ಜೈಪುರ: ರಾಜಸ್ಥಾನ್ ವಿರುದ್ಧ ಸಣ್ಣ ಮೊತ್ತ ಪೇರಿಸಿದರೂ ಅದನ್ನು ಉಳಿಕೊಳ್ಳುವಲ್ಲಿ ಯಶಸ್ವಿಯಾದ ಲಕ್ನೋ ಸೂಪರ್ ಜೈಂಟ್ಸ್ ತಂಡ 10 ರನ್ಗಳ ಅಂತರದ ಗೆಲುವು ಸಾಧಿಸಿತು. ಆದರೆ ಈ ಪಂದ್ಯದಲ್ಲಿ ರಾಹುಲ್ ಅವರು ಪವರ್ ಪ್ಲೇಯಲ್ಲಿ ಆಡಿದ ರೀತಿಗೆ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಬೇಸರ ವ್ಯಕ್ತಪಡಿಸಿದ್ದಾರೆ.
ಬುಧವಾರ ರಾತ್ರಿ ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಲಕ್ನೋ ಸೂಪರ್ಜೈಂಟ್ಸ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 154 ರನ್ ಪೇರಿಸಿತು. ಜವಾಬಿತ್ತ ರಾಜಸ್ಥಾನ್ ತನ್ನ ಪಾಲಿನ ಆಟದಲ್ಲಿ 6 ವಿಕೆಟ್ ಕಳೆದುಕೊಂಡು 144 ರನ್ ಗಳಿಸಲಷ್ಟೇ ಶಕ್ತವಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ಪರ ನಾಯಕ ಅತ್ಯಂತ ನಿಧಾನಗತಿಯ ಆಟವಾಡಿದರು. ಇದೇ ವೇಳೆ ಕಾಮೆಂಟ್ರಿ ಮಾಡುತ್ತಿದ್ದ ಕೆವಿನ್ ಪೀಟರ್ಸನ್ ಅವರು ಪವರ್ ಪ್ಲೇಯಲ್ಲಿ ರಾಹುಲ್ ಬ್ಯಾಟಿಂಗ್ ನೋಡಲು ಅತ್ಯಂತ ಬೇಸರವಾಗುತ್ತಿದೆ. ಅವರ ನೈಜ ಆಟ ಇದಲ್ಲ ಎಂದು ಹೇಳಿದರು. ಪಂದ್ಯದಲ್ಲಿ ರಾಹುಲ್ ಅವರಿಗೆ 2 ಜೀವದಾನ ಲಭಿಸಿತ್ತು. ಒಂದು ಕ್ಯಾಚ್ 6 ರನ್ ಗಳಿಸಿದ್ದ ವೇಳೆ ಯಶಸ್ವಿ ಜೈಸ್ವಾಲ್ ಬಿಟ್ಟರೆ ಮತ್ತೊಂದು ಕ್ಯಾಚ್ ಜೇಸನ್ ಹೋಲ್ಡರ್ ಕೈ ಚೆಲ್ಲಿದ್ದರು. 32 ಎಸೆತಗಳಿಂದ ಅವರು 39 ರನ್ ಗಳಿಸಿದರು. ಇದರಲ್ಲಿ ಒಂದು ಸಿಕ್ಸರ್ ಮತ್ತು 4 ಬೌಂಡರಿ ಸಿಡಿಯಿತು. ಸದ್ಯ ರಾಹುಲ್ 6 ಪಂದ್ಯಗಳನ್ನು ಆಡಿದ್ದು 114.79ರ ಸ್ಟ್ರೈಕ್ ರೇಟ್‌ನಲ್ಲಿ 194 ರನ್ ಗಳಿಸಿದ್ದಾರೆ.
ಇದನ್ನೂ ಓದಿIPL 2023: ಆರನೇ ಪಂದ್ಯದಲ್ಲಾದರೂ ಗೆಲುವು ಕಂಡೀತೇ ಡೆಲ್ಲಿ ಕ್ಯಾಪಿಟಲ್ಸ್?
ರಾಹುಲ್ ಅವರು ಬ್ಯಾಟಿಂಗ್ ಗಮನಿಸುವಾಗ ಅವರು ಭಯಭೀತರಾಗಿ ಬ್ಯಾಟಿಂಗ್ ನಡೆಸುವಂತೆ ಕಾಣುತ್ತಿದೆ. ಈ ಹಿಂದೆ ಅವರು ಅಟ್ಯಾಕಿಂಗ್ ಬ್ಯಾಟಿಂಗ್ ನಡೆಸುತ್ತಿದ್ದರು. ಆದರೆ ಈಗ ಅವರ ಹೊಡೆತದಲ್ಲಿ ಯಾವುದೇ ಪವರ್ ಕಾಣುತ್ತಿಲ್ಲ. ಸಿಲ್ಲಿಯಾಗಿ ಬ್ಯಾಟ್ ಬೀಸಿ ವಿಕೆಟ್ ಕೈಚೆಚ್ಚುತ್ತಿದ್ದಾರೆ. ಅವರು ತಮ್ಮ ಹಳೆಯ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳದೇ ಹೋದರೆ ಟೀಮ್ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯಲು ಅವರಿಗೆ ಹಿನ್ನಡೆಯಾಗಬಹುದು.