Site icon Vistara News

IPL 2023: ಗಂಭೀರ್​ಗೆ ವಿಶೇಷ ಸಂದೇಶ ರವಾನಿಸಿದ ಕೊಹ್ಲಿ; ವಿಡಿಯೊ ವೈರಲ್

virat kohli and gambhir

ಮುಂಬಯಿ: ಲಕ್ನೋ ಮತ್ತು ಆರ್​ಸಿಬಿ ವಿರುದ್ಧದ ಕಳೆದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಮತ್ತು ಗೌತಮ್ ಗಂಭೀರ್​ ಅವರು ಮೈದಾನದಲ್ಲೇ ವಾಕ್ಸಮರ ನಡೆಸಿದ ವಿಚಾರ ಎಲ್ಲರಿಗೂ ತಿಳಿದೇ ಇದೆ. ಇದೀಗ ಮುಂದುವರಿದ ಭಾಗವೆಂಬಂತೆ ಕೊಹ್ಲಿ ಅವರು ಗಂಭೀರ್​ಗೆ ವಿಶೇಷ ಆಹ್ವಾನ ನೀಡಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಲಕ್ನೋ ಗೆಲುವು ದಾಖಲಿಸಿತ್ತು. ಗೆಲುವಿನ ಬಳಿಕ ಗಂಭೀರ್​ ಆರ್​ಸಿಬಿ ಅಭಿಮಾನಿಗಳಿಗೆ ಸುಮ್ಮನಿರುವಂತೆ ಕೈ ಸನ್ನೆ ಮಾಡಿದ್ದರು. ಆದರೆ ಲಕ್ನೋದಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಆರ್​ಸಿಬಿ ಗೆದ್ದು ಬೀಗಿತ್ತು. ಪಂದ್ಯದುದ್ದಕ್ಕೂ ಕೊಹ್ಲಿ ಈ ಹಿಂದೆ ಲಕ್ನೋ ಆಟಗಾರರು ಲೇವಡಿ ಮಾಡಿದ ಎಲ್ಲ ಸನ್ನೆಗಳನ್ನು ಬಡ್ಡಿ ಸಮೇತ ತೀರಿಸಿಕೊಂಡರು. ಇದು ಗಂಭೀರ್​ಗೆ ಪಿತ್ತ ನೆತ್ತಿಗೇರುವಂತೆ ಮಾಡಿತ್ತು.

ಪಂದ್ಯ ಮುಕ್ತಾಯದ ಬಳಿಕ ಉಭಯ ತಂಡಗಳ ಆಟಗಾರರು ಹಸ್ತಲಾಘವ ಮಾಡುವ ವೇಳೆ ಕೊಹ್ಲಿ ಮತ್ತು ನವೀನ್ ಉಲ್​ ಹಕ್​ ಜತೆಯಾಗಿ ಏನೋ ಸಂಭಾಷಣೆ ಮಾಡುತ್ತಿದ್ದರು. ಇದೇ ವೇಳೆ ಮಧ್ಯ ಪ್ರವೇಶಿಸಿದ ಗಂಭೀರ್​ ಅವರು ನವೀನ್​ ಉಲ್​ ಅವರನ್ನು ಕೊಹ್ಲಿ ಜತೆ ಮಾತನಾಡಬೇಡ ಎಂಬ ಅರ್ಥದಲ್ಲಿ ಅವರನ್ನು ಅಲ್ಲಿಂದ ಕರೆದುಕೊಂಡು ಹೋದರು. ಇದು ಕೊಹ್ಲಿಯನ್ನು ಕೆರಳಿಸಿತ್ತು. ಮೈದಾನದಲ್ಲೇ ಇವರಿಬ್ಬರ ಮಧ್ಯೆ ವಾಕ್ಸಮರ ನಡೆದು ಕೈ ಕೈ ಮಿಲಾಯಿಸುವ ಹಂತದವರೆಗೂ ಹೋಗಿತ್ತು. ದುರ್ವರ್ತನೆ ತೋರಿದ ಕಾರಣ ಇವರಿಬ್ಬರಿಗೆ ಪಂದ್ಯದ ಸಂಭಾವನೆಯ ಶೇ. 100ರಷ್ಟು ದಂಡ ವಿಧಿಸಲಾಗಿತ್ತು.

ಇದನ್ನೂ ಓದಿ IPL 2023: ತವರಿಗೆ ಮರಳಿದ ಆರ್ಚರ್​; ಮುಂಬೈ ತಂಡ ಸೇರಿದ ಜೋರ್ಡನ್​

ಇದೀಗ ವಿರಾಟ್​​ ಕೊಹ್ಲಿ ಅವರು ಗೌತಮ್​ ಗಂಭೀರ್​ಗೆ ಮೆಸೇಜ್​ ಕೊಟ್ಟಿದ್ದಾರೆ. ‘ಹಾಯ್​ ಗಂಭೀರ್​ ನಿಮಗೊಂದು ಸ್ಪೆಷಲ್​ ಮೆಸೇಜ್’​ ಇದಾಗಿದೆ. ಈ ವಿಡಿಯೊವನ್ನು ಆರ್​ಸಿಬಿ ಮತ್ತು ಕೊಹ್ಲಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ.

ಅಸಲಿಗೆ ಇದು ಎಡಿಟೆಡ್​ ವಿಡಿಯೊವಾಗಿದೆ. ಇದು ಜಿಯೋ ಒಡೆತನದ ಒಂದು ಜಾಹೀರಾತಾಗಿದೆ. ಈ ಜಾಹೀರಾತಿನಲ್ಲಿ ವಿರಾಟ್​ ಕೊಹ್ಲಿ, ಫಾಫ್​​ ಡು ಪ್ಲೇಸಿಸ್​, ಗ್ಲೆನ್​ ಮಾಕ್ಸ್​ವೆಲ್​ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಕೊಹ್ಲಿ ಧ್ವನಿಯನ್ನು ಎಡಿಟ್​ ಮಾಡಲಾಗಿದ್ದು ”ಹಾಯ್​ ಗಂಭೀರ್​​ ನಿಮಗೊಂದು ವಿಶೇಷ ಸಂದೇಶವಿದೆ. ಬನ್ನಿ ಜಿಯೋ ವಿಐಪಿ ಬಾಕ್ಸ್​ಗೆ ಸೇರಿಕೊಳ್ಳಿ” ಎಂದು ಹೇಳಿದ್ದಾರೆ.

Exit mobile version