Site icon Vistara News

IPL 2023: ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡ ಕೆಕೆಆರ್​

Kolkata Knight Riders vs Sunrisers Hyderabad

Kolkata Knight Riders vs Sunrisers Hyderabad

ಕೋಲ್ಕೊತಾ: ಸನ್​ರೈಸರ್ಸ್​ ವಿರುದ್ಧ ಟಾಸ್​ ಗೆದ್ದ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ನಾಯಕ ನಿತೀಶ್​ ರಾಣಾ ಅವರು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹೈದರಾಬಾದ್​ ಬ್ಯಾಟಿಂಗ್​ ಆಹ್ವಾನ ಪಡೆದಿದೆ. ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಸತತ 5 ಸಿಕ್ಸರ್​ ಬಾರಿಸಿಸುವ ಮೂಲಕ ಕೆಕೆಆರ್​ಗೆ ಸ್ಮರಣೀಯ ಗೆಲುವು ತಂದುಕೊಟ್ಟ ರಿಂಕು ಸಿಂಗ್​ ಅವರು ಈ ಪಂದ್ಯದ ಪ್ರಮುಖ ಹೈಲೆಟ್​ ಆಗಿದ್ದಾರೆ. ಮತ್ತೊಮ್ಮೆ ಅವರ ಬ್ಯಾಟಿಂಗ್​ ವೈಭವವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಪಿಚ್ ರಿಪೋರ್ಟ್

ಕೋಲ್ಕೊತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದ ಪಿಚ್​ ಬ್ಯಾಟಿಂಗ್ ಸ್ನೇಹಿಯಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ರನ್ ಹೊಳೆ ಹರಿಯುವ ಸಾಧ್ಯತೆಗಳಿವೆ. ಇನ್ನು ಇಲ್ಲಿ ಇಬ್ಬನಿ ಸಮಸ್ಯೆಯೂ ಕಾಡಲಿದೆ. ಆದ್ದರಿಂದ ದ್ವಿತೀಯ ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ ಮಾಡಲು ಸುಲಭವಾಗಿದೆ. ಇದೇ ಕಾರಣಕ್ಕೆ ಟಾಸ್​ ಗೆದ್ದ ಕೆಕೆಆರ್​ ಮೊದಲು ಬೌಲಿಂಗ್​ ಆಯ್ಕೆ ಮಾಡಿದೆ.

ಸಂಭಾವ್ಯ ತಂಡಗಳು

ಸನ್‌ರೈಸರ್ಸ್ ಹೈದರಾಬಾದ್: ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಮ್​ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಉಮ್ರಾನ್ ಮಲಿಕ್, ಟಿ ನಟರಾಜನ್

ಇದನ್ನೂ ಓದಿ IPL 2023: ಪಂದ್ಯ ಗೆದ್ದರೂ ಹಾರ್ದಿಕ್​ ಪಾಂಡ್ಯಗೆ ಬಿತ್ತು ದಂಡದ ಬರೆ

ಕೊಲ್ಕತ್ತಾ ನೈಟ್ ರೈಡರ್ಸ್: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ವೆಂಕಟೇಶ್​ ಅಯ್ಯರ್​, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆ್ಯಂಡ್ರೆ ರಸೆಲ್, ಸುನಿಲ್ ನಾರಾಯಣ್​, ಶಾರ್ದೂಲ್ ಠಾಕೂರ್, ಸುಯಶ್ ಶರ್ಮಾ, ಲಾಕಿ ಫ‌ರ್ಗ್ಯುಸನ್‌, ಉಮೇಶ್ ಯಾದವ್, ವರುಣ್ ಚಕ್ರವರ್ತಿ.

Exit mobile version