Site icon Vistara News

Saachi Marwah: ಕೆಕೆಆರ್​ ನಾಯಕ ನಿತೀಶ್‌ ರಾಣಾ ಪತ್ನಿಯ ಕಾರು ಹಿಂಬಾಲಿಸಿ ಡಿಕ್ಕಿ ಹೊಡೆದ ಅಪರಿಚಿತರು

Car Chased by Two Miscreants in Delhi

ನವದೆಹಲಿ: ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ನಾಯಕ ನಿತೀಶ್ ರಾಣಾ ಅವರ ಪತ್ನಿ ಸಾಚಿ ಮರ್ವಾ(Saachi Marwah) ಅವರ ಕಾರನ್ನು ಇಬ್ಬರು ಅಪರಿಚಿತ ವ್ಯಕ್ತಿಗಳು ಹಿಂಬಾಲಿಸಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆದ ಘಟನೆ ದೆಹಲಿಯಲ್ಲಿ ನಡೆದಿದೆ. ಈ ವಿಚಾರವನ್ನು ಸಾಚಿ ಮರ್ವಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರಾಣಾ ಪತ್ನಿ ಸಾಚಿ ಮರ್ವಾ ಅವರು ಕಾರಿನಲ್ಲಿ ಮನೆಗೆ ಬರುವ ಮಾರ್ಗದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಕೆಲ ದೂರ ಹಿಂಬಾಲಿಸಿಕೊಂಡು ಬಂದ ಈ ಅಪರಿಚಿತ ವ್ಯಕ್ತಿಗಳು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ತಮ್ಮ ಕಾರನ್ನು ಹಿಂಬಾಲಿಕೊಂಡು ಬಂದ ಇಬ್ಬರು ವ್ಯಕ್ತಿಗಳ ಫೋಟೊವನ್ನು ಮರ್ವಾ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯನ್ನು ಹಾಕಿಕೊಂಡಿದ್ದಾರೆ.

ಘಟನೆಯ ಬಗ್ಗೆಯೂ ಮಾಹಿತಿ ನೀಡಿರುವ ಮರ್ವಾ ಅವರು, “ಈ ಘಟನೆ ನಡೆದ ತಕ್ಷಣ ತಾನು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದೆ. ಆದರೆ ಪೊಲೀಸರು ನನಗೆ ಯಾವುದೇ ಸಹಾಯ ಮಾಡಲಿಲ್ಲ. ನೀವು ಈಗಾಗಲೇ ಮನೆಗೆ ಸುರಕ್ಷಿತವಾಗಿ ತಲುಪಿದ್ದೀರಾ ಎಂದು ಕೇಳಿ, ಮುಂದಿನ ಸಲ ಈ ರೀತಿಯ ಘಟನೆ ಸಂಭವಿಸಿದರೆ ವಾಹನದ ನಂಬರ್‌ ನೋಟ್‌ ಮಾಡಿಕೊಳ್ಳಿ” ಎಂಬುದಾಗಿ ಸಲಹೆ ನೀಡಿದ್ದಾರೆ ಎಂದರು.

ಇದನ್ನೂ ಓದಿ Batsmen with the most runs in the death overs in IPL 2023: 2023ನೇ ಆವೃತ್ತಿಯ ಐಪಿಎಲ್​​ನಲ್ಲಿ ಇದುವರೆಗೆ ಡೆತ್​ ಓವರ್​ಗಳಲ್ಲಿ ಹೆಚ್ಚು ರನ್​ ಬಾರಿಸಿದ ಬ್ಯಾಟರ್​​ಗಳು

ಸಾಚಿ ಮರ್ವಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಈ ಫೋಸ್ಟ್​ ಮಾಡುತ್ತಿದ್ದಂತೆ ಹಲವು ನೆಟ್ಟಿಗರು ಟ್ವಿಟರ್​ನಲ್ಲಿ ದೆಹಲಿ ಪೊಲೀಸರ ಈ ಉದಾಸಿನದ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ರಕ್ಷಣೆಗೆ ಬಾರದ ಈ ಪೊಲೀಸ್​ ಅಧಿಕಾತರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ IPL 2023: ರಾಹುಲ್​ ಬದಲು ಲಕ್ನೋ ತಂಡ ಸೇರಿದ ಕನ್ನಡಿಗ ಕರುಣ್​ ನಾಯರ್

ನಿತೀಶ್​ ರಾಣಾ ಅವರು ಶ್ರೇಯಸ್​ ಅಯ್ಯರ್​ ಬೆನ್ನು ನೋವಿನಿಂದಾಗಿ ಐಪಿಎಲ್​ನಿಂದ ಹೊರ ಬಿದ್ದ ಕಾರಣ ಕೆಕೆಆರ್​ ತಂಡದ ನಾಯಕತ್ವ ವಹಿಸಿಕೊಂಡರು. ಸದ್ಯ ಕೆಕೆಆರ್​ 10 ಪಂದ್ಯಗಳನ್ನು ಆಡಿದ್ದು 4 ಪಂದ್ಯಗಳಲ್ಲಿ ಗೆಲುವು ಸಾಧಿಸಿ 8 ಅಂಕದೊಂದಿಗೆ 8ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

Exit mobile version