ಚೆನ್ನೈ: ಗೆಲುವಿನ ಲಯದಲ್ಲಿರುವ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶುಕ್ರವಾರ ನಡೆಯುವ ಐಪಿಎಲ್(IPL 2023) ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಆರ್ಸಿಬಿ ವಿರುದ್ಧ ಗೆದ್ದ ಖುಷಿಯಲ್ಲಿರುವ ಚೆನ್ನೈ ಇದೀಗ ತವರಿನಲ್ಲಿ ನಡೆಯುವ ಈ ಪಂದ್ಯದಲ್ಲಿಯೂ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.
ಗಾಯದಿಂದ ಚೇತರಿಸಿಕೊಂಡಿರುವ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರು ಈ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ. ಹೀಗಾಗಿ ಚೆನ್ನೈ ತಂಡ ಮತ್ತಷ್ಟು ಬಲಿಷ್ಠಗೊಳ್ಳಲಿದೆ. ಆದರೆ ಸಮಸ್ಯೆ ಇರುವುದು ಬೌಲಿಂಗ್ ವಿಭಾಗದಲ್ಲಿ ತಂಡದ ಬೌಲಿಂಗ್ ಇನ್ನೂ ಕೂಡ ಸುಧಾರಣೆ ಕಂಡಿಲ್ಲ. ಪ್ರಧಾನ ವೇಗಿ ದೀಪಕ್ ಚಹರ್ ಅವರು ಗಾಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ತಂಡದಕ್ಕೆ ದೊಡ್ಡ ಹಿನ್ನಡೆ. ಇನ್ನು ಉಳಿದ ಬೌಲರ್ಗಳು ಇದುವರೆಗೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಸದ್ಯ ತಂಡ ಬ್ಯಾಟಿಂಗ್ ಮೇಲೆಯ ಹೆಚ್ಚಿನ ನಂಬಿಕೆ ಇರಿಸಿದೆ. ತಂಡದ ಬೌಲಿಂಗ್ ವಿಚಾರದಲ್ಲಿ ಸ್ವತಃ ನಾಯಕ ಧೋನಿ ಅವರೇ ಬೇಸರ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಬಲಿಷ್ಠವಾಗಿದೆ. ಆದರೆ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಆಟಗಾರರು ವಿಫಲರಾಗುತ್ತಿದ್ದಾರೆ. ಒಂದು ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ತೋರಿದರೆ, ಮುಂದಿನ ಪಂದ್ಯದಲ್ಲಿ ನೂರರೊಳಗೆ ಗಂಟುಮೂಟೆ ಕಟ್ಟುತ್ತದೆ. ಹೀಗಾಗಿ ಹೈದರಾಬಾದ್ ಪ್ರದರ್ಶನದ ಮೇಲೆ ನಂಬಿಕೆ ಇರಿಸುವುದು ಕಷ್ಟಕರ. ಒಂದೊಮ್ಮೆ ನಾಯಕ ಏಡೆನ್ ಮಾರ್ಕ್ರಮ್ ಸಹಿತ ಅಗ್ರ ಆಟಗಾರರಾದ ಹ್ಯಾರಿ ಬ್ರೂಕ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಕ್ಲಾಸೆನ್, ಮಯಾಂಕ್ ಅಗರ್ವಾಲ್ ಬ್ಯಾಟಿಂಗ್‌ನಲ್ಲಿ ಮಿಂಚಿದರೆ ಹೈದರಾಬಾದ್ ತಂಡ ಚೆನ್ನೈಯನ್ನು ಮಣಿಸುವ ಸಾಧ್ಯತೆಯಿದೆ.
ಬಲಾಬಲದ ಲೆಕ್ಕಾಚಾರದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಂದಿದೆ. ಇದುವರೆಗೆ ಉಭಯ ತಂಡಗಳು ಐಪಿಎಲ್ನಲ್ಲಿ 18 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಚೆನ್ನೈ ತಂಡ 13 ಪಂದ್ಯಗಳಲ್ಲಿ ಗೆದ್ದಿದೆ, ಹೈದರಾಬಾದ್ ಕೇವಲ 5 ಪಂದ್ಯಗಳಲ್ಲಿ ಮಾತ್ರ ಗೆಲುವು ಕಂಡಿದೆ. ಹೀಗಾಗಿ ಚೆನ್ನೈ ಬಲಿಷ್ಠವಾಗಿ ಗೋಚರಿಸಿದೆ.
ಇದನ್ನೂ ಓದಿ IPL 2023: ಐಪಿಎಲ್ ವಿಐಪಿ ಬಾಕ್ಸ್ಗೆ ಬೀಗ; ಕಾರಣ ಏನು?
ಸಂಭಾವ್ಯ ತಂಡಗಳು
ಚೆನ್ನೈ ಸೂಪರ್ ಕಿಂಗ್ಸ್: ಡೆವೊನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಶಿವಂ ದುಬೆ, ಅಂಬಾಟಿ ರಾಯುಡು, ಮೊಯೀನ್ ಅಲಿ, ರವೀಂದ್ರ ಜಡೇಜಾ, ಎಂ.ಎಸ್ ಧೋನಿ (ನಾಯಕ), ಮಹೀಶ್ ತೀಕ್ಷಣ, ತುಷಾರ್ ದೇಶಪಾಂಡೆ, ಮತೀಶ ಪತಿರಾನ, ಆಕಾಶ್ ಸಿಂಗ್, ಡ್ವೈನ್ ಪ್ರಿಟೋರಿಯಸ್, ಸುಭ್ರಾಂಶು ಸೇನಾಪತಿ, ಶೇಕ್ ರಶೀದ್, ಎಸ್ ಹಂಗರ್ಗೇಕರ್, ಮಿಚೆಲ್ ಸ್ಯಾಂಟ್ನರ್, ಬೆನ್ ಸ್ಟೋಕ್ಸ್, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ದೀಪಕ್ ಚಾಹರ್, ಭಗತ್ ವರ್ಮಾ, ನಿಶಾಂತ್ ಸಿಂಧು.
ಸನ್‌ರೈಸರ್ಸ್ ಹೈದರಾಬಾದ್: ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಉಮ್ರಾನ್ ಮಲಿಕ್, ಟಿ ನಟರಾಜನ್, ಆದಿಲ್ ರಶೀದ್, ಅಕಿಲ್ ಹೊಸೈನ್, ಗ್ಲೆನೆನ್ ಫಿಲಿಪ್ಸ್, ಸಮರ್ಥ ವ್ಯಾಸ್, ಅನ್ಮೋಲ್ಪ್ರೀತ್ ಸಿಂಗ್, ಮಯಾಂಕ್ ದಾಗರ್, ಉಪೇಂದ್ರ ಯಾದವ್, ಅಭಿಷೇಕ್ ಶರ್ಮಾ, ಕಾರ್ತಿಕ್ ತ್ಯಾಗಿ, ಸನ್ವಿರ್ ಸಿಂಗ್, ಫಜಲ್ಹಕ್ ಫಾರೂಕಿ, ಅಬ್ದುಲ್ ಸಮದ್, ನಿತೀಶ್ ರೆಡ್ಡಿ, ವಿವ್ರಾಂತ್ ಶರ್ಮಾ.