ಲಖನೌ: ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿಯ ನಡುವಿನ ಗಲಾಟೆಯ ವೇಳೆ ಮುನ್ನೆಲೆಗೆ ಬಂದವರು ಲಕ್ನೊ ಸೂಪರ್ ಜೈಂಟ್ಸ್ ತಂಡದ ವೇಗದ ಬೌಲರ್ ನವಿನ್ ಉಲ್ ಹಕ್. ಅಪಘಾನಿಸ್ತಾನದ ಈ ಯುವ ಬೌಲರ್ ವಿರಾಟ್ ಕೊಹ್ಲಿಯ ಜತೆ ಮೈದಾನದಲ್ಲಿ ಹಾಗೂ ಪಂದ್ಯದ ಬಳಿಕವೂ ಜಗಳವಾಡಿದ್ದರು. ಶತ್ರುವಿನ ಶತ್ರು ಮಿತ್ರ ಎಂಬಂತೆ ಆ ಬಳಿಕ ಗಂಭೀರ್ ಹಾಗೂ ನವಿನ್ ಸಾಕಷ್ಟು ಹತ್ತಿರವಾಗಿದ್ದರು. ಕೊಹ್ಲಿಯನ್ನು ವಿರೋಧಿಸಲು ತಮಗೊಬ್ಬರ ನೆರವು ಇದೆ ಎಂದು ಗೊತ್ತಾಗಿದ್ದೇ ತಂಡ ನವಿನ್ ಉಲ್ ಹಕ್, ಸೋಶಿಯಲ್ ಮೀಡಿಯಾಗಳಲ್ಲೂ ಕೊಹ್ಲಿಯನ್ನು ಕೆಣಕುತ್ತಿದ್ದರು. ಕೊಹ್ಲಿ ಔಟಾದಾದ ಮಾವಿನ ಹಣ್ಣಿ ಚಿತ್ರ ಹಾಕಿ ಸಂಭ್ರಮಿಸಿದ್ದು, ಆರ್ಸಿಬಿ ಲೀಗ್ ಹಂತದಲ್ಲೇ ಹೊರ ಬಿದ್ದಾಗ ಇನ್ಸ್ಟಾಗ್ರಾಮ್ನಲ್ಲಿ ತಮಾಷೆ ಮಾಡಿದ್ದೆಲ್ಲವೂ ಸುದ್ದಿಯಾಗಿತ್ತು. ಇದೀಗ ಲಕ್ನೊ ತಂಡದ ಐಪಿಎಲ್ ಅಭಿಯಾನ ಕೊನೆಗೊಂಡಿದೆ. ಈ ರೀತಿಯಾಗಿ ವಾಪಸ್ ತೆರಳಲು ಮುಂದಾಗಿರು ಅವರು ಮೆಂಟರ್ ಗೌತಮ್ ಗಂಭೀರ್ ಅವರನ್ನು ಬಾಯ್ತುಂಬಾ ಹೊಗಳಿದ್ದಾರೆ.
“ಮಾರ್ಗದರ್ಶಕ, ತರಬೇತುದಾರ, ಆಟಗಾರ ಅಥವಾ ಯಾರಾದರೂ ನಾನು ಮೈದಾನದಲ್ಲಿ ಪ್ರತಿಯೊಬ್ಬನ ಪರವಾಗಿ ನಿಲ್ಲುತ್ತೇನೆ. ಪ್ರತಿಯೊಬ್ಬರಿಂದಲೂ ನಾನು ಅದನ್ನೇ ನಿರೀಕ್ಷಿಸುತ್ತೇನೆ. ಅಂತೆಯೇ ಗೌತಮ್ ಗಂಭೀರ್ ಭಾರತ ಕ್ರಿಕೆಟ್ನ ದಂತಕಥೆಯಾಗಿದ್ದಾರೆ. ಅವರಿಗೆ ಭಾರತದಲ್ಲಿ ಅಪಾರ ಗೌರವವಿದೆ. ಅವರು ಭಾರತೀಯ ಕ್ರಿಕೆಟ್ಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಒಬ್ಬ ಮಾರ್ಗದರ್ಶಕನಾಗಿ, ತರಬೇತುದಾರನಾಗಿ, ಕ್ರಿಕೆಟ್ ದಂತಕಥೆಯಾಗಿ ನಾನು ಅವರನ್ನು ತುಂಬಾ ಗೌರವಿಸುತ್ತೇನೆ. ಅವರಿಂದ ಅನೇಕ ವಿಷಯಗಳನ್ನು ಕಲಿತಿದ್ದೇನೆ. ಮೈದಾನದ ಒಳಗೆ ಮತ್ತು ಹೊರಗೆ ನನ್ನ ಕ್ರಿಕೆಟ್ ಅನ್ನು ನಾನು ನಿರ್ವಹಿಸಬೇಕು ಎಂಬುದನ್ನು ಅವರಿಂದ ಕಲಿತಿದ್ದೇನೆ ಎಂಬುದಾಗಿ ನವಿನ್ ಉಲ್ ಹಕ್ ಹೇಳಿದ್ದಾರೆ.
ನನ್ನ ವೈಯಕ್ತಿಕ ಪ್ರದರ್ಶನಕ್ಕೆ ಎರಡನೇ ಸ್ಥಾನ
ಮುಂಬೈ ವಿರುದ್ಧದ ಪಂದ್ಯದಲ್ಲಿ ನವೀನ್ 9.50ರ ಸರಾಸರಿಯಲ್ಲಿ 38 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಇದಲ್ಲದೆ, ಪ್ರಸ್ತುತ ಋತುವಿನಲ್ಲಿ ಫ್ರಾಂಚೈಸಿಗಾಗಿ ಆಡಿದ 8 ಪಂದ್ಯಗಳಲ್ಲಿ ವೇಗಿ 11 ವಿಕೆಟ್ಗಳನ್ನು ಪಡೆದಿದ್ದಾರೆ. ಆದರೆ ತಮ್ಮ ವೈಯಕ್ತಿಕ ಪ್ರದರ್ಶನಗಳಿಗಿಂತ ತಂಡಗಳ ಗೆಲುವುಗಳು ಮುಖ್ಯ ಎಂದು ನವೀನ್ ಒಪ್ಪಿಕೊಂಡಿದ್ದಾರೆ.
ಪ್ರಾಮಾಣಿಕವಾಗಿ ಹೇಳುವುದಾದರೆ, ಇದು ನನ್ನ ಉತ್ತಮ ಸೀಸನ್. ನಾವು ತಂಡವಾಗಿ ಇನ್ನೂ ಉತ್ತಮವಾಗಿ ಮಾಡಬಹುದಿತ್ತು. ವೈಯಕ್ತಿಕ ಪ್ರದರ್ಶನಗಳು ಲೆಕ್ಕಕ್ಕೆ ಬರುವುದಿಲ್ಲ. ಅಂತಿಯಮವಾಗಿ ಟ್ರೋಫಿಯನ್ನು ಗೆಲ್ಲುವುದು ನಮ್ಮ ತಂಡದ ಗುರಿಯಾಗಿತ್ತು. ನನ್ನ ವೈಯಕ್ತಿಕ ಪ್ರದರ್ಶನ ಎರಡನೇ ಸ್ಥಾನದಲ್ಲಿದೆ. ಇದು ನನಗೆ ಉತ್ತಮ ಋತುವಾಗಿತ್ತು, ನಾನು ಈ ಐಪಿಎಲ್ನಿಂದ ಕೆಲವು ವಿಷಯಗಳನ್ನು ಕಲಿತಿದ್ದೇನೆ, “ಎಂದು ಅವರು ನವಿನ್ ಹೇಳಿದ್ದಾರೆ.
ಇದನ್ನೂ ಓದಿ : IPL 2023 : ಎಲ್ಲ ಐಪಿಎಲ್ ಟೀಮ್ಗಿಂತ ಅಧಿಕ ಆದಾಯ ಗಳಿಸಿದ ಗುಜರಾತ್ ಟೈಟನ್ಸ್, ಹೇಗೆ ಸಾಧ್ಯ?
ಲಕ್ನೊ ಸೂಪರ್ ಜೈಂಟ್ಸ್ ತಂಡ ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ 82 ರನ್ಗಳ ಹೀನಾಯ ಸೋಲಿಗೆ ಒಳಗಾಗಿತ್ತು. ಮೇ 26ರಂದು ನಡೆಯಲಿರುವ ಕ್ವಾಲಿಫೈಯರ್ 2ರಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಹಾಗ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ನಡೆಯಲಿದೆ . ಐದು ಬಾರಿ ಪ್ರಶಸ್ತಿ ಗೆದ್ದಿರುವ ತಂಡಗಳು ಫೈನಲ್ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಗುರಿ ಹೊಂದಿದೆ.