ಬೆಂಗಳೂರು: ಟೀಮ್ ಇಂಡಿಯಾದ ಹಿರಿಯ ಆಟಗಾರ ಕೇದಾರ್ ಜಾಧವ್ ಅವರು ಅಚ್ಚರಿ ಎಂಬಂತೆ ಆರ್ಸಿಬಿ ತಂಡಕ್ಕೆ ಸೇರ್ಪಡೆಯಾದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಆರ್ಸಿಬಿ ಪರ ಆಡುತ್ತಿದ್ದ ಡೇವಿಡ್ ವಿಲ್ಲಿ ಗಾಯಗೊಂಡ ಪರಿಣಾಮ ಐಪಿಎಲ್ನಿಂದ ಹೊರಬಿದ್ದರು. ಇವರ ಸ್ಥಾನದಲ್ಲಿ ಜಾಧವ್ಗೆ ಅವಕಾಶ ನೀಡಲಾಗಿದೆ. ಸ್ವಾರಸ್ಯವೆಂದರೆ ಕೇದಾರ್ ಜಾಧವ್ ಅವರು ಆರ್ಸಿಬಿ ತಂಡಕ್ಕೆ ಆಯ್ಕೆಯಾಗುವ ಮುನ್ನ ಜಿಯೋ ಸಿನಿಮಾದಲ್ಲಿ ಮರಾಠಿ ಕಾಮೆಂಟೇಟರ್ ಮಾಡುತ್ತಿದ್ದರು.
ಆರ್ಸಿಬಿ ತಂಡ ಸೇರಿದ ವಿಚಾರವಾಗಿ ಮಾತನಾಡಿದ ಜಾಧವ್, ನಾನು ನನ್ನ ಪಾಡಿಗೆ ಕಾಮೆಂಟ್ರಿ ಮಾಡುತ್ತಿದ್ದೆ. ಈ ವೇಳೆ ಆರ್ಸಿಬಿ ಕೋಚ್ ಸಂಜಯ್ ಬಂಗಾರ್ ಅವರು ನನಗೆ ಕರೆ ಮಾಡಿದರು. ನನ್ನ ಫಿಟ್ನೆಸ್ ಹಾಗೂ ಪ್ರಾಕ್ಟೀಸ್ ಬಗ್ಗೆ ವಿಚಾರಿಸಿದ್ದರು. ಎಲ್ಲ ವಿಚಾರವನ್ನು ಅವರು ತಿಳಿದ ಬಳಿಕ ನೀವು ಆರ್ಸಿಬಿ ತಂಡಕ್ಕೆ ಸೇರ್ಪಡೆಗೊಂಡಿದ್ದೀರ ಎಂದು ಹೇಳಿದರು. ಈ ವೇಳೆ ನನಗೆ ಒಂದು ಕ್ಷಣ ಅಚ್ಚರಿಯಾಯಿತು ಎಂದು ಜಾಧವ್ ತಿಳಿಸಿದರು.
ಆರ್ಸಿಬಿ ತಂಡಕ್ಕೆ ಆಯ್ಕೆಯಾದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಜಾಧವ್, ಆರ್ಸಿಬಿ ಪರ ಆಡಲು ಉತ್ಸುಕನಾಗಿದ್ದೇನೆ. ತಂಡವನ್ನು ಸೇರಲು ಅವಕಾಶ ನೀಡಿದ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದರು. “ಐಪಿಎಲ್ ಆಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ತಂಡಕ್ಕಾಗಿ ಶೇ. 100 ರಷ್ಟು ಕೊಡುಗೆ ನೀಡಲು ನಾನು ಬಯಸುತ್ತೇನೆ” ಎಂದು ಜಾಧವ್ ಹೇಳಿದ್ದಾರೆ. “ಕಳೆದ ಒಂದು ವರ್ಷಗಳಿಂದ ನಾನು ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವಿದ್ದರೂ ನನ್ನ ಆಡದ ಬಗ್ಗೆ ವಿಶ್ವಾಸ ಇಟ್ಟು ಅವಕಾಶ ನೀಡಿದ ಆರ್ಸಿಬಿ ತಂಡಕ್ಕೆ ನಾನು ಸದಾ ಚಿರಋಣಿ” ಎಂದರು.
ಇದನ್ನೂ ಓದಿ IPL 2023: ಸಿಕ್ಸರ್ ಮೂಲಕ ಟಿ20 ಕ್ರಿಕೆಟ್ನಲ್ಲಿ ನೂತನ ದಾಖಲೆ ಬರೆದ ರಸೆಲ್
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ(ನಾಯಕ), ಸುಯಶ್ ಪ್ರಭುದೇಸಾಯಿ, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಾಬಾಜ್ ಅಹ್ಮದ್, ಹರ್ಷಲ್ ಪಟೇಲ್, ಕೇದರ್ ಜಾಧವ್, ಕರ್ಣ್ ಶರ್ಮಾ, ಮಹಿಪಾಲ್ ಲೊಮ್ರೊರ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್, ಸಿದ್ಧಾರ್ಥ್ ಕೌಲ್, ಆಕಾಶದೀಪ್, ಹಿಮಾಂಶು ಶರ್ಮಾ, ಮಿಚೆಲ್ ಬ್ರೇಸ್‌ವೆಲ್, ವೈಶಾಖ್ ವಿಜಯ್ ಕುಮಾರ್.