Site icon Vistara News

IPL 2023: ಬೆಂಗಳೂರಿನ ವಿವಿಧೆ ಕಡೆ ಕಂಗೊಳಿಸಿದ ಐಪಿಎಲ್​ ಟ್ರೋಫಿ

IPL 2023: IPL trophy to be held in different cities of Bangalore

IPL 2023: IPL trophy to be held in different cities of Bangalore

ಬೆಂಗಳೂರು: ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ ಐಪಿಎಲ್​ ಟೂರ್ನಿ(IPL 2023) ಆರಂಭವಾಗಲು ಇನ್ನು ಕೇವಲ 5 ದಿನಗಳು ಮಾತ್ರ ಉಳಿದಿವೆ. ಇದರ ನಡುವೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಟಾಟಾ ಐಪಿಎಲ್ 2023(TATA IPL 2023) ಟ್ರೋಫಿಯ ಆಗಮನವಾಗಿದೆ. ಭಾನುವಾರ(ಮಾರ್ಚ್​ 26) ಬೆಳಗ್ಗೆಯಿಂದ ಬೆಂಗಳೂರಿನಲ್ಲಿ ಐಪಿಎಲ್ ಕಪ್​ ಪ್ರದರ್ಶನಕ್ಕೆ ಇಡಲಾಗಿದೆ. ಅಭಿಮಾನಿಗಳು ಇದರ ಜತೆ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸುತ್ತಿದ್ದಾರೆ.

ನಗರಗಳ ಆಯ್ದ ಭಾಗಗಳಾದ ನೈಸ್‌ ರಸ್ತೆ, ಜಯನಗರದ ಮೈಯಾಸ್‌, ಫೋರಂ ನೆಕ್ಸಸ್‌ ಮಾಲ್‌ಗ‌ಳಲ್ಲಿ ಟ್ರೋಫಿಯ ಪ್ರದರ್ಶನವಿರುತ್ತದೆ. ಈಗಾಗಲೇ ಐಪಿಎಲ್‌ ಗುಂಗಿನಲ್ಲಿ ತುಂಬಿಕೊಂಡಿರುವ ಜನರಿಗೆ, ಸುಂದರವಾಗಿ ಅಲಂಕರಿಸಿರುವ ಮಾರ್ಗಗಳಲ್ಲಿ ಟ್ರೋಫಿಯನ್ನು ನೋಡುವ ಅವಕಾಶ ಎದುರಿಗಿದೆ. ಬೆಳಗ್ಗೆ 5ರಿಂದ 11, ಮಧ್ಯಾಹ್ನ 1ರಿಂದ 3, ಸಂಜೆ 5ರಿಂದ ರಾತ್ರಿ 8, ರಾತ್ರಿ 9ರಿಂದ 11ರವರೆಗೆ ಐಪಿಎಲ್‌ ಟ್ರೋಫಿಯನ್ನು ಸಾರ್ವಜನಿಕರು ನೋಡಬಹುದು.

ಕೊರೊನಾ ಬಳಿಕ ಅದ್ಧೀರಿಯಾಗಿ ನಡೆಯುತ್ತಿರುವ ಈ ಟೂರ್ನಿಯನ್ನು ಮತ್ತಷ್ಟು ರಂಗೇರಿಸಲುವ ಸಲುವಾಗಿ ಟೂರ್ನಿಯ ನೇರಪ್ರಸಾರ ವಾಹಿನಿ ಸ್ಟಾರ್‌ ಸ್ಪೋರ್ಟ್ಸ್ ಈ ಯೋಜನೆಯನ್ನು ಕೈಗೊಂಡಿದೆ. ಈಗಾಗಲೇ ಮುಂಬೈ, ಚೆನ್ನೈ, ವಿಶಾಖಪಟ್ಟಣದ ನಾಲ್ಕು ಪ್ರದೇಶಗಳಲ್ಲಿ ಟ್ರೋಫಿ ಪ್ರದರ್ಶನ ಯಶಸ್ವಿಯಾಗಿ ನಡೆದಿದೆ.

ಇದನ್ನೂ ಓದಿ IPL 2023 : ಆರ್​ಸಿಬಿ ಅನ್​ಬಾಕ್ಸ್​ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದ ವಿರಾಟ್​ ಕೊಹ್ಲಿ, ಕ್ರಿಸ್​ಗೇಲ್​, ವಿಲಿಯರ್ಸ್​

ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಗುಜರಾತ್​ ಟೈಟಾನ್ಸ್​ ಮತ್ತು ಮಾಜಿ ಚಾಂಪಿಯನ್​ ಚೆನ್ನೈ ಸೂಪರ್​ಕಿಂಗ್ಸ್​ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳ ಈ ಮುಖಾಮುಖಿ ಮಾರ್ಚ್ 31ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂ ಮೈದಾನದಲ್ಲಿ ನಡೆಯಲಿದೆ.​

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಏಪ್ರಿಲ್​ 2 ರಂದು ಮುಂಬೈ ಇಂಡಿಯನ್ಸ್‌ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ನಗರದ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಈ ಪಂದ್ಯಕ್ಕಾಗಿ ಆರ್​ಸಿಬಿ ತಂಡದ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಈ ಮಧ್ಯೆ ರಜತ್​ ಪಾಟೀದಾರ್​ ಪಾದದ ನೋವಿನಿಂದ ಬಳಲುತ್ತಿದ್ದು ಅವರು ಆಡುವುದು ಅನುಮಾನ ಎನ್ನಲಾಗಿದೆ. ಜತೆಗೆ ತಂಡದ ಸ್ಟಾರ್​ ಆಲ್​ರೌಂಡರ್​ ಮ್ಯಾಕ್ಸ್​ವೆಲ್​ ಕೂಡ ತಾನು ಸಂಪೂರ್ಣ ಫಿಟ್​ ಆಗಿಲ್ಲ ಎಂದು ಹೇಳಿರುವುದು ತಂಡದಕ್ಕೆ ಚಿಂತೆಗೀಡು ಮಾಡಿದೆ.

Exit mobile version