Site icon Vistara News

IPL 2023: ಚೆನ್ನೈ ಸವಾಲು ಮೀರಿ ನಿಂತಿತೇ ಮುಂಬೈ ಇಂಡಿಯನ್ಸ್​

IPL 2023: Mumbai Indians stand beyond the challenge of Chennai

IPL 2023: Mumbai Indians stand beyond the challenge of Chennai

ಮುಂಬಯಿ: ಆರ್​ಸಿಬಿ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿಯೇ ಮುಗ್ಗರಿಸಿದ ಐಪಿಎಲ್​ನ ಅತ್ಯಂತ ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್​ ಇದೀಗ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ತವರಿನಲ್ಲಿ ನಡೆಯುವ ಈ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಸವಾಲನ್ನು ಮೆಟ್ಟಿ ನಿಂತಿತೇ ಎಂಬುದು ಈ ಪಂದ್ಯ ಕುತೂಹಲವಾಗಿದೆ. 2013ರಿಂದೀಚೆ ತನ್ನ ಆರಂಭಿಕ ಪಂದ್ಯವನ್ನು ಕಳೆದುಕೊಳ್ಳುತ್ತ ಬಂದ ದಾಖಲೆ ಹೊಂದಿರುವ ರೋಹಿತ್​ ಪಡೆ ಆ ನಂತರ ಕಪ್​ ಗೆಲ್ಲುವ ಸಂಪ್ರದಾಯ ಹೊಂದಿದೆ. ಹೀಗಾಗಿ ಈ ಬಾರಿಯೂ ಕಪ್​ ಗೆಲ್ಲಲಿದೆ ಎನ್ನುವುದು ಮುಂಬೈ ಅಭಿಮಾನಿಗಳ ಆಶಯವಾಗಿದೆ.

ವಾಂಖೇಡೆ ಕ್ರೀಡಾಂಗಣದ ಪಿಚ್​ ಬ್ಯಾಟಿಂಗ್​ ಟ್ರಾಕ್ಯ್​ ಆಗಿರುವುದರಿಂದ ಈ ಪಂದ್ಯವನ್ನು ದೊಡ್ಡ ಮೊತ್ತದ ಮೇಲಾಟ ಎಂದು ನಿರೀಕ್ಷಿಸಬಹುದು. ಮುಂಬೈ ಇಂಡಿಯನ್ಸ್​ ಪರ ರೋಹಿತ್‌, ಇಶಾನ್‌ ಕಿಶನ್‌, ಗ್ರೀನ್‌, ಸೂರ್ಯಕುಮಾರ್‌ ಯಾದವ್​ ಬ್ಯಾಟಿಂಗ್‌ನಲ್ಲಿ ಕ್ಲಿಕ್‌ ಆಗಬೇಕಿದೆ. ಕಳೆದ ಆರ್​ಸಿಬಿದ ಪಂದ್ಯದಲ್ಲಿ ವಿರುದ್ಧ ಇವರೆಲ್ಲ ಘೋರ ವೈಫಲ್ಯ ಕಂಡಿದ್ದರು. ತಿಲಕ್‌ ವರ್ಮ ಏಕಾಂಗಿ ಹೋರಾಟ ನಡೆಸದೇ ಹೋಗಿದ್ದರೆ ತಂಡ ನೂರರ ಗಟಿ ಕೂಡ ದಾಟುವುದು ಕಷ್ಟಕರವಾಗುತ್ತಿತ್ತು. ಆದ್ದರಿಂದ ಈ ಪಂದ್ಯದಲ್ಲಿ ಸಂಘಟಿತ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಜೋಫ್ರಾ ಆರ್ಚರ್‌, ಅರ್ಷದ್‌ ಖಾನ್‌, ಬೆಹ್ರೆಂಡಾರ್ಫ್‌ ಹಿಡಿತ ಸಾಧಿಸುವುದು ಮುಖ್ಯ.

ಇದನ್ನೂ ಓದಿ IPL 2023: ರಜತ್​ ಪಾಟೀದಾರ್ ಬದಲು ಆರ್​ಸಿಬಿ ಸೇರಿದ ಕನ್ನಡಿಗ ವೈಶಾಖ್

ಚೆನ್ನೈ ಸೂಪರ್‌ ಕಿಂಗ್ಸ್‌ ಬಲಿಷ್ಠ ಬ್ಯಾಟಿಂಗ್​ ಪಡೆಯನ್ನೇ ಹೊಂದಿದೆ. ಋತುರಾಜ್‌ ಗಾಯಕ್ವಾಡ್‌ ಎರಡೂ ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿ ಎದುರಾಳಿ ಬೌಲರ್‌ಗಳನ್ನು ಕಾಡಿದ್ದರು. ಉಳಿದಂತೆ ಅಂಬಾಟಿ ರಾಯುಡು, ಮೊಯಿನ್​ ಅಲಿ, ಡೆವೋನ್ ಕಾನ್ವೆ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಧೋನಿ ಕೂಡ ಬಿರುಸಿನ ಬ್ಯಾಟಿಂಗ್​ ನಡೆಸಿ ತಂಡಕ್ಕೆ ದೊಡ್ಡ ಮೊತ್ತ ದಾಖಲಿಸುತ್ತಾರೆ. ಆದರೆ ತಂಡಕ್ಕೆ ಬೌಲಿಂಗ್​ನದ್ದೇ ಚಿಂತೆ. ಚೆನ್ನೈ ಪಾಳಯದಲ್ಲಿ ಬೌಲರ್​ಗಳು ಅತಿಯಾದ ವೈಡ್​ ಮತ್ತು ನೋಬಾಲ್ ಎಸೆಯುತ್ತಿರುವುದು ತಂಡದ ಸೋಲಿಗೆ ಪ್ರಮುಖ ಕಾರಣ. ಸ್ವತಃ ಈ ಮಾತನ್ನು ನಾಯಕ ಧೋನಿಯೇ ಹೇಳಿದ್ದಾರೆ. ಜತೆಗೆ ತಂಡದ ಬೌಲರ್​ಗಳಿಗೆ ಇದೇ ರೀತಿ ಬೌಲಿಂಗ್​ ಮಾಡಿದರೆ ಬೇರೆ ನಾಯಕನ ಅಡಿಯಲ್ಲಿ ನೀವು ಆಡಬೇಕಾದಿತು ಎಂದು ಈಗಾಗಲೇ ಧೋನಿ ಬಲವಾದ ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಚಹರ್‌, ದೇಶಪಾಂಡೆ, ಹಂಗಗೇಕರ್‌ ಉತ್ತಮ ಬೌಲಿಂಗ್​ ನಡೆಸಬೇಕಿದೆ. ಒಂದೊಮ್ಮೆ ಈ ಪಂದ್ಯದಲ್ಲಿಯೂ ಅವರು ಕಳಪೆ ಬೌಲಿಂಗ್​ ನಡೆಸಿದರೆ ಧೋನಿ ಯಾವ ನಿರ್ಧಾರ ಕೈಗೊಳ್ಳಿದ್ದಾರೆ ಎಂದು ಕಾದು ನೋಡಬೇಕಿದೆ.

Exit mobile version