ಚೆನ್ನೈ: ಲಕ್ನೋ ಸೂಪರ್ ಜೈಂಟ್ಸ್ ತಂಡ ಬುಧವಾರ ರಾತ್ರಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಗೆದ್ದ ಮುಂಬೈ ಕ್ವಾಲಿಫೈಯರ್ ಪ್ರವೇಶ ಪಡೆದಿದೆ. ಪಂದ್ಯದ ಬಳಿಕ ಮುಂಬೈ ತಂಡದ ಮೂವರು ಆಟಗಾರರು ಮಾಡಿದ ಒಂದು ಪೋಸ್ಟ್ ಇದೀಗ ಭಾರಿ ವೈರಲ್ ಆಗಿದೆ.
ಮುಂಬೈ ತಂಡದ ಆಟಗಾರರಾದ ಸಂದೀಪ್ ವಾರಿಯರ್, ವಿಷ್ಣು ವಿನೋದ್ ಮತ್ತು ಕುಮಾರ್ ಕಾರ್ತಿಕೇಯ ಅವರು ಮೂರು ಮಾವಿನ ಹಣ್ಣುಗಳನ್ನು ಇಟ್ಟು ಲಕ್ನೋ ತಂಡದ ಬೌಲರ್ ಅಫಘಾನಿಸ್ತಾನದ ನವೀನ್ ಉಲ್-ಹಕ್ ಅವರನ್ನು ಟ್ರೋಲ್ ಮಾಡಿದ್ದಾರೆ. ಮಹಾತ್ಮ ಗಾಂಧೀಜಿ ಅವರು ಹೇಳಿದ ಮೂರು ಕೋತಿಗಳ ಸಣ್ಣ ನೀತಿ ಕಥೆಯಾದ ಕೆಟ್ಟದನ್ನು ಕೇಳಬೇಡ, ಕೆಟ್ಟದ್ದನ್ನು ಮಾತನಾಡಬೇಡ, ಕೆಟ್ಟದ್ದನ್ನು ನೋಡಬೇಡ ಎಂಬಂತೆ ಮುಂಬೈ ತಂಡ ಈ ಮೂವರು ಆಟಗಾರು ಟೇಬಲ್ನಲ್ಲಿ ಮೂರು ಮಾವಿನ ಹಣ್ಣು ಇಟ್ಟು ನವೀನ್ ಉಲ್ ಹಕ್ ಅವರನ್ನು ಪರೋಕ್ಷವಾಗಿ ಟ್ರೋಲ್ ಮಾಡಿದ್ದಾರೆ. ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಇದನ್ನು ಡಿಲೀಟ್ ಮಾಡಿದ್ದಾರೆ.
ಇದನ್ನೂ ಓದಿ IPL 2023 : ಮುಂಬಯಿ ವಿರುದ್ಧ 81 ರನ್ ಹೀನಾಯ ಸೋಲು, ಲಕ್ನೊ ತಂಡ ಐಪಿಎಲ್ನಿಂದ ಎಲಿಮಿನೇಟ್
ಮುಂಬೈ ತಂಡ ಈ ಮೂವರು ಆಟಗಾರರು ಹೀಗೆ ಮಾಡಲು ಒಂದು ಕಾರಣವಿದೆ. ಹೌದು ಕೆಲ ದಿನಗಳ ಹಿಂದೆ ಮುಂಬೈ ಮತ್ತು ಆರ್ಸಿಬಿ ಪಂದ್ಯದ ವೇಳೆ ನವೀನ್ ಉಲ್ ಹಕ್ ಅವರು ವಿರಾಟ್ ಕೊಹ್ಲಿಯನ್ನು ಟ್ರೋಲ್ ಮಾಡಲು ಮಾವಿನ ಹಣ್ಣಿನ ಫೋಟೊ ಹಂಚಿಕೊಂಡು ಬಹಳ ಸಿಹಿಯಾಗಿದೆ ಎಂದು ಸ್ಟೋರಿ ಹಾಕಿದ್ದರು. ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಆಟಗಾರರ ವಿಕೆಟ್ ಪಡೆದಾಗಲು ನವೀನ್ ಉಲ್ ಹಕ್ ಅವರು ಕಿವಿಗೆ ಕೈ ಬೆರಳು ಮುಚ್ಚಿಕೊಂಡು ಸಂಭ್ರಮಾಚರಿಸಿದರು. ಈ ಎಲ್ಲ ಕಾರಣದಿಂದ ಮುಂಬೈ ಆಟಗಾರರು ಲಕ್ನೋ ತಮಡವನ್ನು ಮಣಿಸಿದ ಬಳಿಕ ಟ್ರೋಲ್ ಮಾಡಿದ್ದರೆ.
The sweet mangoes! pic.twitter.com/BM0VCHULXV
— Mufaddal Vohra (@mufaddal_vohra) May 24, 2023
ಪಂದ್ಯ ಸೋತ ಲಕ್ನೋ
ಚೆನ್ನೈಯ ಎಂಎ ಚಿದಂಬರಂ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 182 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಲಕ್ನೊ ತಂಡ 16.3 ಓವರ್ಗಳಲ್ಲಿ 101 ರನ್ ಬಾರಿಸಿ ಆಲ್ಔಟ್ ಆಯಿತು.