ಮುಂಬಯಿ: 16ನೇ ಆವೃತ್ತಿಯ ಐಪಿಎಲ್ನಲ್ಲಿ(IPL 2023) ಬಳಸಲಾಗುತ್ತಿರುವ ಇಂಪ್ಯಾಕ್ಟ್ ಪ್ಲೇಯರ್ ಹೊಸ ನಿಯಮದ ಕುರಿತು ಕ್ರಿಕೆಟ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ ಬೆನ್ನಲೇ, ಬಿಸಿಸಿಐ ಎಲ್ಲ ತಂಡಗಳ ನಾಯಕರೊಂದಿಗೆ ಈ ನಿಯಮದ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಮನವಿ ಮಾಡಿದೆ. ಆಸ್ಟ್ರೇಲಿಯದ ಪ್ರತಿಷ್ಠಿತ ಬಿಗ್‌ಬಾಶ್ ಟಿ20 ಲೀಗ್‌ನಲ್ಲಿ ಚಾಲ್ತಿಯಲ್ಲಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಈ ಬಾರಿ ಐಪಿಎಲ್ನಲ್ಲಿಯೂ ಬಿಸಿಸಿಐ ಪರಿಚಯಿಸಿತ್ತು. ಸದ್ಯ ಈ ನಿಯಮವನ್ನು ಎಲ್ಲ ತಂಡಗಳು ಬಳಸಿಕೊಂಡಿದೆ.
ಇದೀಗ ಐಪಿಎಲ್ ಆರಂಭಕೊಂಡು ಒಂದು ವಾರ ಕಳೆದಿದೆ. ಎಲ್ಲ ತಂಡಗಳು ಒಂದು ಸುತ್ತಿನ ಪಂದ್ಯಗಳನ್ನು ಆಡಿ ಮುಗಿಸಿವೆ. ನೂತನ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಬಿಸಿಸಿಐ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ. ಐಪಿಎಲ್‌ನ ಎಲ್ಲ ಫ್ರಾಂಚೈಸಿಗಳು ಮತ್ತು ತಂಡದ ನಾಯಕರಿಗೆ ತಮ್ಮ ಪ್ರತಿಕ್ರಿಯೆ ನೀಡುವಂತೆ ಬಿಸಿಸಿಐ ಮನವಿ ಮಾಡಿದೆ. ಫ್ರಾಂಚೈಸಿ ಮತ್ತು ನಾಯಕರ ಅಭಿಪ್ರಾಯವನ್ನು ಪರಿಗಣಿಸಿ ಮುಂದಿನ ದಿನಗಳಲ್ಲಿ ಈ ನಿಯಮವನ್ನು ಮುಂದುವರಿಸಬೇಕೆ ಅಥವಾ ಈ ನಿಯವನ್ನು ಕೈ ಬಿಡಬೇಕೆ ಎಂದು ನಿರ್ಧಾರ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ IPL 2023: ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಪಿಚ್ ರಿಪೋರ್ಟ್
ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಐಪಿಎಲ್ನಲ್ಲಿ ಜಾರಿಗೊಳಿಸುವ ಮುನ್ನ ಆಸ್ಟ್ರೇಲಿಯಾದ ಮಾಜಿ ಆಟಗಾರ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಈ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ನಿಯಮದಿಂದಾಗಿ ಆಲ್ರೌಂಡರ್ಗಳ ಮೌಲ್ಯ ಕಡಿಮೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು. ಜತೆಗೆ ಕ್ರಿಕೆಟ್ನ ನೈಜ ಸ್ವರೂಪ ಕಳೆದುಕೊಳ್ಳಲಿದೆ ಎಂದು ಹೇಳಿದ್ದರು. ಸದ್ಯ ಇದೇ ಮಾತನ್ನು ಈಗ ಭಾರತದಲ್ಲಿ ಕ್ರಿಕೆಟ್ ಅಭಿಮಾನಿಗಳು ಕೂಡ ಹೇಳುತ್ತಿದ್ದಾರೆ. ಹೀಗಾಗಿ ಬಿಸಿಸಿಐ ಈ ನಿಯಮದ ಕುರಿತು ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ.
ಇದನ್ನೂ ಓದಿ IPL 2023: ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಪಿಚ್ ರಿಪೋರ್ಟ್
“ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ನಾವು ಇಲ್ಲಿಯವರೆಗೆ ವಿಶ್ರ ಪ್ರತಿಕ್ರಿಯೆಯನ್ನು ಸ್ವೀಕರಿಸಿದ್ದೇವೆ. ಈ ನಿಯಮದಿಂದ ತಂಡಗಳಿಗೆ ಹೆಚ್ಚಿನ ಆಯ್ಕೆಯನ್ನು ನೀಡುತ್ತದೆ. ಎದುರಾಳಿ ತಂಡಕ್ಕೆ ಕೊನೆಯ ಕ್ಷಣದವರೆಗೂ ಯಾರು ಬರುತ್ತಾರೆ ಮತ್ತು ಯಾವ ರೀತಿಯ ಪ್ಲಾನಿಂಗ್ ಮಾಡಬೇಕು ಎಂಬುದು ತಿಳಿದಿಲ್ಲ. ನಾವು ಈ ನಿಯಮವನ್ನು ಬಲವಂತವಾಗಿ ಯಾವ ತಂಡದ ಮೇಲು ಹೇರುವುದಿಲ್ಲ, ಎಲ್ಲರ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ. ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏನಿದು ಇಂಪ್ಯಾಕ್ಟ್ ಪ್ಲೇಯರ್
ಆಸ್ಟ್ರೇಲಿಯದ ಪ್ರತಿಷ್ಠಿತ ಬಿಗ್‌ಬಾಶ್ ಟಿ20 ಲೀಗ್‌ನಲ್ಲಿ ಚಾಲ್ತಿಯಲ್ಲಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಈ ಬಾರಿ ಐಪಿಎಲ್ನಲ್ಲಿಯೂ ಪರಿಚಯಿಸಲಾಗಿದೆ. ಈ ನಿಯಮದ ಪ್ರಮಾರ ತಂಡವೊಂದು ಆಡುತ್ತಿರುವಾಗ ಪರಿಸ್ಥಿತಿಗೆ ಅನುಗುಣವಾಗಿ ಒಬ್ಬ ಬದಲಿ ಆಟಗಾರನನ್ನು ಕಣಕ್ಕಿಳಿಸಬಹುದು. ಪ್ಲೇಯಿಂಗ್ ಇಲೆವನ್ ಬಳಗದಿಂದ ಹೊರಗಿರುವ ಒಬ್ಬ ಆಟಗಾರನನ್ನು ತಂಡಕ್ಕೆ ಆಡುವ ಬಳಗಕ್ಕೆ ಸೇರಿಸಿಕೊಳ್ಳಬಹುದು. ಇನಿಂಗ್ಸ್ ಆರಂಭಕ್ಕೂ ಮುನ್ನ, ಒಂದು ಓವರ್ ಮುಗಿದ ಮೇಲೆ, ವಿಕೆಟ್ ಬಿದ್ದಾಗ, ಓವರ್‌ಗಳ ನಡುವಿನ ವಿರಾಮದಲ್ಲಿ ಈ ನಿಯಮವನ್ನು ಬಳಸಬಹುದು. ಈ ನಿಯಮದನ್ವಯ ಒಬ್ಬ ಬದಲಿ ಆಟಗಾರನನ್ನು ಮಾತ್ರ ಬದಲಿಸಲು ಅವಕಾಶವಿರಲಿದೆ.