Site icon Vistara News

IPL 2023: ಜಾಸ್​ ಬಟ್ಲರ್​ ಬೊಂಬಾಟ್​ ಬ್ಯಾಟಿಂಗ್​; 203 ರನ್​ ಬಾರಿಸಿದ ರಾಜಸ್ಥಾನ್​

IPL 2023: Jos Buttler's bombastic batting; Rajasthan scored 203 runs

IPL 2023: Jos Buttler's bombastic batting; Rajasthan scored 203 runs

ಹೈದರಾಬಾದ್​: ಜಾಸ್​ ಬಟ್ಲರ್​(54) ಮತ್ತು ನಾಯಕ ಸಂಜು ಸ್ಯಾಮ್ಸನ್(55)​ ಅವರ ವಿಸ್ಫೋಟಕ ಬ್ಯಾಟಿಂಗ್​ ಸಾಹಸದಿಂದ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ರಾಜಸ್ಥಾನ್​​ ರಾಯಲ್ಸ್​​ 203 ರನ್​ ಗಳಿಸಿ ಸವಾಲೊಡ್ಡಿದೆ. ಹೈದರಾಬಾದ್​ನ ರಾಜೀವ್ ಗಾಂಧಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾನುವಾರದ ಐಪಿಎಲ್​ನ ಡಬಲ್​ ಹೆಡರ್​ನ ಮೊದಲ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ರಾಜಸ್ಥಾನ್​ ರಾಯಲ್ಸ್ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 203 ರನ್​ ಬಾರಿಸಿದೆ. ಸನ್​ರೈಸರ್ಸ್​ ಹೈದರಾಬಾದ್ ಗೆಲುವಿಗೆ 204 ರನ್​ ಪೇರಿಸಬೇಕಿದೆ.

ಸ್ಫೋಟಕ ಬ್ಯಾಟಿಂಗ್​ ನಡೆಸಿದ ಬಟ್ಲರ್​, ಸಂಜು, ಜೈಸ್ವಾಲ್

ಮೊದಲ ಓವರ್​ನಲ್ಲಿ ರಕ್ಷಣಾತ್ಮ ಆಟಕ್ಕೆ ಒತ್ತು ನೀಡಿದ ಯಶಸ್ವಿ ಜೈಸ್ವಾಲ್(Yashasvi Jaiswal)​ ಮತ್ತು ಜಾಸ್​ ಬಟ್ಲರ್​ (Jos Buttler) ಆ ಬಳಿಕದ ಓವರ್​ನಲ್ಲಿ ಸಿಡಿಯಲು ಆರಂಭಿಸಿದರು. ಅದರಲ್ಲೂ ಜಾಸ್​ ಬಟ್ಟರ್​ ಅವರ ಸ್ಫೋಟಕ ಬ್ಯಾಟಿಂಗ್​ ಮುಂದೆ ಹೈದರಾಬಾದ್​ ಬೌಲಿಂಗ್ ಸಂಪೂರ್ಣವಾಗಿ​ ಹಳಿ ತಪ್ಪಿತು. 6 ಓವರ್​ಗಳ ಪವರ್​ ಪ್ಲೇ ಮುಕ್ತಾಯದ ವೇಳೆಗೆ ತಂಡ 85 ರನ್​ ಕಲೆಹಾಕಿತು. ಮೈದಾನದ ಅಷ್ಟ ದಿಕ್ಕುಗಳಿಗೂ ಬೌಂಡರಿ, ಸಿಕ್ಸರ್​ ಬಾರಿಸಿದ ಜಾಸ್​ ಬಟ್ಲರ್​ ಅರ್ಧಶತಕ ಪೂರೈಸಿದರು.

ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸುತ್ತಿದ್ದ ಈ ಜೋಡಿಯನ್ನು ಫಜಲ್ಹಕ್ ಫಾರೂಕಿ(Fazalhaq Farooqi) ಬೇರ್ಪಡಿಸುವಲ್ಲಿ ಯಶಸ್ವಿಯಾದರು. 54 ರನ್​ ಗಳಿಸಿದ ಬಟ್ಲರ್​ ಅವರ ವಿಕೆಟ್​ ಕಿತ್ತರು. 22 ಎಸೆತ ಎದುರಿಸಿದ ಬಟ್ಲರ್​ 7 ಬೌಂಡರಿ ಮತ್ತು ಮೂರು ಬೌಂಡರಿ ಬಾರಿಸಿದರು.

ಇದನ್ನೂ ಓದಿ IPL 2023: ಕೇನ್​ ವಿಲಿಯಮ್ಸನ್​ ಐಪಿಎಲ್​ನಿಂದ ಔಟ್; ಶೀಘ್ರದಲ್ಲೇ ಬದಲಿ ಆಟಗಾರನ ಆಯ್ಕೆ ಎಂದ ಫ್ರಾಂಚೈಸಿ

ಈ ವಿಕೆಟ್​ ಪತನದ ಬಳಿಕ ಆಡಲಿಳಿದ ನಾಯಕ ಸಂಜು ಸ್ಯಾಮ್ಸನ್ ಕೂಡ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಮುಂದಾದರು. ಬಟ್ಲರ್​ ಅವರ ಮುಂದಿನ ಆಟವನ್ನು ಸಂಜು ಮುಂದುವರಿಸಿದರು. ​10 ಓವರ್​ ಆಗುವ ಮುನ್ನವೇ ತಂಡದ ಮೊತ್ತ ನೂರರ ಗಡಿ ದಾಟಿತ್ತು. ಒಂದು ಹಂತದಲ್ಲಿ ರಾಜಸ್ಥಾನ್​ ತಂಡ ಐಪಿಎಲ್​ನಲ್ಲಿ ಗರಿಷ್ಠ ಮೊತ್ತ ದಾಖಲಿಸಿ ಇತಿಹಾಸ ನಿರ್ಮಿಸುತ್ತದೆ ಎಂಬ ನಿರೀಕ್ಷೆಯೊಂದು ಹುಟ್ಟಿಕೊಂಡಿತು. ಆದರೆ ಜೈಸ್ವಾಲ್​ ವಿಕೆಟ್​ ಪತನದ ಬಳಿಕ ರನ್​ ವೇಗ ಕುಂಟಿತಗೊಂಡಿತು. ಇಲ್ಲಿಂದ ಮೇಲೆ ಹೈದರಾಬಾದ್ ಮತ್ತೆ ಪಂದ್ಯದಲ್ಲಿ ಹಿಡಿತ ಸಾಧಿಸಿತು. ಜೈಸ್ವಾಲ್​ ಕೂಡ ಬಟ್ಲರ್​ ಅವರಂತೆ 54 ರನ್​ಗೆ ವಿಕೆಟ್​ ಒಪ್ಪಿಸಿದರು. ಈ ವಿಕೆಟ್​ ಕೂಡ ಫಜಲ್ಹಕ್ ಫಾರೂಕಿ ಪಾಲಾಯಿತು. ಜೈಸ್ವಾಲ್​ ತಮ್ಮ ಅರ್ಧಶತಕದ ಇನಿಂಗ್ಸ್​ನಲ್ಲಿ 9 ಬೌಂಡರಿ ಸಿಡಿಸಿದರು.

ಇದನ್ನೂ ಓದಿ IPL 2023: ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಡಗೌ​ಟ್‌​ನಲ್ಲಿ ರಿಷಭ್‌ ಪಂತ್‌ ಜೆರ್ಸಿ; ಫೋಟೊ ವೈರಲ್​

ಆರ್​ಸಿಬಿಯ ಮಾಜಿ ಆಟಗಾರ ದೇವದತ್ತ ಪಡಿಕ್ಕಲ್​ 5 ಎಸೆತಗಳಿಂದ ಕೇವಲ 2 ರನ್​ ಗಳಿಸಿ ಉಮ್ರಾನ್​ ಮಲಿಕ್​ ಬೌಲಿಂಗ್​ನಲ್ಲಿ ಕ್ಲೀನ್​ ಬೌಲ್ಡ್​ ಆದರು. ಇದರ ಬೆನ್ನಲ್ಲೇ ರಿಯಾನ್​ ಪರಾಗ್​ ಕೂಡ 7 ರನ್​ಗೆ ಆಟ ಮುಗಿಸಿದರು. ಆದರೆ ಮತ್ತೊಂದು ಬದಿಯಲ್ಲಿ ಸಂಜು ಸ್ಯಾಮ್ಸನ್​ ಮಾತ್ರ ತಮ್ಮ ಬಿರುಸಿ ಬ್ಯಾಟಿಂಗ್​ ನಡೆಸುತ್ತಾಲೇ ಸಾಗಿದರು. 28 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. ಇದೇ ವೇಳೆ ಅವರು ಐಪಿಎಲ್​ನ 18ನೇ ಅರ್ಧಶತಕವನ್ನು ಪೂರ್ತಿಗೊಳಿಸಿದರು. ಆದರೆ 55 ರನ್​ ಗಳಿಸಿದ್ದ ವೇಳೆ ಬೌಂಡರಿ ಲೈನ್​ನಲ್ಲಿ ಅಭಿಷೇಕ್​ ಶರ್ಮಾ ಅವರ ಅದ್ಭುತ ಕ್ಯಾಚ್​ಗೆ ವಿಕೆಟ್​ ಕೈಚೆಲ್ಲಿದರು. ಅಂತಿಮ ಹಂತದಲ್ಲಿ ವಿಂಡೀಸ್​ನ ಎಡಗೈ ಆಟಗಾರ ಶಿಮ್ರಾನ್​ ಹೆಟ್​ಮೈರ್​ ಅವರು 16 ಎಸೆಗಳಿಂದ ಅಜೇಯ 22 ರನ್​ ಬಾರಿಸಿದ ಪರಿಣಾಮ ತಂಡ 200ರ ಗಡಿ ದಾಟಿತು. ಹೈದರಾಬಾದ್​ ಪರ ಟಿ.ನಟರಾಜನ್​ ಮತ್ತು ಫಜಲ್ಹಕ್ ಫಾರೂಕಿ ತಲಾ 2 ವಿಕೆಟ್​ ಕಿತ್ತು ಮಿಂಚಿದರು.

Exit mobile version