ಚೆನ್ನೈ: 16ನೇ ಆವೃತ್ತಿಯ ಐಪಿಎಲ್ನ(IPL 2023) 17ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಚೆನ್ನೈಯ ಚೆಪಾಕ್ ಮೈದಾನದಲ್ಲಿ ನಡೆಯಲಿದೆ. ಆದರೆ ಈ ಪಂದ್ಯ ಆರಂಭಕ್ಕೆ ಮುನ್ನವೇ ಚೆನ್ನೈ ತಂಡವನ್ನು ಬ್ಯಾನ್ ಮಾಡಬೇಕೆಂಬ ಕೂಗು ಕೇಳಿ ಬಂದಿದೆ.
ಪಿಎಂಕೆ ಪಕ್ಷದ ಶಾಸಕರಾಗಿರುವ ಎಸ್. ಪಿ ವೆಂಕಟೇಶ್ವರನ್ ಅವರು ಈ ಬಾರಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ. “ಚೆನ್ನೈ ಸೂಪರ್ ಕಿಂಗ್ಸ್ ತಮಿಳುನಾಡು ತಂಡ ಎನ್ನುವಂತೆ ಬ್ರಾಂಡ್ ಆಗಿದ್ದರೂ, 2023ರ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದಲ್ಲಿ ರಾಜ್ಯದ ಆಟಗಾರರಿಗೆ ಸ್ಥಾನ ನೀಡಿಲ್ಲ. ಇದು ತವರಿನ ಕ್ರಿಕೆಟ್ಗೆ ಪ್ರತಿಭೆಗಳಿಗೆ ಮಾಡಿದ ಅನ್ಯಾಯ ಆದ್ದರಿಂದ ಈ ತಂಡವನ್ನು ಬ್ಯಾನ್ ಮಾಡಬೇಕು’ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಬುಧವಾರ ಇಲ್ಲಿನ ವಿಧಾನಸಭೆಯಲ್ಲಿ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಇಲಾಖೆಗೆ ಅನುದಾನದ ಬೇಡಿಕೆಯ ಮೇಲಿನ ಚರ್ಚೆಯಲ್ಲಿ ಈ ವಿಷಯನ್ನು ಪ್ರಸ್ತಾಪಿಸಿ ಶಾಸಕರು ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. “ಇದು ತಮಿಳುನಾಡಿದ ತಂಡವೆಂದು ಜಾಹೀರಾತು ನೀಡುವ ಮೂಲಕ ನಮ್ಮ ಜನರಿಂದ ಫ್ರಾಂಚೈಸಿ ಲಾಭ ಮಾಡಿಕೊಳ್ಳುತ್ತಿದೆ. ಆದರೆ ನಮ್ಮ ರಾಜ್ಯ ಹಲವು ಪ್ರತಿಭಾವಂತ ಆಟಗಾರರನ್ನು ಹೋಮದಿದ್ದರೂ, ಅವರನ್ನು ಕಡೆಗಣಿಸಿದೆ. ಹೀಗಾಗಿ ತಂಡಕ್ಕೆ ನಿಷೇಧ ಹೇರಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ IPL 2023: ಮುಂಬೈಗೆ ಮೊದಲ ಗೆಲುವು; ಯಾವ ತಂಡಕ್ಕೆ ಎಷ್ಟು ಅಂಕ? ಅಂಕಪಟ್ಟಿ ಹೇಗಿದೆ?
ಕಳೆದ ವರ್ಷವೂ ಚೆನ್ನೈ ತಂಡದ ವಿರುದ್ಧ ಆಕ್ಷೇಪ ಕೇಳಿಬಂದಿತ್ತು. ಶ್ರೀಲಂಕಾ ಆಟಗಾರರನ್ನು ಆಡಿಸಿದಕ್ಕಾಗಿ ತಮಿಳರಿಗೆ ಮಾಡಿದ ಅವಮಾನ ಎಂಬ ಆರೋಪವೂ ಕೇಳಿಬಂದಿತ್ತು. ಇದೀಗ ಸ್ಥಳೀಯ ಆಟಗಾರರಿಗೆ ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ಮತ್ತೆ ಚೆನ್ನೈ ತಂಡದ ವಿರುದ್ದ ಅಪಸ್ವರ ಕೇಳಿಬಂದಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ: ಡೆವೊನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಎಂ.ಎಸ್ ಧೋನಿ (ನಾಯಕ), ಶಿವಂ ದುಬೆ, ಡ್ವೇನ್ ಪ್ರಿಟೋರಿಯಸ್, ದೀಪಕ್ ಚಾಹರ್, ಮಿಚೆಲ್ ಸ್ಯಾಂಟ್ನರ್, ಸಿಸಾಂಡ ಮಗಾಲ, ತುಷಾರ್ ದೇಶಪಾಂಡೆ, ಅಂಬಟಿ ರಾಯುಡು, ಆಕಾಶ್ ಸಿಂಗ್, ಮೊಯಿನ್ ಅಲಿ, ಬೆನ್ ಸ್ಟೋಕ್ಸ್, ನಿಶಾಂತ್ ಸಿಂಧು, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಭಗತ್ ವರ್ಮಾ, ಮಹೀಶ್ ತೀಕ್ಷಣ, ಮಥೀಶ ಪತಿರಾನಾ, ಸುಬ್ರಾಂಶು ಸೇನಾಪತಿ, ಎಸ್ ಹಂಗರ್ಗೇಕರ್.