Site icon Vistara News

IPL 2023: ಅಜಿಂಕ್ಯ ರಹಾನೆ ಬ್ಯಾಟಿಂಗ್​ ಆರ್ಭಟಕ್ಕೆ ಕಂಗಾಲಾದ ಕೆಕೆಆರ್​

IPL 2023: KKR upset by Ajinkya Rahane's batting riot

IPL 2023: KKR upset by Ajinkya Rahane's batting riot

ಕೋಲ್ಕೊತಾ: ಹಿರಿಯ ಆಟಗಾರ ಅಜಿಂಕ್ಯ ರಹಾನೆ(ಅಜೇಯ 71) ಮತ್ತು ಶಿವಂ ದುಬೆ(50) ಅವರ ವಿಸ್ಫೋಟಕ ಬ್ಯಾಟಿಂಗ್​ ಪ್ರದರ್ಶನದಿಂದ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಚೆನ್ನೈ ಸೂಪರ್​ ಕಿಂಗ್ಸ್​ ಬೃಹತ್​ ಮೊತ್ತ ಪೇರಿಸಿದೆ. ಕೆಕೆಆರ್​ ಗೆಲುವಿಗೆ 236 ರನ್​ ಬಾರಿಸಬೇಕಿದೆ.

ಕೋಲ್ಕೊತಾದ ಐತಿಹಾಸಿಕ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 234 ರನ್​ ಗಳಿಸಿದೆ. ಇನಿಂಗ್ಸ್​ ಆರಂಭಿಸಿದ ಚೆನ್ನೈಗೆ ಆರಂಭಿಕಾರಾದ ಋತುರಾಜ್​ ಗಾಯಕ್ವಾಡ್​ ಮತ್ತು ಡೆವೋನ್​ ಕಾನ್ವೆ ಉತ್ತಮ ಅಡಿಪಾಯ ನಿರ್ಮಿಸಿದರು. ಈ ಜೋಡಿ 10 ಸರಾಸರಿಯಲ್ಲಿ ಬ್ಯಾಟ್​ ಬೀಸಿ ಪವರ್​ ಪ್ಲೇಯಲ್ಲಿ 59 ರನ್​ ಒಟ್ಟುಗೂಡಿಸಿದರು.

ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸುತ್ತಿದ್ದ ಈ ಜೋಡಿಯನ್ನು 19 ವರ್ಷದ ನೀಳ ಕೇಶದ ಮಿಸ್ಟ್ರಿ ಸ್ಪಿನ್ನರ್ ಸುಯೇಶ್ ಶರ್ಮಾ ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಗಾಯಕ್ವಾಡ್​ ಅವರನ್ನು ಕ್ಲೀನ್​ ಬೌಲ್ಡ್​ ಮಾಡಿದರು. ಅವರ ಗಳಿಕೆ 20 ಎಸೆತಗಳಲ್ಲಿ 35. ಈ ವಿಕೆಟ್​ ಬಿದ್ದರೂ ಚೆನ್ನೈಗೆ ಯಾವುದೇ ತೊಂದರೆ ಆಗಲಿಲ್ಲ. ಬಳಿಕ ಆಡಲಿಳಿದ ಅಜಿಂಕ್ಯ ರಹಾನೆ ಕೂಡ ಬಿರುಸಿನಿಂದಲೇ ಬ್ಯಾಟಿಂಗ್​ ನಡೆಸಿದರು. ಮತ್ತೊಂದು ಬದಿಯಲ್ಲಿ ಸಿಡಿಯುತ್ತಿದ್ದ ಎಡಗೈ ಬ್ಯಾಟರ್​ ಡೆವೋನ್​ ಕಾನ್ವೆ 34 ಎಸೆತಗಳ ಮುಂದೆ ಅರ್ಧಶತಕ ಪೂರೈಸಿದರು.

12 ಓವರ್​ಗಳ ತನಕ ಬ್ಯಾಟಿಂಗ್​ ವಿಸ್ತರಿಸಿದ ಕಾನ್ವೆ ಮೂರು ಸಿಕ್ಸರ್​ ಮತ್ತು ನಾಲ್ಕು ಬೌಂಡರಿ ಬಾರಿಸಿ 56 ರನ್​ ಗಳಿಸಿದರು. ಈ ವಿಕೆಟ್​ ಪತನದ ಬಳಿಕ ಕ್ರೀಸ್​ಗೆ ಬಂದ ಶಿವಂ ದುಬೆ ಆರಂಭದಿಂದಲೇ ಕೆಕೆಆರ್​ ಬೌಲರ್​ಗಳ ಮೇಲೆರಗಿ ಈಡನ್‌ ಗಾರ್ಡನ್ಸ್​ನಲ್ಲಿ ಸಿಕ್ಸರ್​ ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದರು. ಮತ್ತೊಂದು ಬದಿಯಲ್ಲಿ ಬ್ಯಾಟಿಂಗ್​ ನಡೆಸುತ್ತಿದ್ದ ಅಜಿಂಕ್ಯ ರಹಾನೆ ಕೂಡ ಸಿಡಿಯುತ್ತಿದ್ದರು.

ಉಭಯ ಆಟಗಾರರ ಬ್ಯಾಟಿಂಗ್​ ಪ್ರತಾಪದ ಮುಂದೆ ಕೆಕೆಆರ್​ ಬೌಲರ್​ಗಳು ಸರಿಯಾಗಿ ದಂಡಿಸಿಕೊಂಡರು. ಪ್ರತಿ ಓವರ್​ಗೂ ಕನಿಷ್ಠ 2 ಬೌಂಡರಿ ಅಥವಾ ಸಿಕ್ಸರ್​ ಸಿಡಿಯುತ್ತಲ್ಲೇ ಇತ್ತು. ರಹಾನೆ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರ ಬೆನ್ನಿಗೆ ದುಬೆ ಕೂಡ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಔಟಾದರು. ಅವರು 5 ಸಿಕ್ಸರ್​ ಮತ್ತು 2 ಬೌಂಡರಿ ನೆರವಿನಿಂದ ಭರ್ತಿ 50 ರನ್​ ಬಾರಿಸಿದರು. ಈ ಜೋಡಿ ಮೂರನೇ ವಿಕೆಟ್​ಗೆ 85 ರನ್​ಗಳನ್ನು ರಾಶಿ ಹಾಕಿತು.

ಇದನ್ನೂ ಓದಿ IPL 2023: ಆರ್​ಸಿಬಿ ಪರ ವಿಶೇಷ ದಾಖಲೆ ಬರೆದ ಗ್ಲೆನ್​ ಮ್ಯಾಕ್ಸ್​ವೆಲ್​

ಅಜೇಯರಾಗಿ ಉಳಿದ ರಹಾನೆ ಕೇವಲ 29 ಎಸೆತಗಳ ಮುಂದೆ 71 ರನ್​ ಬಾರಿಸಿದರು. ಈ ಇನಿಂಗ್ಸ್​ ವೇಳೆ ಬರೋಬ್ಬರಿ 5 ಸಿಕ್ಸರ್​ ಮತ್ತು 6 ಬೌಂಡರಿ ಸಿಡಿಯಿತು. ಅಂತಿಮ ಹಂತದಲ್ಲಿ ಜಡೇಜಾ ಕೂಡ ಸ್ಫೋಟಕ ಬ್ಯಾಟಿಂಗ್​ ನಡೆಸಿದ ಪರಿಣಾಮ ತಂಡ ಬೃಹತ್​ ಮೊತ್ತ ಕಲೆಹಾಕಿತು. ಜಡೇಜಾ 8 ಎಸೆತದಲ್ಲಿ 18 ರನ್​ ಗಳಿಸಿದರು.

Exit mobile version