Site icon Vistara News

IPL 2023: ಕೇನ್​ ವಿಲಿಯಮ್ಸನ್​ ಐಪಿಎಲ್​ನಿಂದ ಔಟ್; ಶೀಘ್ರದಲ್ಲೇ ಬದಲಿ ಆಟಗಾರನ ಆಯ್ಕೆ ಎಂದ ಫ್ರಾಂಚೈಸಿ

IPL 2023: Kane Williamson out of IPL; The franchisee said he would soon select a replacement player

IPL 2023: Kane Williamson out of IPL; The franchisee said he would soon select a replacement player

ಅಹಮದಾಬಾದ್: ಹಾಲಿ ಚಾಂಪಿಯನ್​ ಗುಜರಾತ್​ ಟೈಟಾನ್ಸ್​(gujarat titans) ತಂಡಕ್ಕೆ ದೊಡ್ಡ ಆಘಾತವೊಂದು ಸಂಭವಿಸಿದೆ. ಮೊಣಕಾಲು ಗಾಯಕ್ಕೆ ತುತ್ತಾದ ನ್ಯೂಜಿಲ್ಯಾಂಡ್ ತಂಡದ ಸ್ಟಾರ್​ ಬ್ಯಾಟರ್ ಕೇನ್ ವಿಲಿಯಮ್ಸನ್(Kane Williamson) 16ನೇ ಆವೃತ್ತಿಯ ಐಪಿಎಲ್(IPL 2023)​ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ವಿಷಯವನ್ನು ಫ್ರಾಂಚೈಸಿ ಭಾನುವಾರ ಪ್ರಕಟಿಸಿದೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಸೀಸನ್​ನ ಉದ್ಘಾಟನಾ ಪಂದ್ಯದ ವೇಳೆ ಕ್ಯಾಚ್‌ಗೆ ಪ್ರಯತ್ನಿಸುತ್ತಿದ್ದಾಗ ಗಾಯಗೊಂಡಿದ್ದ ವಿಲಿಯಮ್ಸನ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಕೇನ್ ಅವರನ್ನು ತಂಡ ಮಿಸ್​ ಮಾಡಿಕೊಳ್ಳಲಿದೆ. ಇದು ದುಃಖಕರ ಸಂಗತಿ. ಅವರು ಶೀಘ್ರದಲ್ಲೇ ಚೇತರಿಸಿಕೊಂಡು ಮತ್ತೆ ಮತ್ತೆ ಮೈದಾನಕ್ಕೆ ಆಗಮಿಸಲಿ” ಎಂದು ಗುಜರಾತ್​ ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ ತಿಳಿಸಿದ್ದಾರೆ.

“ಕೇನ್​ ವಿಲಿಯಮ್ಸನ್​ ಅವರ ಮೊಣಕಾಲು ಗಾಯ ಗಂಭೀರ ಸ್ವರೂಪದಿಂದ ಕೂಡಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರು ತಮ್ಮ ತವರು ನ್ಯೂಜಿಲ್ಯಾಂಡ್​ಗೆ ತೆರಳಲಿದ್ದಾರೆ. ಅವರ ಬದಲು ತಂಡಕ್ಕೆ ಬದಲಿ ಆಟಗಾರನನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ. ಈ ಕುರಿತು ಸೂಕ್ತ ಸಮಯದಲ್ಲಿ ಘೋಷಣೆ ಮಾಡಲಾಗುವುದು” ಎಂದು ಪ್ರಾಂಚೈಸಿ ತಿಳಿಸಿದೆ.

ಇದನ್ನೂ ಓದಿ IPL 2023: ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಡಗೌ​ಟ್‌​ನಲ್ಲಿ ರಿಷಭ್‌ ಪಂತ್‌ ಜೆರ್ಸಿ; ಫೋಟೊ ವೈರಲ್​

ಚೆನ್ನೈ ಸೂಪರ್​ ಕಿಂಗ್ಸ್​(Chennai Super Kings) ತಂಡದ ವಿರುದ್ಧ ಶುಕ್ರವಾರ ನಡೆದ ಐಪಿಎಲ್​ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಕೇನ್​ ವಿಲಿಯಮ್ಸನ್ ಗಾಯಕ್ಕೆ ಒಳಗಾಗಿದ್ದರು. ಋತುರಾಜ್​ ಗಾಯಕ್ವಾಡ್​ ಬಾರಿಸಿದ ಚೆಂಡನನ್ನು ಬೌಂಡರಿ ಗೆರೆಯ ಬಳಿ ತಡೆಯಲು ವಿಲಿಯಮ್ಸನ್​ ಮೇಲಕ್ಕೆ ಜಿಗಿದಿದ್ದರು. ಚೆಂಡನ್ನು ತಡೆದು ಎದುರಾಳಿ ತಂಡ ಆರು ರನ್​ಗಳು ಸಂಗ್ರಹಿಸದಂತೆ ನೋಡಿಕೊಂಡ ಹೊರತಾಗಿಯೂ ಅವರು ಕಳಕ್ಕೆ ಬೀಳುವಾಗ ಮಂಡಿಯೂರಿದ್ದರು. ಮಂಡಿ ಜೋರಾಗಿ ನೆಲಕ್ಕೆ ಅಪ್ಪಳಿಸಿದ ಅವರು ಗಂಭೀರ ಗಾಯಗೊಂಡಿದ್ದರು.

ಇದನ್ನೂ ಓದಿ IPL 2023: ಟಾಸ್​ ಗೆದ್ದ ಸನ್‌ರೈಸರ್ಸ್ ಹೈದರಾಬಾದ್; ಬೌಲಿಂಗ್​ ಆಯ್ಕೆ

ನೋವಿನಿಂದ ನರಳಿದ ಅವರಿಗೆ ಆಟ ಮುಂದುವರಿಸಲು ಸಾಧ್ಯವಾಗಲಿಲ್ಲ. ಬಳಿಕ ಇಬ್ಬರು ಆಟಗಾರರ ನೆರವಿನಿಂದ ಮೈದಾನ ತೊರೆದಿದ್ದರು. ಬಳಿಕ ಅವರ ಗಾಯದ ಕುರಿತ ವೈದ್ಯಕೀಯ ವರದಿ ಪ್ರಕಟಗೊಂಡಿತ್ತು. ವೈದ್ಯರು ಅವರಿಗೆ ವಿಶ್ರಾಂತಿ ಪಡೆಯುವಂತೆ ಸೂಚನೆ ಕೊಟ್ಟಿದ್ದರು. ಇದೀಗ ಅವರು ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ.

Exit mobile version