಾಟಿಂಗ್ನಲ್ಲಿ ತೀರಾ ಕಳಪೆ ಮಟ್ಟದ ಪ್ರದರ್ಶನ. ಯಾರು ಕೂಡ ನಿಂತು ಆಡುತ್ತಿಲ್ಲ.
ಗುಜರಾತ್ ತಂಡ ಎಲ್ಲ ವಿಭಾಗದಲ್ಲಿಯೂ ಬಲಿಷ್ಠವಾಗಿದೆ. ಜತೆಗೆ ಇದು ಪಾಂಡ್ಯ ಪಡೆಗೆ ತವರಿನ ಪಂದ್ಯವಾಗಿದೆ. ತವರಿನಲ್ಲಿ ಇದುವರೆಗೆ ಆಡಿದ ಬಹುತೇಕ ಪಂದ್ಯದಲ್ಲಿ ಗುಜರಾತ್ ಗೆದ್ದು ಬೀಗಿದೆ. ಹೀಗಾಗಿ ಈ ಪಂದ್ಯದಲ್ಲಿಯೂ ಗುಜರಾತ್ ನೆಚ್ಚಿನ ತಂಡವಾಗಿದೆ.
ಸಂಭಾವ್ಯ ತಂಡಗಳು
ಗುಜರಾತ್ ಟೈಟನ್ಸ್: ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ.
ಇದನ್ನೂ ಓದಿ IPL 2023: ಮತ್ತೆ ಗಂಭೀರ್ ಕಾಳೆಲೆದ ಕೊಹ್ಲಿ ಅಭಿಮಾನಿಗಳು
ಸನ್ರೈಸರ್ಸ್ ಹೈದರಾಬಾದ್: ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಮ್ (ನಾಯಕ), ಹೆನ್ರಿಕ್ ಕ್ಲಾಸೆನ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಅಕೀಲ್ ಹುಸೇನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಉಮ್ರಾನ್ ಮಲಿಕ್.