ಚೆನ್ನೈ: ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಬುಧವಾರ ನಡೆಯುವ ಐಪಿಎಲ್ನ(IPL 2023) ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅದೃಷ್ಠ ಪರೀಕ್ಷೆಗೆ ಇಳಿಯಲಿದೆ. ಅದೃಷ್ಟ ಯಾರಿಗೆ ಒಲಿಯಲಿದೆ ಎಂಬುವುದು ಈ ಪಂದ್ಯದ ಕುತೂಹಲ. ಈ ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ ಮತ್ತು ಪ್ಲೇಯಿಂಗ್ ಇಲೆವೆನ್ ಬಗೆಗಿನ ಸಂಪೂರ್ಣ ಮಾಹಿತಿ ಇಂತಿದೆ.
ಪಿಚ್ ರಿಪೋರ್ಟ್
ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂನ ಪಿಚ್ ಸ್ಪಿನ್ ಸ್ನೇಹಿಯಾಗಿದೆ. ವೇಗಿಗಳಿಗೆ ಇಲ್ಲಿನ ಪಿಚ್ ಕಡಿಮೆ ಪ್ರಮಾಣದಲ್ಲಿ ನೆರವು ನೀಡುತ್ತದೆ. ಇಲ್ಲಿ ರನ್ ಗಳಿಸಲು ಅಷ್ಟು ಸುಲಭವಿಲ್ಲ. ಈ ಪಿಚ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡಗಳೇ ಹೆಚ್ಚು ಬಾರಿ ಗೆದ್ದಿವೆ. 150 ರನ್ ಬಾರಿಸಿದರೂ ಇದನ್ನೂ ಚೇಸಿಂಗ್ ಮಾಡುವುದು ಕಷ್ಟಕರ. ಆದರೂ ಇಲ್ಲಿ ಆಡಿದ ಬೆರಳೆಣಿಕೆಯ ಪಂದ್ಯಗಳಲ್ಲಿ 200 ರನ್ ದಾಖಲಾಗಿದೆ. ಸದ್ಯದ ಪರಿಸ್ಥಿತಿ ಗಮನಿಸುವಾಗ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು.
ಮಳೆ ಸಾಧ್ಯತೆ
ಈ ಪಂದ್ಯಕ್ಕೆ ಮಳೆ ಕಾಟ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚೆನ್ನೈಯ ಪಕ್ಕದ ರಾಜ್ಯಚಾದ ಕರ್ನಾಟಕ ಮತ್ತು ಕೇರಳದ ಕೆಲ ಪ್ರವೇಶಗಳಲ್ಲಿ ಮಳೆಯಾಗುತ್ತಿದ್ದು. ಇಲ್ಲಿಯೂ ಮಳೆ ಕಾಟ ಇರಿವ ಸಾಧ್ಯತೆ ಇದೆ ಎಂದು ಹೇಳಿದೆ. ಪ್ರತಿಕೂಲ ಹವಾಮಾನವು ಪಂದ್ಯಕ್ಕೆ ಅಡ್ಡಿಪಡಿಸಿದರೆ, ಸೂಪರ್ ಓವರ್ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ. ಒಂದು ವೇಳೆ ಪಂದ್ಯಕ್ಕೆ ಮಳೆ ಸಂಪೂರ್ಣ ಅಡ್ಡಿಪಡಿಸಿ, ಪಂದ್ಯ ರದ್ದಾದರೆ ಲೀಗ್ ಹಂತದಲ್ಲಿ ಮುಂದಿರುವ ತಂಡಕ್ಕೆ ಕ್ವಾಲಿಫೈಯರ್ ಟಿಕೆಟ್ ನೀಡಲಾಗುತ್ತದೆ. ಹೀಗಾದರೆ ಲಕ್ನೋ ತಂಡ ಈ ಅದೃಷ್ಟ ಪಡೆಯಲಿದೆ.
ಸಂಭಾವ್ಯ ತಂಡಗಳು
ಲಕ್ನೊ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕರಣ್ ಶರ್ಮ, ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೊಯಿನಿಸ್, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ (ನಾಯಕ), ಆಯೂಷ್ ಬದೋನಿ, ಕೆ. ಗೌತಮ್, ರವಿ ಬಿಷ್ಟೋಯಿ, ನವೀನ್ ಉಲ್-ಹಕ್, ಮೊಹ್ಸಿನ್ ಖಾನ್.
ಇದನ್ನೂ ಓದಿ IPL 2023: ಮುಂಬೈ ವಿರುದ್ಧ ಅಜೇಯ ಓಟ ಮುಂದುವರಿಸುವುದೇ ಲಕ್ನೋ ಸೂಪರ್ ಜೈಂಟ್ಸ್
ಮುಂಬಯಿ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ) , ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ನೇಹಲ್ ವಧೇರಾ, ವಿಷ್ಣು ವಿನೋದ್, ಟಿಮ್ ಡೇವಿಡ್, ಕ್ಯಾಮೆರಾನ್ ಗ್ರೀನ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆನ್ಡಾರ್ಫ್, ಕುಮಾರ್ ಕಾರ್ತಿಕೇಯ.