ಮುಂಬಯಿ: ಟೀಮ್ ಇಂಡಿಯಾದ ಯುವ ಕ್ರಿಕೆಟಿಗರಾದ ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಉತ್ತಮ ಸ್ನೇಹಿತರು. ಆದರೆ ಇದೀಗ ಇಶಾನ್ ಅವರು ತಮ್ಮ ಗೆಳೆಯ ಗಿಲ್ಗೆ ಮೈದಾನದಲ್ಲಿಯೇ ಕಪಾಳಮೋಕ್ಷ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮಂಗಳವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿತ್ತು. ಈ ಪಂದ್ಯಕ್ಕೂ ಮುನ್ನ ಉಭಯ ತಂಡಗಳು ಅಭ್ಯಾಸ ನಡೆಸಿವೆ. ಇದೇ ವೇಳೆ ಮೈದಾನಕ್ಕೆ ಬರುತ್ತಿದ್ದ ಗಿಲ್ ಅವರನ್ನು ಕಾದು ಕುಳಿತು ಇಶಾನ್ ಕಿಶನ್ ಅವರು ಕಪಾಳಕ್ಕೆ ಬಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಗಿಲ್ ಅವರು ಇಶಾನ್ ಅವರ ತಲೆಗೆ ಎರಡು ಬಾರಿಸಿದ್ದಾರೆ.
ಅಸಲಿಗೆ ಇದು ಯಾವುದೇ ದ್ವೇಷದ ಹೊಡೆದಾಟವಲ್ಲ. ಇಬ್ಬರು ಉತ್ತಮ ಸ್ನೇಹಿತರಾಗಿರುವ ಕಾರಣ ಇವರಿಬ್ಬರ ಮಧ್ಯೆ ಇಂತಹ ತಮಾಷೆಯ ಹೊಡಿ ಬಡಿ ಸಂದರ್ಭ ನಡೆಯುತ್ತಲೇ ಇರುತ್ತದೆ. ಈ ಹಿಂದೆಯೂ ಇಶಾನ್ ಕಿಶನ್ ಅವರು ಗಿಲ್ ಅವರ ಕಪಾಳಕ್ಕೆ ಬಾರಿಸಿದ ರೀಲ್ಸ್ಗಳು ವೈರಲ್ ಆಗಿತ್ತು. ಈ ವಿಡಿಯೊವನ್ನು ಉಭಯ ಆಟಗಾರರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಇದೀಗ ಇವರಿಬ್ಬರ ಮತ್ತೊಂದು ತಮಾಷೆಯ ಹೊಡೆದಾಟದ ವಿಡಿಯೊ ವೈರಲ್ ಆಗಿದೆ. ಉಭಯ ಆಟಗಾರರ ಪರಸ್ಪರ ತಮಾಷೆಯ ಈ ವಿಡಿಯೊವನ್ನು ಮುಂಬೈ ಇಂಡಿಯನ್ಸ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಕ್ಲಾಸಿಕ್ ಬಾಯ್ಸ್ ಎಂದು ಬರೆದುಕೊಂಡಿದೆ.
ಇದನ್ನೂ ಓದಿ IPL 2023: ಸಮಯ ಮುಗಿದಿದ್ದರೂ ಡಿಆರ್ಎಸ್ ರಿವ್ಯೂಗೆ ಅನುಮತಿ ಕೊಟ್ಟ ಅಂಪೈರ್; ನೆಟ್ಟಿಗರ ಆಕ್ರೋಶ
ಮುಂಬೈಗೆ 55 ರನ್ ಸೋಲು
ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಮುಂಬಯಿ 20 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 152 ರನ್ ಬಾರಿಸಿ ಸೋಲೊಪ್ಪಿಕೊಂಡಿತು.