Site icon Vistara News

IPL 2023: ಗೆಲುವಿನ ಬಳಿಕ ತಾಯಿಯನ್ನು ಅಪ್ಪಿಕೊಂಡ ಕೆಕೆಆರ್​ ನಾಯಕ ನಿತೀಶ್​ ರಾಣಾ

Nitish Rana

ಮುಂಬಯಿ: ಪಂಜಾಬ್​ ಕಿಂಗ್ಸ್​ ವಿರುದ್ಧದ ಲಾಸ್ಟ್​ ಬಾಲ್​ ಥ್ರಿಲ್ಲಿಂಗ್​ನಲ್ಲಿ ಕೆಕೆಆರ್​ ತಂಡ 5 ವಿಕೆಟ್​ಗಳ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಈ ಸ್ಮರಣೀಯ ಗೆಲುವಿನ ಬಳಿಕ ಕೆಕೆಆರ್​ ತಂಡದ ನಾಯಕ ನಿತೀಶ್​ ರಾಣಾ ಅವರು ತಮ್ಮ ತಾಯಿಯನ್ನು ಬೇಟಿಯಾಗಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈಡನ್​ ಗಾರ್ಡನ್ಸ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಈ ಹಣಾಹಣಿಯಲ್ಲಿ ಪಂಜಾಬ್ ಕಿಂಗ್ಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 179 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಕೆಕೆಆರ್​ ತಂಡ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 182 ರನ್ ಬಾರಿಸಿ ವಿಜಯ ಸಾಧಿಸಿತು.

ಅಂತಿಮ ಓವರ್​ನಲ್ಲಿ ಕೆಕೆಆರ್​ಗೆ ಗೆಲುವಿಗೆ 6 ರನ್​ಗಳ ಸವಾಲು ಎದುರಾಯಿತು. ಅರ್ಶ್​ದೀಪ್​ ಸಿಂಗ್​ ಎಸೆದ ಈ ಓವರ್​ನಲ್ಲಿ ಪ್ರತಿ ಎಸೆತವೊಂದಕ್ಕೆ ರನ್​ ಗಳಿಸುತ್ತಾ ಸಾಗಿದ ಕೆಕೆಆರ್​ ಎರಡು ಎಸೆತಕ್ಕೆ 2 ರನ್​ ಬೇಕಿದ್ದಾಗ ರಸೆಲ್​ ರನೌಟ್​ ಆದರು. ಈ ವೇಳೆ ಪಂದ್ಯ ಮತ್ತಷ್ಟು ರೋಚಕತೆ ಸೃಷ್ಟಿಸಿತು. ಅಂತಿಮ ಎಸೆತದಲ್ಲಿ ಗೆಲುವಿಗೆ 2 ರನ್​ ಬೇಕಿದ್ದಾಗ ರಿಂಕು ಸಿಂಗ್​ ಅವರು ಬೌಂಡರಿ ಬಾರಿಸಿ ತಂಡದ ಗೆಲುವನ್ನು ಸಾರಿದರು.

ಪಂದ್ಯ ಮುಕ್ತಾಯದ ಬಳಿಕ ನಾಯಕ ನಿತೀಶ್​ ರಾಣಾ ಅವರು ತಮ್ಮ ತಾಯಿಯನ್ನು ಭೇಟಿಯಾಗಿ ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ. ನಿತೀಶ್​ ರಾಣಾ ಅವರು ಈ ಪಂದ್ಯದಲ್ಲಿ 51 ರನ್ ಬಾರಿಸಿ ಮಿಂಚಿದರು. ಈ ಇನಿಂಗ್ಸ್​ನಲ್ಲಿ 6 ಬೌಂಡರಿ ಮತ್ತು ಒಂದು ಸಿಕ್ಸರ್​ ಬಾರಿಸಿದರು.

ಇದನ್ನೂ ಓದಿ IPL 2023: ಗಂಭೀರ್​ಗೆ ವಿಶೇಷ ಸಂದೇಶ ರವಾನಿಸಿದ ಕೊಹ್ಲಿ; ವಿಡಿಯೊ ವೈರಲ್

ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಆ್ಯಂಡ್ರೆ ರಸೆಲ್ 23 ಎಸೆತಗಳಲ್ಲಿ 43 ರನ್ ಬಾರಿಸಿದರು. ರಿಂಕು ಸಿಂಗ್ 10 ಎಸೆತಗಳಿಂದ ಅಜೇಯ 21 ರನ್ ಬಾರಿಸಿದರು. ಪಂಜಾಬ್​ ಪರ ರಾಹುಲ್ ಚಾಹರ್ ಎರಡು ವಿಕೆಟ್​ ಪಡೆದರು. ಈ ಸೋಲಿನೊಂದಿಗೆ ಪಂಜಾಬ್​ ನಾಯಕ ಶಿಖರ್ ಧವನ್​ (57) ಅವರ ಅರ್ಧ ಶತಕ ವ್ಯರ್ಥಗೊಂಡಿತು.

Exit mobile version