ಧರ್ಮಶಾಲಾ: ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಇಂದು(ಶುಕ್ರವಾರ) ರಾತ್ರಿ ನಡೆಯುವ ಐಪಿಎಲ್(IPL 2023) ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ಕ್ರಿಕೆಟಿಗ, ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಜೋ ರೂಟ್ ಅವರು ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ(Dalai Lama) ಅವರನ್ನು ಭೇಟಿ ಮಾಡಿ ಸ್ಮರಣಿಕೆಯೊಂದನ್ನು ನೀಡಿದ್ದಾರೆ. ದಲೈ ಲಾಮಾ ಅವರನ್ನು ಭೇಟಿಯಾದ ಫೋಟೊವನ್ನು ರೂಟ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಹಿಮಾಚಲ ಪ್ರದೇಶದ ರಮಣೀಯ ತಾಣವಾದ ಧರ್ಮಶಾಲಾದಲ್ಲಿ ದಶಕದ ಬಳಿಕ ಐಪಿಎಲ್ ಪಂದ್ಯಗಳು ನಡೆಯುತ್ತಿದೆ. 2013ರಲ್ಲಿ ಇಲ್ಲಿ ಕೊನೆಯ ಪಂದ್ಯ ನಡೆದಿತ್ತು. ಇದಾದ ಬಳಿಕ ಈ ಮೈದಾನವನ್ನು ನವೀಕರಿಸಲಾಗಿತ್ತು. 10 ವರ್ಷಗಳ ಬಳಿಕ ಇಲ್ಲಿ ನಡೆಯುತ್ತಿರುವ ಎರಡನೇ ಪಂದ್ಯವಾಗಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಪಂಜಾಬ್ ಕಣಕ್ಕಿಳಿದಿತ್ತು. ಇದೀಗ ರಾಜಸ್ಥಾನ್ ಮತ್ತು ಪಂಜಾಬ್ ಆಡಲಿದೆ.
ಇದನ್ನೂ ಓದಿ IPL 2023: ಚೆನ್ನೈ ತಂಡದ ಪ್ಲೇ ಆಫ್ ಕನಸಿಗೆ ಕೊಳ್ಳಿ ಇಟ್ಟೀತೆ ಡೆಲ್ಲಿ?
ಭಾರತಕ್ಕೂ ರೂಟ್ಗೂ ಇದೆ ಅವಿನಾಭಾವ ಸಂಬಂಧ
ಪಂದ್ಯಕ್ಕೂ ಮುನ್ನ ಜೋ ರೂಟ್ ಅವರು ದಲೈ ಲಾಮಾ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಇದೇ ವೇಳೆ ರೂಟ್ ಅವರು ದಲೈ ಲಾಮಾ ಅವರಿಕೆ ಕ್ರಿಕೆಟ್ ಚೆಂಡನ್ನು ಸ್ಮರಣಿಕೆಯಾಗಿ ನೀಡಿದ್ದಾರೆ. ಈ ಫೋಟೊ ವೈರಲ್ ಆಗಿದೆ. ಭಾರತಕ್ಕೂ ಮತ್ತು ಜೋ ರೂಟ್ ಅಚರಿಗೂ ಅವಿನಾಭಾವ ಸಂಬಂಧವಿದೆ. ರೂಟ್ ಅವರು ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗಳಾದ ಟಿ20, ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು ಭಾರತದಲ್ಲಿಯೇ. ಹೀಗಾಗಿ ಭಾರತ ಎಂದರೆ ರೂಟ್ಗೆ ವಿಶೇಷವಾಗಿದೆ.
ಸಂಭಾವ್ಯ ತಂಡಗಳು
ಪಂಜಾಬ್ ಕಿಂಗ್ಸ್ : ಶಿಖರ್ ಧವನ್ (ನಾಯಕ), ಪ್ರಭ್ಸಿಮ್ರಾನ್ ಸಿಂಗ್, ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್ಸ್ಟನ್, ಜಿತೇಶ್ ಶರ್ಮಾ, ಸ್ಯಾಮ್ ಕರನ್, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಹರ್, ಅರ್ಶ್ದೀಪ್ ಸಿಂಗ್.
ರಾಜಸ್ಥಾನ್ ರಾಯಲ್ಸ್ : ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ), ಜೋ ರೂಟ್, ಧ್ರುವ ಜುರೆಲ್, ಶಿಮ್ರಾನ್ ಹೆಟ್ಮೈಯರ್, ರವಿಚಂದ್ರನ್ ಅಶ್ವಿನ್, ಮುರುಗನ್ ಅಶ್ವಿನ್, ಸಂದೀಪ್ ಶರ್ಮಾ, ಯಜ್ವೇಂದ್ರ ಚಹಲ್, ಟ್ರೆಂಟ್ ಬೌಲ್ಟ್.