Site icon Vistara News

IPL 2023: ಕೆಕೆಆರ್​ ವಿರುದ್ಧದ ಪಂದ್ಯಕ್ಕೂ ಜೋಶ್​ ಹ್ಯಾಜಲ್​ವುಡ್ ಅನುಮಾನ!

IPL 2023: Josh Hazlewood doubtful for the match against KKR!

IPL 2023: Josh Hazlewood doubtful for the match against KKR!

ಬೆಂಗಳೂರು: ಬುಧವಾರ ನಡೆಯುವ ಐಪಿಎಲ್​ ಮುಖಾಮುಖಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್​​ ರೈಡರ್ಸ್​ ತಂಡಗಳು ಹೋರಾಟ ನಡೆಸಲಿವೆ. ಈ ಪಂದ್ಯದಲ್ಲಿ ಕಣಕ್ಕಿಳಿಯುವ ಜೋಶ್​ನಲ್ಲಿದ್ದ ವಿಶ್ವದ ನಂ.1 ಬೌಲರ್​ ಆಸೀಸ್​ನ ಜೋಶ್​ ಹ್ಯಾಜಲ್​ವುಡ್​ಗೆ ಹಿನ್ನಡೆಯಾಗಿದೆ.

ಗಾಯದ ಕಾರಣದಿಂದಾಗಿ ಟೂರ್ನಿಯ ಮೊದಲಾರ್ಧದ ಪಂದ್ಯಗಳಿಂದ ಸಂಪೂರ್ಣವಾಗಿ ಹೊರಗುಳಿದಿದ್ದ ಜೋಶ್​ ಹ್ಯಾಜಲ್​ವುಡ್​ ಅವರು ಈಗ ಸಂರ್ಪೂ ಚೇತರಿಕೆ ಕಂಡಿದ್ದಾರೆ. ಜತೆಗೆ ಆರ್​ಸಿಬಿಯ ಅಭ್ಯಾಸ ಕ್ಯಾಂಪ್​ಗಳಲ್ಲಿಯೂ ಉತ್ತಮ ಬೌಲಿಂಗ್​ ಅಭ್ಯಾಸ ನಡೆಸಿದ್ದಾರೆ. ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಅವರು ಆಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಇನ್ನು ಕೂಡ ಆಡುವ ಅನುಮತಿ ನೀಡಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಡೇವಿಡ್ ವಿಲ್ಲಿಯೇ ಕಣಕ್ಕಿಯಲಿದ್ದಾರೆ ಎಂದು ಹೇಳಲಾಗಿದೆ.

ಹ್ಯಾಜಲ್​ವುಡ್ ಅವರು ಈ ಪಂದ್ಯದಲ್ಲಿ ಆಡುತ್ತಿದ್ದರೆ ಆರ್​ಸಿಬಿಯ ಬೌಲಿಂಗ್​ ಸಮಸ್ಯೆಗೆ ಪರಿಹಾರ ಸಿಗುತ್ತಿತ್ತು. ಸಿರಾಜ್​ಗೆ ಮತ್ತೊಬ್ಬ ಬೌಲರ್​ನ ಬೆಂಬಲ ಸಿಗುವ ಮೂಲಕ ತಂಡದ ಬೌಲಿಂಗ್​ ಬಲಿಷ್ಠಗೊಳ್ಳುತ್ತಿತ್ತು. ಆದರೆ ಅವರಿಗೆ ಆಸೀಸ್ ಕ್ರಿಕೆಟ್​ ಮಂಡಳಿ ಆಡುವ ಅನುಮತಿ ನೀಡದಿರುವುದು ಆರ್​ಸಿಬಿಗೆ ಹಿನ್ನಡೆಯಾಗಿದೆ.

ಇದನ್ನೂ ಓದಿ Most Wickets In IPL 2023: ಐಪಿಎಲ್​ 2023ರಲ್ಲಿ ಇದುವರೆಗೆ ಗರಿಷ್ಠ ವಿಕೆಟ್​ ಪಡೆದ ಆಟಗಾರರು

ಸಂಭಾವ್ಯ ತಂಡ

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್​ ಡು ಪ್ಲೆಸಿಸ್​, ವಿರಾಟ್ ಕೊಹ್ಲಿ(ನಾಯಕ), ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಾಬಾಜ್ ಅಹ್ಮದ್​, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಮಹಿಪಾಲ್ ಲೊಮ್ರೊರ್, ಮೊಹಮ್ಮದ್ ಸಿರಾಜ್, ವೈಶಾಖ್​ ವಿಜಯ್​ ಕುಮಾರ್​.

ಕೊಲ್ಕತ್ತಾ ನೈಟ್ ರೈಡರ್ಸ್: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ವೆಂಕಟೇಶ್​ ಅಯ್ಯರ್​, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆ್ಯಂಡ್ರೆ ರಸೆಲ್, ಸುನಿಲ್ ನಾರಾಯಣ್​, ಶಾರ್ದೂಲ್ ಠಾಕೂರ್, ಸುಯಶ್ ಶರ್ಮಾ, ಲಾಕಿ ಫ‌ರ್ಗ್ಯುಸನ್‌, ಉಮೇಶ್ ಯಾದವ್, ವರುಣ್ ಚಕ್ರವರ್ತಿ.

Exit mobile version