ಮುಂಬಯಿ: ಭಾರತದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ (IPL 2023)ನ ಆಟಗಾರರ ಮಿನಿ ಹರಾಜಿನ ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಅದರಂತೆ ಮಿನಿ ಹರಾಜು ಪ್ರಕ್ರಿಯೆ ಭಾರತದಲ್ಲಿಯೇ ನಡೆಯಲಿದೆ ಎಂದು ತಿಳಿದು ಬಂದಿದೆ. ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ಐಪಿಎಲ್ ಮಿನಿ ಹರಾಜು ನಡೆಯಲಿದೆ ಎಂದು ವರದಿಯಾಗಿದೆ.
ಈ ಮೊದಲು ಮಿನಿ ಹರಾಜು ಪ್ರಕ್ರಿಯೆಯನ್ನು ಬಿಸಿಸಿಐ ಇಸ್ತಾಂಬುಲ್ನಲ್ಲಿ ನಡೆಸಲು ಯೋಚಿಸಿತ್ತು. ಇದಕ್ಕೆ ಎಲ್ಲಡೆ ವಿರೋಧ ವ್ಯಕ್ತವಾಗಿ ಬಾಯ್ಕಾಟ್ ಐಪಿಎಲ್ ಎಂಬ ಕೂಗು ಕೇಳಿಬಂದಿತ್ತು. ಆದರೆ ಈ ಯೋಜನೆಯನ್ನು ಈಗ ಕೈಬಿಡಲಾಗಿದೆ ಎಂದು ವರದಿಯಾಗಿದೆ. ಏತನ್ಮಧ್ಯೆ, ಫ್ರಾಂಚೈಸಿಗಳ ಪರ್ಸ್ ಬಗ್ಗೆಯೂ ಬಿಗ್ ಅಪ್ಡೇಟ್ ಹೊರಬಿದ್ದಿದ್ದು, ಮಾಧ್ಯಮ ವರದಿಗಳ ಪ್ರಕಾರ ಪ್ರತಿ ತಂಡದ ಬಳಿ ಉಳಿದಿರುವ ಪರ್ಸ್ಗೆ ಹೆಚ್ಚುವರಿಯಾಗಿ ಖರ್ಚು ಮಾಡಲು 5 ಕೋಟಿ ರೂ. ನೀಡಲಾಗುವುದು ಎಂದು ತಿಳಿದು ಬಂದಿದೆ.
ಎಲ್ಲ 10 ಫ್ರಾಂಚೈಸಿಗಳು ಪ್ರಸ್ತುತ ಬಿಸಿಸಿಐ ನೀಡಿದ ಗಡುವಿನ ಮೇಲೆ ಕಾರ್ಯನಿರ್ವಹಿಸುತ್ತಿವೆ. ಅದರಂತೆ ನವೆಂಬರ್ 15 ರೊಳಗೆ ತಂಡದಲ್ಲಿ ಉಳಿಸಿಕೊಳ್ಳುವ ಮತ್ತು ಕೈಬಿಡುವ ಆಟಗಾರರ ಪಟ್ಟಿ ಸಿದ್ಧಪಡಿಸಿ ಫ್ರಾಂಚೈಸಿಗಳು ಮಂಡಳಿಗೆ ನೀಡಬೇಕಿದೆ.
ಇದನ್ನೂ ಓದಿ | T20 World Cup | ವಿರಾಟ್ ಕೊಹ್ಲಿಗೆ ಗಾಯ; ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಅನುಮಾನ?