Site icon Vistara News

IPL 2023: ಐಪಿಎಲ್​ನಲ್ಲಿ ದಾಖಲೆ ಬರೆಯಲು ಸಜ್ಜಾದ ಮಹೇಂದ್ರ ಸಿಂಗ್​ ಧೋನಿ

Dwayne Bravo hints that Dhoni will play next year as well

ಅಹಮದಾಬಾದ್​: ಶುಕ್ರವಾರ ಆರಂಭಗೊಳ್ಳಲಿರುವ ಬಹುನಿರೀಕ್ಷಿತ 16ನೇ ಆವೃತ್ತಿಯ ಐಪಿಎಲ್​ನ(IPL 2023) ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಗುಜರಾತ್​ ಟೈಟಾನ್ಸ್​ ಸೆಣಸಾಟ ನಡೆಸಲಿದೆ. ಈ ಬಾರಿಯ ಐಪಿಎಲ್​ ಬಳಿಕ ಧೋನಿ(ms dhoni) ಅವರು ವಿದಾಯ ಹೇಳಲಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಿದಾಡಲಾರಂಭಿಸಿದೆ. ಆದರೆ ಈ ಬಗ್ಗೆ ಧೋನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಸದ್ಯಕ್ಕೆ ಧೋನಿ ಅವರು ಹಲವು ದಾಖಲೆಗಳನ್ನು ನಿರ್ಮಿಸುತ್ತ ಚಿತ್ತ ನೆಟ್ಟಿದ್ದಾರೆ.

5000 ರನ್ ಸನಿಹದಲ್ಲಿ ಧೋನಿ

ಕೂಲ್​ ಕ್ಯಾಪ್ಟನ್​ ಖ್ಯಾತಿಯ ಮಹೇಂದ್ರ ಸಿಂಗ್​ ಧೋನಿ ಅವರು ಈ ವರೆಗೆ 234 ಪಂದ್ಯಗಳಿಂದ 4978 ರನ್ ಗಳಿಸಿದ್ದಾರೆ. ಈ ಟೂರ್ನಿಯಲ್ಲಿ ಅವರು 22 ರನ್ ಗಳಿಸಿದರೆ 5 ಸಾವಿರ ರನ್ ಪೂರೈಸಿದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆ ಬರೆಯಲಿದ್ದಾರೆ. ಇದರ ಜತೆಗೆ 185 ರನ್ ಬಾರಿಸಿದರೆ ಆರ್‌ಸಿಬಿ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ (5162) ಅವರನ್ನು ಹಿಂದಿಕ್ಕಲಿದ್ದಾರೆ. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ 6ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

ಸಿಕ್ಸರ್ ದಾಖಲೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ದಾಖಲೆ ಯುನಿವರ್ಸ್​ ಬಾಸ್​ ಖ್ಯಾತಿಯ ವಿಂಡೀಸ್​ ಕ್ರಿಕೆಟಿಗ ಕ್ರಿಸ್​ ಗೇಲ್ ಹೆಸರಿನಲ್ಲಿದೆ ಅವರು 357 ಸಿಕ್ಸರ್​ಗಳನ್ನು ಬಾರಿಸಿ ಅಗ್ರ ಸ್ಥಾನದಲ್ಲಿದ್ದಾರೆ. ಸದ್ಯ ಧೋನಿ 229 ಸಿಕ್ಸರ್ ಸಿಡಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಬಾರಿ ಅವರು 23 ಸಿಕ್ಸ್ ಸಿಡಿಸಿದರೆ 250 ಸಿಕ್ಸರ್‌ ಕ್ಲಬ್​ಗೆ ಸೇರುವ ಜತೆಗೆ ಎಬಿಡಿ ಅವರ ದಾಖಲೆಯನ್ನು ಮುರಿಯಲಿದ್ದಾರೆ ಎಬಿಡಿ 251 ಸಿಕ್ಸರ್​ ಬಾರಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ 240 ಸಿಕ್ಸರ್ ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ ಅವರಿಗೂ ಎಬಿಡಿ ಅವರ ದಾಖಲೆ ಮುರಿಯುವ ಅವಕಾಶವಿದೆ.

ಇದನ್ನೂ ಓದಿ IPL 2023: ಐಪಿಎಲ್​ನಲ್ಲಿ ಹಲವು ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್​ ಕೊಹ್ಲಿ

250ನೇ ಐಪಿಎಲ್‌ ಪಂದ್ಯ

ಐಪಿಎಲ್​ನ ಇದುವರೆಗಿನ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯವನ್ನಾಡಿದ ದಾಖಲೆ ಧೋನಿ ಹೆಸರಿನಲ್ಲಿದೆ. ಸದ್ಯ ಅವರು 234 ಪಂದ್ಯಗಳನ್ನಾಡಿದ್ದಾರೆ. ಈ ಬಾರಿ ಅವರು 16 ಪಂದ್ಯಗಳಲ್ಲಿ ಆಡಿದರೆ 250 ಪಂದ್ಯಗಳನ್ನು ಪೂರೈಸಿದ ಮೊದಲ ಆಟಗಾರ ಎಂಬ ಮೈಲುಗಲ್ಲು ಸ್ಥಾಪಿಸಲಿದ್ದಾರೆ. ಆರ್​ಸಿಬಿ ಆಟಗಾರ ದಿನೇಶ್​ ಕಾರ್ತಿಕ್​ 229 ಪಂದ್ಯಗಳನ್ನಾಡಿ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಈ ಬಾರಿಯೂ ಅವರು ಆಡುತ್ತಿರುವ ಕಾರಣ ಪಂದ್ಯಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ.

Exit mobile version