ಬೆಂಗಳೂರು: ಕಾಲಿನ ಮೂಳೆ ಮುರಿತದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರು 2023ರ ಐಪಿಎಲ್(IPL 2023 ) ಟೂರ್ನಿಯಲ್ಲಿ ಆರ್ಸಿಬಿ ಪರ ಕಣಕ್ಕಿಳಿಯಲಿದ್ದಾರ ಎಂಬ ಪ್ರಶ್ನೆಗೆ ತಂಡದ ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕ ಮೈಕ್ ಹೆಸ್ಸನ್ ಉತ್ತರಿಸಿದ್ದು, ಮ್ಯಾಕ್ಸ್‌ವೆಲ್ ಟೂರ್ನಿಗೂ ಮುನ್ನವೇ ತಂಡ ಸೇರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬುಧವಾರ ಆರ್‌ಸಿಬಿಯ ಟ್ವಿಟರ್ ಖಾತೆಯಲ್ಲಿ ವಿಡಿಯೊ ಮೂಲಕ ಮಾತನಾಡಿದ ಹೆಸ್ಸನ್, “ಗ್ಲೆನ್ ಮ್ಯಾಕ್ಸ್‌ವೆಲ್ ಬಗ್ಗೆ ಕಾಳಜಿ ಇದೆ, ಕಾಲು ನೋವಿನಿಂದ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇವೆ. ಅವರು ಮುಂದಿನ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ತಂಡಕ್ಕೆ ಮರಳಲಿದ್ದಾರೆ ಎಂಬ ಮಾಹಿತಿ ನಮಗೆ ಇದೆ” ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ಇದ್ದಂತಹ ದೊಡ್ಡ ಚಿಂತೆಯನ್ನು ಹೋಗಲಾಡಿಸಿದ್ದಾರೆ. ಮ್ಯಾಕ್ಸ್‌ವೆಲ್ ಕಳೆದ ಶನಿವಾರ ಮೆಲ್ಬೋರ್ನ್ನಲ್ಲಿ ನಡೆದ ಗೆಳೆಯನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದರು.
ಡಿಸೆಂಬರ್ನಲ್ಲಿ ನಡೆಯಲಿರುವ ಆಟಗಾರರ ಮಿನಿ ಹರಾಜು ಪ್ರಕ್ರಿಯೆಗೆ ಸಿದ್ಧವಾಗಿರುವ ಆರ್ಸಿಬಿ, ತಂಡದಲ್ಲಿ ಉಳಿಸಿಕೊಂಡಿರುವ ಮತ್ತು ಕೈಬಿಟ್ಟಿರುವ ಆಟಗಾರರ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಉಳಿಸಿಕೊಂಡಿರುವ ಆಟಗಾರರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಶುಯಾಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವಾನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರಣ್ ಶರ್ಮಾ, ಮಹಿಪಾಲ್ ಲಾಮ್ರೋರ್, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್‌ವುಡ್, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್.
ಬಿಡುಗಡೆಯಾದ ಆಟಗಾರರು: ಜೇಸನ್ ಬೆಹ್ರೆಂಡಾರ್ಫ್, ಅನೀಶ್ವರ್ ಗೌತಮ್, ಚಾಮ ಮಿಲಿಂದ್, ಲವ್‌ನೀತ್ ಸಿಸೋಡಿಯಾ, ಶೆರ್ಫಾನ್ ರುದರ್‌ಫೋರ್ಡ್.
ಉಳಿಕೆ ಮೊತ್ತ: 8.75 ಕೋಟಿ ರೂಪಾಯಿ
ಉಳಿಕೆ ವಿದೇಶಿ ಕೋಟಾ: ಎರಡು
ಟ್ರೇಡಿಂಗ್ ಮೂಲಕ ಪಡೆದುಕೊಂಡ ಆಟಗಾರರು: ಇಲ್ಲ
ಇದನ್ನೂ ಓದಿ | IPL 2023 | ಫ್ರಾಂಚೈಸಿಗಳಿಂದ ಬಿಡುಗಡೆಗೊಂಡ, ಉಳಿದುಕೊಂಡ ಆಟಗಾರರ ಪಟ್ಟಿ ಇಂತಿದೆ