ಬೆಂಗಳೂರು: ಕೆಕೆಆರ್ ವಿರುದ್ಧ ಹೀನಾಯ ಸೋಲು ಕಂಡ ಆರ್ಸಿಬಿ(Royal Challengers Bangalore) ಲಕ್ನೋ ಸೂಪರ್ಜೈಂಟ್ಸ್(Lucknow Super Giants) ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದಿದೆ. ಹೆಸರಿಗೆ ಮಾತ್ರ ಕನ್ನಡಿಗರ ತಂಡವಾದ ಆರ್ಸಿಬಿಗೆ ಇದು ಎರಡನೇ ತವರಿನ ಪಂದ್ಯ. ಆದರೆ ಲಕ್ನೋ ನಾಯಕ ಕೆ.ಎಲ್. ರಾಹುಲ್ ಅವರಿಗೆ ಇದು ತವರು ಪಂದ್ಯ ಎಂಬುದು ಈ ಪಂದ್ಯದ ವಿಶೇಷ.
ಪಿಚ್ ರಿಪೋರ್ಟ್
ಚಿನ್ನಸ್ವಾಮಿ ಸ್ಟೇಡಿಯಂನ ಪಿಚ್ ಬ್ಯಾಟಿಂಗ್ಗೆ ಹೇಳಿ ಮಾಡಿಸಿದಂತೆ. ಇದು ಸಂಪೂರ್ಣ ಬ್ಯಾಟಿಂಗ್ ಸ್ನೇಹಿ ಪಿಚ್ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಇಲ್ಲಿ ಬೌಂಡರಿ ಗೆರೆ ಕೂಡ ಅಂತ್ಯಂತ ಸಮೀಪವಿರುವ ಕಾರಣ ಬ್ಯಾಟರ್ಗಳು ಯಾವುದೇ ಒತ್ತಡವಿಲ್ಲದೆ ಬ್ಯಾಟ್ ಬೀಸಬಹುದಾಗಿದೆ. ಆದರೆ ಬೌಲರ್ಗಳು ಮಾತ್ರ ಶಕ್ತಿ ಮೀರಿ ಪ್ರಯತ್ನ ತೋರಬೇಕಿದೆ. ಎಷ್ಟೇ ದೊಡ್ಡ ಮೊತ್ತವನ್ನು ಬಾರಿಸಿದರೂ ಇಲ್ಲಿ ಚೇಸ್ ಮಾಡಿ ಗೆಲುವು ಸಾಧಿಸಿಬಹುದು. ಇದೇ ಕಾರಣಕ್ಕೆ ಲಕ್ನೋ ನಾಯಕ ರಾಹುಲ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಲಕ್ನೋ ಸೂಪರ್ ಜೇಂಟ್ಸ್ ಮತ್ತು ಆರ್ಸಿಬಿ ತಂಡಗಳು ಇದುವರೆಗೆ 2 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಎರಡೂ ಪಂದ್ಯಗಳನ್ನು ಆರ್ಸಿಬಿ ಗೆದ್ದಿದೆ. ಈ ಲೆಕ್ಕಾಚಾರದಲ್ಲಿ ಆರ್ಸಿಬಿ ಬಲಿಷ್ಠವಾಗಿದೆ. ಆದರೆ ಆರ್ಸಿಬಿಯ ಮೇಲೆ ಪ್ರತಿ ಪಂದ್ಯದಲ್ಲಿಯೂ ನಿರೀಕ್ಷೆ ಇಡುವುದು ಕಷ್ಟ. ಏಕೆಂದರೆ ಈ ತಂಡದ ಪ್ರದರ್ಶನ ಇತರ ಎಲ್ಲ ತಂಡಗಳಿಗಿಂತಲೂ ಭಿನ್ನವಾಗಿದೆ. ಒಮ್ಮೆ 200 ರನ್ ಬಾರಿಸಿದರೆ ಮತ್ತೊಮ್ಮೆ ನೂರರ ಒಳಗಡೆ ಗಂಟುಮೂಟೆ ಕಟ್ಟುತ್ತದೆ.
ಇದನ್ನೂ ಓದಿ IPL 2023 : ಬಡತನದ ಬೇಗೆಯಲ್ಲಿ ಅರಳಿದ ಪ್ರತಿಭೆ ಕೋಲ್ಕೊತಾ ತಂಡದ ರಿಂಕು ಸಿಂಗ್
ಸಂಭಾವ್ಯ ತಂಡ
ಆರ್ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುಯೇಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ವನಿಂದು ಹಸರಂಗ / ಮೈಕಲ್ ಬ್ರೆಸ್‌ವೆಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.
ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ಕ್ವಿಂಟನ್ ಡಿ ಕಾಕ್ / ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಆಯುಷ್ ಬದೊನಿ, ರೊಮಾರಿಯೊ ಶೆಫರ್ಡ್ / ಮಾರ್ಕ್ ವುಡ್, ಯಶ್ ಠಾಕೂರ್, ರವಿ ಬಿಷ್ಣೋಯಿ, ಜಯ್ದೇವ್ ಉನಾದ್ಕತ್.